ಸಿನಿಮಾ ಸುದ್ದಿ

ಟಗರು 2 ಚಿತ್ರಕ್ಕೆ ಸೂರಿ ನಿರ್ದೇಶನ

ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಗರು ಬಿಡುಗಡೆಯಾಗಬೇಕಿದೆ...

ಟಗರು 2 ಚಿತ್ರಕ್ಕೆ ಸೂರಿ ನಿರ್ದೇಶನ
ನಿರ್ದೇಶಕ ಸೂರಿ ಮತ್ತು ನಿರ್ಮಾಪಕ ಶ್ರೀಕಾಂತ್ ಚಿತ್ರತಂಡದ ಜತೆ
Published On :
ಶಿವರಾಜ್ ಕುಮಾರ್ ನಟನೆಯ ಬಹು ನಿರೀಕ್ಷಿತ ಚಿತ್ರ ಟಗರು ಬಿಡುಗಡೆಯಾಗಬೇಕಿದೆ. ಆಗಲೇ ಅದರ ಮುಂದುವರಿದ ಭಾಗವನ್ನು ನಿರ್ದೇಶನ ಮಾಡಲು ನಿರ್ದೇಶಕ ಸೂರಿ ಮುಂದಾಗಿದ್ದಾರೆ. ಕಳೆದ ಶನಿವಾರ ಶಿವರಾಜ್ ಕುಮಾರ್ ಅವರ ಕೊನೆಯ ಹಂತದ ಚಿತ್ರದ ಭಾಗವನ್ನು ಶೂಟಿಂಗ್ ಮಾಡುವ ವೇಳೆ ಬಂಡಿ ಮಕಾಳಮ್ಮ ದೇವಸ್ಥಾನದಲ್ಲಿ ಇದನ್ನು ಘೋಷಿಸಲು ನಿರ್ದೇಶಕರು ತೀರ್ಮಾನಿಸಿದರು.
ನಿರ್ಮಾಪಕ ಶ್ರೀಕಾಂತ್ ಕೂಡ ಟಗರಿನ ಮುಂದುವರಿದ ಭಾಗವನ್ನು ನಿರ್ಮಿಸಲು ಒಲವು ತೋರಿದ್ದಾರೆ. ಚಿತ್ರತಂಡ ಅದರ ಸರಳ ಮುಹೂರ್ತವನ್ನು ಕೂಡ ನೆರವೇರಿಸಿತು.
ಚಿತ್ರಕಥೆ ಮೂಲಕ ನಾನು ಈ ಟಗರು ಪಾತ್ರವನ್ನು ಮುಂದುವರಿಸಬೇಕು. ಮೊದಲಿಗೆ ಟಗರು ಚಿತ್ರವನ್ನು ಜನರು ಹೇಗೆ ಸ್ವೀಕರಿಸುತ್ತಾರೆ ಎಂದು ನೋಡಿಕೊಂಡು ಅದರ ಮುಂದುವರಿದ ಭಾಗವನ್ನು ಹೇಗೆ ಚಿತ್ರೀಕರಿಸಬೇಕೆಂದು ಸ್ಪಷ್ಟ ಚಿತ್ರಣ ಸಿಗುತ್ತದೆ ಎನ್ನುತ್ತಾರೆ ನಿರ್ದೇಶಕರು.
Story image
ಟಗರು ಚಿತ್ರ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು ಶಿವರಾಜ್ ಕುಮಾರ್, ಭಾವನಾ, ಮಾನ್ವಿತಾ ಹರೀಶ್, ಧನಂಜಯ, ವಶಿಷ್ಟ ಸಿಂಹ ಮೊದಲಾದವರು ನಟಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ, ಮಹೇಂದ್ರ ಸಿಂಹ ಅವರ ಛಾಯಾಗ್ರಹಣ ಚಿತ್ರಕ್ಕಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.