ಸಿನಿಮಾ ಸುದ್ದಿ

ಕಾಲಿವುಡ್‌ನ ಖ್ಯಾತ ನಿರ್ದೇಶಕನ ವಿರುದ್ಧ ಶ್ರೀರೆಡ್ಡಿ 'ಸೆಕ್ಸ್' ಬಾಂಬ್!

ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ನಟಿ ಶ್ರೀರೆಡ್ಡಿ ಇದೀಗ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ...

ಕಾಲಿವುಡ್‌ನ ಖ್ಯಾತ ನಿರ್ದೇಶಕನ ವಿರುದ್ಧ ಶ್ರೀರೆಡ್ಡಿ 'ಸೆಕ್ಸ್' ಬಾಂಬ್!
ಶ್ರೀರೆಡ್ಡಿ-ಎ ಆರ್ ಮುರುಗದಾಸ್
Published On :
ಹೈದರಾಬಾದ್: ಟಾಲಿವುಡ್ ನಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಧ್ವನಿ ಎತ್ತಿದ್ದ ನಟಿ ಶ್ರೀರೆಡ್ಡಿ ಇದೀಗ ತಮಿಳು ನಿರ್ದೇಶಕ ಎಆರ್ ಮುರುಗದಾಸ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. 
ಶ್ರೀರೆಡ್ಡಿ ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ತಮಿಳು ನಿರ್ದೇಶಕ ಮುರುಗದಾಸ್ ಜೀ...ಹೇಗಿದ್ದೀರಾ? ಗ್ರೀನ್ ಪಾರ್ಕ್ ಹೋಟೆಲ್ ನಿಮಗೆ ನೆನಪಿದೆಯಾ? ವೇಲಗೊಂಡ ಶ್ರೀನಿವಾಸ್ ಅವರ ಮೂಲಕ ನಾವು ಭೇಟಿ ಮಾಡಿದ್ದೇವು. ನೀವು ನನಗೆ ಪಾತ್ರ ನೀಡುವುದಾಗಿ ಮಾತು ಕೊಟ್ಟಿದ್ರಿ. ಆದರೆ, ನಮ್ಮಿಬ್ಬರ ನಡುವೆ ಜಾಸ್ತಿ.......ಎಂದು ಮಾತನ್ನು ಸಾಲನ್ನು ನಿಲ್ಲಿಸಿ ಇದುವರೆಗೂ ನೀವು ನನಗೆ ಯಾವುದೇ ಆಫರ್ ನೀಡಿಲ್ಲ ಎಂದು ಬರೆದುಕೊಂಡಿದ್ದಾರೆ. 
ಶ್ರೀರೆಡ್ಡಿ ತಮ್ಮ ಪೋಸ್ಟ್ ನಲ್ಲಿ ನಮ್ಮಿಬ್ಬರ ನಡುವೆ ಜಾಸ್ತಿ...ಪದವನ್ನು ಅರ್ಧದಲ್ಲೇ ನಿಲ್ಲಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕೊನೆಯದಾಗಿ ನೀವು ಕೂಡ ಗ್ರೇಟ್ ಪರ್ಸನ್ ಸರ್ ಎಂದು ತಮ್ಮ ಮಾತನ್ನು ಮುಗಿಸಿದ್ದಾರೆ. 
ಶ್ರೀರೆಡ್ಡಿ ಕೆಲವು ತಿಂಗಳ ಹಿಂದೆ ತೆಲುಗು ಚಿತ್ರೋದ್ಯಮದ ಮುಂದೆ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದ್ದರು. ಇದಾದ ನಂತರ ಬಾಹುಬಲಿ ನಟ ರಾಣ ದಗ್ಗುಬಾಟಿ ಅವರ ಸಹೋದರ ರಾಣ ಅಭಿಷೇಕ್ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದರು. 
ಎಆರ್ ಮುರುಗದಾಸ್ ಬ್ಲಾಕ್ ಬಸ್ಟರ್ ಚಿತ್ರಗಳಾದ ಘಜನಿ, ಸ್ಟಾಲಿನ್, ಕತ್ತಿ, ತುಪಾಕಿ ಸೇರಿದಂತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.