ಪಡ್ಡೆಹುಲಿಯಲ್ಲಿ ವರ್ಕೌಟ್ ಆದ ಶ್ರೇಯಸ್ ಮಂಜು, ನಿಶ್ವಿಕಾ ನಾಯ್ಡು ಕೆಮಿಸ್ಟ್ರಿ
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಚೊಚ್ಚಲ ಚಿತ್ರ ಪಡ್ಡೆ ಹುಲಿಯಲ್ಲಿ ಶ್ರೇಯಸ್ ಹಾಗೂ ನಿಶ್ವಿಕಾ ನಾಯ್ಡು ಕೆಮೆಸ್ಟ್ರಿ ಅತ್ಯುತ್ತಮವಾಗಿ ಬಂದಿದ್ದು, ಚಿತ್ರತಂಡ ಚಿತ್ರೀಕರಣವನ್ನು ಶೇ.60ರಷ್ಟು ಪೂರ್ಣಗೊಳಿಸಿದೆ...

Published On :
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಮಂಜು ಚೊಚ್ಚಲ ಚಿತ್ರ ಪಡ್ಡೆ ಹುಲಿಯಲ್ಲಿ ಶ್ರೇಯಸ್ ಹಾಗೂ ನಿಶ್ವಿಕಾ ನಾಯ್ಡು ಕೆಮೆಸ್ಟ್ರಿ ಉತ್ತಮವಾಗಿ ಬಂದಿದ್ದು, ಚಿತ್ರತಂಡ ಚಿತ್ರೀಕರಣವನ್ನು ಶೇ.60ರಷ್ಟು ಪೂರ್ಣಗೊಳಿಸಿದೆ.
ಸಿನಿಮಾ ಉತ್ತಮ ರೀತಿಯಲ್ಲಿ ರೂಪವನ್ನು ಪಡೆದುಕೊಳ್ಳುತ್ತಿದ್ದು, ಬಹಳ ಸಂತಸವಿದೆ. ಶ್ರೇಯಸ್ ಮಂಜು ಹಾಗೂ ನಿಶ್ವಿಕಾ ಅವರ ನಟನೆ ತೆರೆ ಮೇಲೆ ಅತ್ಯುತ್ತಮವಾಗಿ ಬಂದಿದೆ ಎಂದು ನಿರ್ದೇಶಕ ಗುರು ದೇಶಪಾಂಡೆ ಹೇಳಿದ್ದಾರೆ.
ಪಡ್ಡೆ ಹುಲಿ ಶ್ರೇಯಸ್'ಗೆ ಅತ್ಯುತ್ತಮ ಅವಕಾಶವಾಗಿದ್ದು, ಚಿತ್ರದಲ್ಲಿ ಶ್ರೇಯಸ್ ಅವರನ್ನು ಲವರ್ ಬಾಯ್, ಎಮೋಷನ್, ಆ್ಯಕ್ಷನ್ ಸೇರಿದ ಎಲ್ಲಾ ರೀತಿಯಲ್ಲೂ ನೋಡಬಹುದಾಗಿದೆ. ಆಕ್ಷನ್ ಸೀನ್ ಗಳಲ್ಲಿ ಶ್ರೇಯಸ್ ಅತ್ಯುತ್ತಮವಾಗಿ ಕಂಡು ಬರುತ್ತಾರೆ. ಆ್ಯಕ್ಷನ್ ದೃಶ್ಯಾವಳಿಗಳಲ್ಲಿ ಶ್ರೇಯಸ್ ಅವರ ನಟನೆ, ಕೌಶಲ್ಯ ಉತ್ತಮವಾಗಿದ್ದು, ಉತ್ತಮ ಚಿತ್ರಗಳಲ್ಲಿ ನಟಿಸಿದ್ದೇ ಆದರೆ, ಮಾಸ್ ಹೀರಾ ಆಗುವುದರಲ್ಲಿ ಅನುಮಾನವೇ ಇಲ್ಲ ಎಂದು ತಿಳಿಸಿದ್ದಾರೆ.
ಚಿತ್ರದಲ್ಲಿ ನಿರ್ದೇಶಕ ಗುರು ದೇಶಪಾಂಡೆಯವರು 25 ವರ್ಷಗಳ ಬಳಿಕ ರವಿಚಂದ್ರನ್ ಹಾಗೂ ಸುಧಾರಾಣಿಯವರನ್ನು ಒಟ್ಟಿಗೆ ತೆರೆ ಮೇಲೆ ತರುತ್ತಿದ್ದಾರೆ.
ಚಿತ್ರವು ಸಂಗೀತ ಆಧಾರಿತ ಚಿತ್ರವಾಗಿದ್ದು, ಉತ್ತಮ ಹಾಡುಗಳನ್ನು ರಚಿಸಲು ಕೆಲಸ ಮಾಡುತ್ತಿದ್ದೇವೆ. ಜು.31ರಂದು ಬೆಂಗಳೂರಿನಲ್ಲಿ ಮುಂದಿನ ಚಿತ್ರೀಕರಣಗಳು ಆರಂಭವಾಗಲಿವೆ ಎಂದಿದ್ದಾರೆ ಗುರು ದೇಶಪಾಂಡೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Guru Deshpandeಗುರು ದೇಶಪಾಂಡೆShreyas Manjuಶ್ರೇಯಸ್ ಮಂಜುNishvika Naiduನಿಶ್ವಿಕಾ ನಾಯ್ಡುಪಡ್ಡೆಹುಲಿPaddehulli
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


