ಹಿರಿಯ ನಟಿಗೆ ಅವಕಾಶ ಕೊಡಿಸುವುದಾಗಿ ವಂಚಿಸಿದ ನಿರ್ದೇಶಕ, ದೂರು ದಾಖಲು
ಸ್ಯಾಂಡಲ್ ವುಡ್ ನಿರ್ದೇಶಕನೋರ್ವ ಅವಕಾಶ ಕೊಡಿಸುವುದಾಗಿ ಹೇಳಿ ಸ್ಯಾಂಡಲ್ ವುಡ್ ಹಿರಿಯ ನಟಿಯಿಂದ ಲಕ್ಷಾಂತರ ರೂ ಹಣ ಪಡೆದುಕೊಂಡು ವಂಚಿಸಿದ್ದಾನೆ.

Published On :
ಬೆಂಗಳೂರು: ಅತ್ತ ಅವಕಾಶ ಕೊಡಿಸಿವುದಾಗಿ ಹೇಳಿ ಹೆಣ್ಣುಮಕ್ಕಳ ದುರ್ಬಳಕೆ ಮಾಡಿಕೊಳ್ಳುತ್ತಿರುವ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿರುವಂತೆಯೇ ಸ್ಯಾಂಡಲ್ ವುಡ್ ನಿರ್ದೇಶಕನೋರ್ವ ಅವಕಾಶ ಕೊಡಿಸುವುದಾಗಿ ಹೇಳಿ ಸ್ಯಾಂಡಲ್ ವುಡ್ ಹಿರಿಯ ನಟಿಯಿಂದ ಲಕ್ಷಾಂತರ ರೂ ಹಣ ಪಡೆದುಕೊಂಡು ವಂಚಿಸಿದ್ದಾನೆ.
ಕನ್ನಡ ಖ್ಯಾತ ಧಾರಾವಾಹಿಗಳಾದ ವಠಾರ, ಬದುಕು, ರಂಗೋಲಿ, ತಕಧಿಮಿತ ಸೇರಿದಂತೆ ಸಾಕಷ್ಟು ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದ ಖ್ಯಾತ ಹಿರಿಯ ನಟಿ ಮಂಜುಳಮ್ಮ ಅವರು ನಿರ್ದೇಶಕನೋರ್ವನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.
ಇತ್ತೀಚೆಗೆ ಒಂದೆರಡು ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಯುವ ನಿರ್ದೇಶಕ ನವೀನ್ ರೈ ಎಂಬಾತ ಮಂಜುಳಮ್ಮ ಅವರಿಗೆ ಧಾರಾವಾಹಿಗಳಲ್ಲಿ ಅವಕಾಶ ಕೊಡಿಸುವುದಾಗಿ ಹೇಳಿ ಲಕ್ಷಾಂತರ ಹಣ ಪಡೆದು ವಂಚಿಸಿದ್ದಾನೆ ಎಂದು ಮಂಜುಳಮ್ಮ ದೂರಿದ್ದಾರೆ. ಇನ್ನು ಈ ಸಂಬಂಧ ಮಂಜುಳಮ್ಮ ಅವರು ಚೆನ್ನಮ್ಮನಕೆರೆ ಅಚ್ಚುಕಟ್ಟು ಪ್ರದೇಶದಲ್ಲಿ ದೂರು ದಾಖಲಿಸಿದ್ದು, ಠಾಣೆಯಲ್ಲಿ ನನ್ನ ಹಣ ಕೊಡಿಸುವಂತೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
72 ವರ್ಷದ ಮಂಜುಳಮ್ಮ ಅವರು ದೂರಿನಲ್ಲಿ ಆರೋಪಿಸಿರುವಂತೆ 'ನವೀನ್ ರೈ ಎಂಬಾತ ತಮಗೆ ಸಣ್ಣ-ಪುಟ್ಟ ಪಾತ್ರ ನೀಡಿ ಪರಿಚಯವಾಗಿದ್ದ. ನಂತರ 'ಸಣ್ಣಮ್ಮನ ಅಜ್ಜಿ' ಕಿರುಚಿತ್ರ ಮಾಡಲು ಮುಂದಾಗಿದ್ದ. ಆತನಿಗೆ ಹಣದ ಅಭಾವವಿತ್ತು. ಆಗ ಪರಿಚಯವಿದ್ದ ನನ್ನ ಬಗೆ ನಿಮಗೂ ದೊಡ್ಡ ಆಫರ್ ಕೊಡ್ತಿನಿ, ಹಣ ಕೊಡಿ ಎಂದು ಹೇಳಿ, ಅವರಿಂದ ಚಿನ್ನಾಭರಣ, ನಗದು ಸೇರಿ ಒಟ್ಟು 15 ಲಕ್ಷ ರೂ. ವರೆಗೆ ಹಣ ಪಡೆದಿದ್ದ. ಹಣಕ್ಕಾಗಿ ಮಂಜುಳಮ್ಮ ತಾವು ವಾಸವಿದ್ದ ಮನೆಯ ಮಾಲೀಕರಿಂದ ಭೋಗ್ಯ ರದ್ದು ಮಾಡಿಸಿಕೊಂಡು ಬಂದ ಲಕ್ಷ-ಲಕ್ಷ ಹಣವನ್ನು ನವೀನ್ ಗೆ ನೀಡಿದ್ದರು ಎಂದು ಹೇಳಲಾಗಿದೆ.
ಇದಾದ ಕೆಲವು ತಿಂಗಳು ಕಳೆದರೂ ಪತ್ತೆಯಾಗದ ನವೀನ್ರನ್ನು ಹುಡುಕಲು ಆತನ ಮನೆಗೆ ಹೋದಾಗ, ಆತ ಮನೆ ಖಾಲಿ ಮಾಡಿಕೊಂಡು ಊರುಬಿಟ್ಟಿರುವ ವಿಚಾರ ಗೊತ್ತಾಗಿದೆ. ಇದಕ್ಕೂ ಮೊದಲು ತಾವು ನೀಡಿದ ಹಣ ವಾಪಸ್ ಪಡೆಯಲು ಹೋದಾಗ ಕೆಲ ಹುಡುಗರನ್ನು ಕಳುಹಿಸಿ ನನ್ನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಮಂಜುಳಮ್ಮ ತಮ್ಮ ದೂರಿನಲ್ಲಿ ಅಳಲು ತೋಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruSandalwoodಸ್ಯಾಂಡಲ್ ವುಡ್cheating casekarnataka policeವಂಚನೆ ಪ್ರಕರಣಕರ್ನಾಟಕ ಪೊಲೀಸ್Majulammaಮಂಜುಳಮ್ಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


