ಸಿನಿಮಾ ಸುದ್ದಿ

ಸೀತಾರಾಮ ಕಲ್ಯಾಣದಲ್ಲಿ ವೀಕ್ಷಕರನ್ನು ಮೋಡಿ ಮಾಡಲಿರುವ ಪ್ರಿಯಾಂಕಾ ಉಪೇಂದ್ರ

ನಿರ್ದೇಶಕ ಎ.ಹರ್ಷ ಅವರ ಸೀತಾರಾಮ ಕಲ್ಯಾಣ ಚಿತ್ರ ಘೋಷಣೆಯಾದ ನಂತರ ಅದರ ಬಗ್ಗೆ ಸಾಕಷ್ಟು ...

ಸೀತಾರಾಮ ಕಲ್ಯಾಣದಲ್ಲಿ ವೀಕ್ಷಕರನ್ನು ಮೋಡಿ ಮಾಡಲಿರುವ ಪ್ರಿಯಾಂಕಾ ಉಪೇಂದ್ರ
ಪ್ರಿಯಾಂಕಾ ಉಪೇಂದ್ರ-ರಮೇಶ್ ಅರವಿಂದ್
Published On :
ನಿರ್ದೇಶಕ ಎ.ಹರ್ಷ ಅವರ ಸೀತಾರಾಮ ಕಲ್ಯಾಣ ಚಿತ್ರ ಘೋಷಣೆಯಾದ ನಂತರ ಅದರ ಬಗ್ಗೆ ಸಾಕಷ್ಟು ಕುತೂಹಲ ಮೂಡಿಸಿದೆ. ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಚಿತ್ರದ ಪ್ರಮುಖ ಪಾತ್ರ ವಹಿಸುತ್ತಿದ್ದು, ಜನವರಿ 19ರಿಂದ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ. 
ಚೆನ್ನಾಂಬಿಕಾ ಪ್ರೊಡಕ್ಷನ್ ನಡಿ ಚಿತ್ರ ತಯಾರಾಗುತ್ತಿದ್ದು, ದೊಡ್ಡ ದೊಡ್ಡ ನಟರು ಅಭಿನಯಿಸುವ ಮೂಲಕ ಚಿತ್ರವನ್ನು ದೊಡ್ಡ ಕೌಟುಂಬಿಕ ಮನರಂಜನಾ ಚಿತ್ರವನ್ನಾಗಿ ರೂಪಿಸಲು ನಿರ್ದೇಶಕರು ಮುಂದಾಗಿದ್ದಾರೆ.
ಇದಕ್ಕಾಗಿ ಟಾಲಿವುಡ್ ನಿಂದ ಪ್ರಸಿದ್ಧ ಫೈಟಿಂಗ್ ಸೋದರರನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ. ಟಾಲಿವುಡ್ ನ ಖ್ಯಾತ ಸ್ಟಂಟ್ ಸೋದರರಾದ ರಾಮ್ ಮತ್ತು ಲಕ್ಷ್ಮಣ್ ಸೀತಾರಾಮ ಕಲ್ಯಾಣಕ್ಕೆ ಫೈಟಿಂಗ್ ದೃಶ್ಯಗಳ ಕೊರಿಯೊಗ್ರಫಿ ಮಾಡಲಿದ್ದಾರೆ.
ಟಾಲಿವುಡ್ ನ ಖ್ಯಾತ ಹಿರಿಯ ನಟ ಶರತ್ ಕುಮಾರ್ ಸಿನಿಮಾದಲ್ಲಿದ್ದರೆ ಕನ್ನಡದ ಪ್ರಸಿದ್ಧ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಸದ್ಯದಲ್ಲಿಯೇ ಚಿತ್ರತಂಡ ಸೇರಲಿದ್ದಾರೆ. ಚಿತ್ರತಂಡ ಪ್ರಿಯಾಂಕಾ ಉಪೇಂದ್ರ ಅವರನ್ನು ಸಂಪರ್ಕಿಸಿದಾಗ ಪಾತ್ರವನ್ನು ಕೇಳಿ ಅವರು ಸಂತೋಷದಿಂದ ಒಪ್ಪಿಕೊಂಡಿದ್ದಾರೆ.
ಚಿತ್ರದ ನಿರ್ಮಾಣ ತಂಡದಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಉಳಿದಿದ್ದು, ಪ್ರಿಯಾಂಕಾ ಅವರಿಗೆ ಚಿತ್ರದಲ್ಲಿ ಪ್ರಭಾವಶಾಲಿ ಪಾತ್ರವಿದೆಯಂತೆ. ಚಿತ್ರತಂಡ ಇನ್ನೂ ಹಲವು ಉತ್ತಮ ನಟರನ್ನು ಸಂಪರ್ಕಿಸುತ್ತಿದ್ದು ನಟ ರಮೇಶ್ ಅರವಿಂದ್ ಅವರನ್ನು ಕೂಡ ಚಿತ್ರತಂಡ ಸಂಪರ್ಕಿಸುತ್ತಿದೆ.
ಇನ್ನು ಕುರುಕ್ಷೇತ್ರದ ಟೀಸರ್ ನೋಡಿದ ಚಿತ್ರಪ್ರೇಮಿಗಳು ಅದರಲ್ಲಿ ಅಭಿಮನ್ಯು ಪಾತ್ರ ನಿರ್ವಹಿಸಿದ ನಿಖಿಲ್ ಕುಮಾರ್ ಅವರ ಅಭಿನಯವನ್ನು ಮೆಚ್ಚಿಕೊಂಡಿದ್ದಾರೆ. ಲಕ್ಷಕ್ಕೂ ಅಧಿಕ ಮಂದಿ ಟೀಸರ್ ವೀಕ್ಷಿಸಿದ್ದಾರೆ. ಈ ಮಧ್ಯೆ ನಿಖಿಲ್ ಕುಮಾರ್ ರಾಜಕೀಯ ಮತ್ತು ಸಿನಿಮಾಗಳ ಮಧ್ಯೆ ಸಮಯ ಹೊಂದಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.