ಸಿನಿಮಾ ಸುದ್ದಿ

ಭರದಿಂದ ಸಾಗಿದೆ ಮೆಗಾ ಕನ್ನಡ ವೆಬ್ ಸರಣಿಯ ಸಿದ್ಧತಾ ಕಾರ್ಯ

ಶಿವರಾಜ್ ಕುಮಾರ್ ನಿರ್ಮಾಣದ ಶ್ರೀಮುತ್ತು ಸಿನಿ ಸರ್ವೀಸ್ ಸಕ್ಕತ್ ಸ್ಟುಡಿಯೋಸ್ ಸಹಯೋಗದೊಂದಿಗೆ ಇತ್ತೀಚೆಗೆ ದೊಡ್ಡ ಕನ್ನಡ ವೆಬ್ ಸರಣಿಯೊಂದನ್ನು ಸಿಟಿ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಭರದಿಂದ ಸಾಗಿದೆ ಮೆಗಾ ಕನ್ನಡ ವೆಬ್ ಸರಣಿಯ ಸಿದ್ಧತಾ ಕಾರ್ಯ
ವೆಬ್ ಸರಣಿ ಫಸ್ಟ್ ಲೂಕ್
Published On :
ವೆಬ್ ಸರಣಿ ದಿನದಿಂದ ದಿನಕ್ಕೆ ಹೆಚ್ಚು ಪ್ರಸಿದ್ಧಿಯಾಗುತ್ತಿವೆ. ಡಿಜಿಟಲ್  ವೇದಿಕೆ ಮೂಲಕ  ಪ್ರೇಕ್ಷಕರನ್ನು ರಂಜಿಸುವಲ್ಲಿ  ಕನ್ನಡ ಚಿತ್ರೋದ್ಯಮ ಕೂಡಾ  ಒಂದು ಮೈಲುಗಲ್ಲು ಸಾಧಿಸಿದೆ.
ಶಿವರಾಜ್ ಕುಮಾರ್  ನಿರ್ಮಾಣದ ಶ್ರೀಮುತ್ತು ಸಿನಿ ಸರ್ವೀಸ್  ಸಕ್ಕತ್ ಸ್ಟುಡಿಯೋಸ್ ಸಹಯೋಗದೊಂದಿಗೆ ಇತ್ತೀಚೆಗೆ ದೊಡ್ಡ ಕನ್ನಡ ವೆಬ್ ಸರಣಿಯೊಂದನ್ನು  ಸಿಟಿ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಈ ವೆಬ್ ಸರಣಿಯೊಂದನ್ನು    ಹಸೀನ್ ಖಾನ್ ಹಾಗೂ ಇಶಾಮ್ ಖಾನ್ ನಿರ್ದೇಶಿಸುತ್ತಿದ್ದು, ಸಿದ್ಧತಾ ಕಾರ್ಯ ಭರದಿಂದ ಸಾಗಿದೆ.
ಹೇಟ್ ಯೂ ರೊಮಿಯೊ ಹೆಸರಿನ ವೆಬ್ ಸರಣಿಯ ಫಸ್ಟ್ ಲೂಕ್ ನ್ನು ನಿರ್ಮಾಣಕಾರರು ಬಿಡುಗಡೆ ಮಾಡಿದ್ದಾರೆ.  ಶೇ,80 ರಷ್ಟು ವೆಬ್ ಸರಣಿಯ ಚಿತ್ರೀಕರಣ ವಿದೇಶದಲ್ಲಿ ಚಿತ್ರೀಕರಣ ಮಾಡಲಾಗುವುದು ಎಂದು ಹೇಳಿದ ಸಕತ್ ಸ್ಟುಡಿಯೋ  ಪ್ರದೀಪ್ , ದಕ್ಷಿಣ ಭಾರತದಲ್ಲಿಯೇ ಇದೇ ಪ್ರಥಮ ಬಾರಿಗೆ ಇತಂಹ ಸಾಹಸಕ್ಕೆ ಮುಂದಾಗಿರುವುದಾಗಿ ಅವರು ತಿಳಿಸಿದರು.
ಸಿನಿಮಾದಂತೆಯೇ ಈ ವೆಬ್ ಸರಣಿಯನ್ನು ನಿರ್ವಹಣೆ ಮಾಡಲಾಗುತ್ತಿದೆ. ಸಿದ್ದತಾ ಕಾರ್ಯ ಭರದಿಂದ ಸಾಗಿದೆ ಎಂದು ಪ್ರದೀಪ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.