ಖಾಕಿಯಲ್ಲಿ ಮತ್ತೆ ಮಿಂಚಲಿರುವ ಶಿವರಾಜ್ ಕುಮಾರ್
ಶಿವರಾಜ್ ಕುಮಾರ್ ಅವರ ಖಾಕಿ ಖದರ್ ಅವರ ಅಭಿಮಾನಿಗಳಿಗೆ ಮುಂದೆ ....

Published On :
ಶಿವರಾಜ್ ಕುಮಾರ್ ಅವರ ಖಾಕಿ ಖದರ್ ಅವರ ಅಭಿಮಾನಿಗಳಿಗೆ ಮುಂದೆ ಕೂಡ ಸಿಗುವ ನಿರೀಕ್ಷೆಯಿದೆ. ಟಗರಿನಲ್ಲಿ ಪೊಲೀಸ್ ದಿರಿಸಿನಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಲಿರುವ ಶಿವರಾಜ್ ಕುಮಾರ್ ಅದನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.
ಶಿವರಾಜ್ ಕುಮಾರ್ ಅವರ ಮುಂದಿನ ಚಿತ್ರ ಸಾಹಸ ನಿರ್ದೇಶಕ ರವಿ ವರ್ಮ ಅವರ ಜೊತೆಗೆ. ಈ ವರ್ಷವೇ ತೆರೆಗೆ ಬರಲಿದ್ದು ಇಲ್ಲಿ ಮತ್ತೊಮ್ಮೆ ಪೊಲೀಸ್ ಅಧಿಕಾರಿ ಪಾತ್ರ ವಹಿಸಲಿದ್ದಾರೆ.
ರುಸ್ತಂಗೆ ಮುಹೂರ್ತವೊಂದೇ ಬಾಕಿ: ಸಾಹಸ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ರವಿ ವರ್ಮ, ನಿರ್ದೇಶನಕ್ಕೆ ಇದೇ ಮೊದಲ ಬಾರಿಗೆ ಕೈ ಹಾಕುತ್ತಿದ್ದು ಶಿವರಾಜ್ ಕುಮಾರ್ ಅವರ ಚಿತ್ರ ನಿರ್ದೇಶಿಸಲಿದ್ದಾರೆ. ಜಯಣ್ಣ ಕಂಬೈನ್ಸ್ ನಲ್ಲಿ ತಯಾರಾಗಲಿರುವ ಸಿನಿಮಾಕ್ಕೆ ರುಸ್ತುಂ ಎಂದು ಶೀರ್ಷಿಕೆಯಿಟ್ಟಿದ್ದಾರೆ.
ಮುಫ್ತಿ ಚಿತ್ರದ ಯಶಸ್ವಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಿವರಾಜ್ ಕುಮಾರ್, ದಿ ವಿಲನ್ ಮತ್ತು ಕವಚ ಪ್ರಾಜೆಕ್ಟ್ ಗಳನ್ನು ಮುಗಿಸಿದ ನಂತರ ರವಿ ವರ್ಮ ಅವರ ನಿರ್ದೇಶನದ ರುಸ್ತುಂನಲ್ಲಿ ಭಾಗಿಯಾಗಲಿದ್ದಾರೆ.
ಶಿವರಾಜ್ ಕುಮಾರ್ ಅವರ ದಿನಾಂಕಗಳು ಸಿಕ್ಕಿದ ನಂತರ ರವಿ ವರ್ಮ ಅವರು ಈ ಸುದ್ದಿಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.ಹಲವು ವರ್ಷಗಳಿಂದ ನನ್ನ ಬಳಿ ಚಿತ್ರಕಥೆಯಿತ್ತು. ಇದೀಗ ಮುಹೂರ್ತ ದಿನಾಂಕ ನಿಗದಿಪಡಿಸಿ ಚಿತ್ರೀಕರಣ ಆರಂಭಿಸುವುದೊಂದೇ ಬಾಕಿ. ರವಿ ವರ್ಮ ಅವರು ಪ್ರಸ್ತುತ ದಿ ವಿಲನ್ ಮತ್ತು ತೆಲುಗು ಚಿತ್ರ ಗೋಪಿಚಂದ್ ಅವರ ಸಿನಿಮಾಕ್ಕೆ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


