ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಚಿತ್ರದಲ್ಲಿ ವಿಜಯ್ ದೇವರಕೊಂಡಾ
ಟಾಲಿವುಡ್ ನಲ್ಲಿ ಅಭಿಮಾನಿಗಳ ಹೃದಯ ಗೆದ್ದಿರುವ ವಿಜಯ್ ದೇವರಕೊಂಡಾ ಅವರು ಇದೀಗ ಕನ್ನಡ ಚಿತ್ರರಂಗದ ಜತೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ...

Published On :
ಟಾಲಿವುಡ್ ನಲ್ಲಿ ಅಭಿಮಾನಿಗಳ ಹೃದಯ ಗೆದ್ದಿರುವ ವಿಜಯ್ ದೇವರಕೊಂಡಾ ಅವರು ಇದೀಗ ಕನ್ನಡ ಚಿತ್ರರಂಗದ ಜತೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಚಮಕ್ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ವಿಜಯ್ ದೇವರಕೊಂಡಾ ಬಂದಿದ್ದರು. ಅಲ್ಲದೆ ಇತ್ತೀಚೆಗಷ್ಟೇ ಇನೋವೆಟೀವ್ ಸಿಟಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಸಲುವಾಗಿ ಸಿಲಿಕಾನ್ ಸಿಟಿಗೆ ಬಂದಿದ್ದ ವಿಜಯ್ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಜತೆ ಕಾಣಿಸಿಕೊಂಡಿದ್ದರು. ಕಾರ್ಯಕ್ರಮ ಬಳಿಕ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಪವರ್ ಸ್ಟಾರ್ ಜತೆ ಸ್ವಲ್ಪ ಸಮಯ ಕಳೆದರು.
ರಾಕ್‌ಲೈನ್ ವೆಂಕಟೇಶ್ ಅವರ ಚಿತ್ರವೊಂದರಲ್ಲಿ ವಿಜಯ್ ದೇವರಕೊಂಡಾ ಅವರು ಅಭಿನಯಿಸುತ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ತೆಲುಗು ಚಿತ್ರದಲ್ಲಿ ವಿಜಯ್ ದೇವರಕೊಂಡಾ ನಟಿಸುತ್ತಿದ್ದು ಚಿತ್ರದ ಸ್ಕ್ರಿಪ್ಟ್ ಕೆಲಸಗಳು ನಡೆಯುತ್ತಿವೆಯಂತೆ. ಎಲ್ಲ ಅಂದುಕೊಂಡಂತೆ ಆದರೆ 2018ರ ಮಧ್ಯಭಾಗದಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ ಎಂದು ವೆಂಕಟೇಶ್ ಹೇಳಿದ್ದಾರೆ.
ನಾನಿ ಅಭಿನಯದ ಚಿತ್ರದಲ್ಲಿ ನಟಿಸಿದ್ದ ವಿಜಯ್ ದೇವರಕೊಂಡಾ ಅವರು ತಮ್ಮ ಮೊದಲ ಚಿತ್ರದಲ್ಲೇ ನಿರ್ಮಾಪಕರ ಗಮನವನ್ನು ಸೆಳೆದಿದ್ದರು. ನಂತರ ಅಭಿನಯಿಸಿದ್ದ ಪೆಳ್ಳಿ ಚೂಪುಲು ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಅದರಲ್ಲಿ ವಿಜಯ್ ಅಭಿನಯ ಮನೋಜ್ಞವಾಗಿತ್ತು ಎಂದು ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ವಿಜಯ್ ದೇವರಕೊಂಡಾ ಅವರಿಗೆ ಸೂಕ್ತವಾದ ಕಥೆಯೊಂದು ನನ್ನ ಬಳಿಯಿತ್ತು. ಅಂತೆ ಕಥೆಯ ತಿರುಳನ್ನು ವಿಜಯ್ ಗೆ ಹೇಳಿದೆ. ಕಥೆ ಅವರಿಗೆ ಇಷ್ಟವಾಗಿದೆ. ಹೀಗಾಗಿ ನಾವಿಬ್ಬರು ನಿತ್ಯ ಸಂಪರ್ಕದಲ್ಲಿದ್ದೇವೆ ಮುಂದಿನ ದಿನಗಳಲ್ಲಿ ಒಟ್ಟಾಗಿ ಚಿತ್ರವೊಂದನ್ನು ಮಾಡುತ್ತೇವೆ ಎಂದು ವೆಂಕಟೇಶ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Puneeth Rajkumarಪುನೀತ್ ರಾಜಕುಮಾರ್SandalwoodRockline Venkateshಸ್ಯಾಂಡಲ್ವುಡ್Vijay Devarakondaವಿಜಯ್ ದೇವರಕೊಂಡಾರಾಕ್ಲೈನ್ ವೆಂಕಟೇಶ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


