ಪಿಆರ್ ಕೆ ಪ್ರೊಡಕ್ಷನ್ ನ ಎರಡನೇ ಸಿನಿಮಾ ಮಾಯಾ ಬಜಾರ್
ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮೊದಲ ಸಿನಿಮಾ ಕವಲು ದಾರಿ ಬಿಡುಗಡೆಯ ಸಿದ್ಧತೆಯಲ್ಲಿರುವಾಗಲೇ ....

Published On :
ತಮ್ಮ ಪಿಆರ್ ಕೆ ಪ್ರೊಡಕ್ಷನ್ ನಲ್ಲಿ ಮೊದಲ ಸಿನಿಮಾ ಕವಲು ದಾರಿ ಬಿಡುಗಡೆಯ ಸಿದ್ಧತೆಯಲ್ಲಿರುವಾಗಲೇ ಪುನೀತ್ ರಾಜ್ ಕುಮಾರ್ ಅವರು ಎರಡನೇ ಸಿನಿಮಾವನ್ನು ಕೂಡ ಪ್ರಾರಂಭಿಸಲು ಮುಂದಾಗಿದ್ದಾರೆ.
ಎರಡನೇ ಸಿನಿಮಾವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶಿಸುತ್ತಿದ್ದು ಅದರ ಮುಹೂರ್ತ ಇದೇ 24ಕ್ಕೆ ನಿಗದಿಯಾಗಿದೆ. ಚಿತ್ರಕ್ಕೆ ಮಾಯಾ ಬಜಾರ್ ಎಂಬ ಆಕರ್ಷಕ ಶೀರ್ಷಿಕೆಯನ್ನು ಕೂಡ ಇಡಲಾಗಿದೆ. ಚಿತ್ರದಲ್ಲಿ ಉತ್ತಮ ಕಲಾವಿದರ ದಂಡೇ ಇದೆ ಎನ್ನಬಹುದು. ಕಲಾವಿದರಾದ ಪ್ರಕಾಶ್ ರಾಜ್, ವಶಿಷ್ಟ ಸಿಂಹ ಮತ್ತು ರಾಜ್.ಬಿ.ಶೆಟ್ಟಿ ಈಗಾಗಲೇ ನಟಿಸಲು ಮುಂದೆ ಬಂದಿದ್ದಾರೆ.
ಚಿತ್ರ ನಿರ್ಮಾಪಕರು ಸದ್ಯದಲ್ಲಿಯೇ ಚಿತ್ರದ ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದಾರೆ.
ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಪ್ರೊಡಕ್ಷನ್ ನಡಿ ಈಗಾಗಲೇ ಕವಲು ದಾರಿ ಸಿನಿಮಾವನ್ನು ಗೋಧಿಬಣ್ಣ ಸಾಧಾರಣ ಮೈಕಟ್ಟು ಖ್ಯಾತಿಯ ಹೇಮಂತ್ ಎಂ.ರಾವ್ ನಿರ್ದೇಶಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Prakash rajಪ್ರಕಾಶ್ ರಾಜ್ಪುನೀತ್ ರಾಜ್ ಕುಮಾರ್Puneet RajkumarVashishta Simhaರಾಜ್ ಬಿ ಶೆಟ್ಟಿRaj.B.Shettyವಶಿಷ್ಟ ಸಿಂಹ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


