'ಚಮಕ್' ಚಿತ್ರದ ಯಶಸ್ಸನ್ನು ಬಿಂಬಿಸುವ ಹೊಸ ಟ್ರೇಲರ್ ಸದ್ಯದಲ್ಲೇ ಬಿಡುಗಡೆ
ಸುನಿ ನಿರ್ದೇಶನದ ಗಣೇಶ್-ರಶ್ಮಿಕಾ ಅಭಿನಯದ ಚಿತ್ರ ಚಮಕ್ 25 ದಿನಗಳ ಪ್ರದರ್ಶನ ಪೂರೈಸಿದೆ. ಚಿತ್ರದ ...

Published On :
ಸುನಿ ನಿರ್ದೇಶನದ ಗಣೇಶ್-ರಶ್ಮಿಕಾ ಅಭಿನಯದ ಚಿತ್ರ ಚಮಕ್ 25 ದಿನಗಳ ಪ್ರದರ್ಶನ ಪೂರೈಸಿದೆ. ಚಿತ್ರದ ಯಶಸ್ಸು ಕಂಡು ನಿರ್ದೇಶಕ ಸುನಿ ಚಿತ್ರ ಬಿಡುಗಡೆಯ ಯಶಸ್ಸನ್ನು ಬಿಂಬಿಸುವ ಟ್ರೇಲರ್ ತರಲು ನಿರ್ಧರಿಸಿದ್ದಾರೆ.
ಪೋಸ್ಟ್ ರಿಲೀಸ್ ಟ್ರೇಲರ್ ಕನ್ನಡ ಚಿತ್ರೋದ್ಯಮದಲ್ಲಿ ಇದೇ ಮೊದಲನೆಯದಾಗಿದ್ದು, ನಮಗೆ ಟ್ರೇಲರ್ ಬಿಡುಗಡೆ ಮಾಡಲು ಒಂದು ಸಂದರ್ಭ ಬೇಕಾಗಿತ್ತು. ಇನ್ನೂ ಚಿತ್ರ ನೋಡದಿರುವವರಿಗೆ ಇದೊಂದು ಆಹ್ವಾನ ಎಂದು ಪರಿಗಣಿಸಬಹುದು ಎನ್ನುತ್ತಾರೆ ನಿರ್ದೇಶಕ ಸುನಿ.
ರೊಮಾಂಟಿಕ್ ಕಾಮಿಡಿ ಚಿತ್ರವಾದ ಚಮಕ್ ನಲ್ಲಿ ಗಣೇಶ್ ಖುಷ್ ಎಂಬ ಸ್ತ್ರೀರೋಗ ತಜ್ಞರ ಪಾತ್ರವನ್ನು ಮತ್ತು ರಶ್ಮಿಕಾ ಮಂದಣ್ಣ ಗೃಹಿಣಿ ಪಾತ್ರವನ್ನು ನಿರ್ವಹಿಸಿದ್ದಾರೆ. ಟಿ.ಆರ್.ಚಂದ್ರಶೇಖರ್ ನಿರ್ಮಾಣದ ಚಿತ್ರಕ್ಕೆ ಜುಡ ಸ್ಯಾಂಡಿಯವರ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಒದಗಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Ganeshಗಣೇಶ್Chamakಚಮಕ್Director Suniನಿರ್ದೇಶಕ ಸುನಿರಶ್ಮಿಕಾRashmikaPost release trailerಬಿಡುಗಡೆ ನಂತರದ ಟ್ರೇಲರ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


