ಮನ್ಸೊರೆಯ ನಾತಿಚರಾಮಿ ಚಿತ್ರಕ್ಕೆ ಅರುವಿಯ ಬಿಂದು ಮಾಲಿನಿ ಸಂಗೀತ ನಿರ್ದೇಶನ
2018ರ ಹೊಸ ವರ್ಷದಲ್ಲಿ ತಮ್ಮ ವೃತ್ತಿಯಲ್ಲಿ ಹೊಸ ತತ್ವಗಳನ್ನು ಅಳವಡಿಸಿಕೊಂಡಿರುವ ....

Published On :
2018ರ ಹೊಸ ವರ್ಷದಲ್ಲಿ ತಮ್ಮ ವೃತ್ತಿಯಲ್ಲಿ ಹೊಸ ತತ್ವಗಳನ್ನು ಅಳವಡಿಸಿಕೊಂಡಿರುವ ನಟಿ ಶೃತಿ ಹರಿಹರನ್ ಈ ವರ್ಷದ ಮೊದಲ ಚಿತ್ರ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮನ್ಸೊರೆಯವರ ಜೊತೆಗೆ ಎಂದು ಘೋಷಿಸಿದ್ದಾರೆ.
ಚಿತ್ರ ನಿರ್ಮಾಣ ತಂಡ ಚಿತ್ರದ ಮೊದಲ ನೋಟವನ್ನು ಸಂಕ್ರಾಂತಿಗೆ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಬಹಳ ಆಸಕ್ತಿಕರವಾದ ನಥಿಚಾರಾಮಿ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ.
ಚಿತ್ರದ ಪೋಸ್ಟರ್ ನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿರುವ ಶೃತಿ ಹರಿಹರನ್ ನಮ್ಮ ಮುಂದಿನ ಚಿತ್ರ ನಾಥಿಚರಮಿಯ ಮೊದಲ ನೋಟವನ್ನು ಸಂಕ್ರಾಂತಿಯ ಶುಭ ದಿನದಂದು ಬಿಡುಗಡೆ ಮಾಡುತ್ತಿದ್ದೇವೆ. ಮನ್ಸೊ ರೆ ನಿರ್ದೇಶನದ ಚಿತ್ರ ಮಾರ್ಚ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ. ಪೊಂಗಲ್ ಶುಭಾಶಯಗಳು ಎಂದು ಶೃತಿ ಹರಿಹರನ್ ಬರೆದಿದ್ದಾರೆ.
ಮೊದಲ ನೋಟ ಆಸಕ್ತಿಕರವಾಗಿದ್ದು ಚಿತ್ರದ ಮತ್ತೊಂದು ವಿಷಯ ಸಂಗೀತ ನಿರ್ದೇಶಕರದ್ದು, ತಮ್ಮ ಹರಿವು ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಪಡೆದಿರುವ ಮನ್ಸೊರೆ ಈ ಚಿತ್ರಕ್ಕೆ ಬಿಂದು ಮಾಲಿನಿ ಅವರನ್ನು ಸಂಗೀತ ನಿರ್ದೇಶಕರನ್ನಾಗಿ ಕರೆತಂದಿದ್ದಾರೆ.
ಈಗಾಗಲೇ ತಮಿಳು ಚಿತ್ರ ಅರುವಿಯಲ್ಲಿ ಸಂಗೀತ ನಿರ್ದೇಶನ ನೀಡಿ ಬಿಂದು ಸೈ ಎನಿಸಿಕೊಂಡಿದ್ದಾರೆ.
On this auspicious day I share with you all the first look of our next project #Nathicharami .Directed by National Award winning director Mr Manso Re - shoot begins in march . Also ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು and Happy Pongal
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


