'ದಿ ವಿಲನ್' ಚಿತ್ರಕ್ಕೆ ದೇವರಾಜ್, ಸರಣ್ಯರನ್ನು ಕರೆತಂದ ಜೋಗಿ ಪ್ರೇಮ್
ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಬಹುದೊಡ್ಡ ತಾರಾಗಣವನ್ನು ಹೊಂದಿದೆ. ಇದೀಗ ಪ್ರೇಮ್ ಚಿತ್ರಕ್ಕೆ ಹಿರಿಯ ನಟ ದೇವರಾಜ್ ಮತ್ತು ತಮಿಳು ನಟಿ ಸರಣ್ಯರನ್ನು...

Published On :
ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಬಹುದೊಡ್ಡ ತಾರಾಗಣವನ್ನು ಹೊಂದಿದೆ. ಇದೀಗ ಪ್ರೇಮ್ ಚಿತ್ರಕ್ಕೆ ಹಿರಿಯ ನಟ ದೇವರಾಜ್ ಮತ್ತು ತಮಿಳು ನಟಿ ಸರಣ್ಯರನ್ನು ಕರೆತಂದಿದ್ದಾರೆ.
ಜನವರಿ 3ರಿಂದ ಮುಂದಿನ ಶೆಡ್ಯೂಲ್ ಪ್ರಾರಂಭವಾಗಲಿದ್ದು ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಪಾತ್ರದ ಚಿತ್ರೀಕರಣ ನಡೆಯಲಿದೆ. ಜತೆಗೆ ದೇವರಾಜ್ ಹಾಗೂ ಸರಣ್ಯರ ಪಾತ್ರದ ಚಿತ್ರೀಕರಣವೂ ನಡೆಯಲಿದ್ದು ಚಿತ್ರದಲ್ಲಿ ಸರಣ್ಯ ಅವರು ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಪ್ರೇಮ್ ತಿಳಿಸಿದರು.
ಬೆಂಗಳೂರಿನಲ್ಲಿ ಅಭಿನಯ ಚಕ್ರವರ್ತಿ ಸುದೀಪ್ ಮತ್ತು ಆ್ಯಮಿ ಜಾಕ್ಸನ್ ರ ಹಾಡೊಂದನ್ನು ಪ್ರೇಮ್ ಚಿತ್ರೀಕರಿಸಿದರು. ಈ ಹಾಡಿನ ಮೂಲಕ ಆ್ಯಮಿ ಜಾಕ್ಸನ್ ಅವರ ಪಾತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಇನ್ನು ಇದೇ ತಿಂಗಳಲ್ಲಿ ಚಿತ್ರದ ಚಿತ್ರೀಕರಣ ಮುಗಿಸುವ ಯೋಜನೆಯಲ್ಲಿದ್ದಾರಂತೆ ಪ್ರೇಮ್.
ಇನ್ನು ಚಿತ್ರದ ಇಂಟ್ರಡೇಕ್ಷನ್ ಸಾಂಗ್ ಒಂದು ಬಾಕಿ ಇದ್ದು ಇದು ಸುದೀಪ್ ಹಾಗೂ ಶಿವರಾಜ್ ಕುಮಾರ್ ನಡುವಿನ ಸಾಂಗ್ ಆಗಿರಲಿದೆ. ಇದಕ್ಕಾಗಿ ಭರ್ಜರಿ ತಯಾರಿ ಮಾಡಿಕೊಳ್ಳಲಾಗಿದೆ ಎಂದರು. ಇನ್ನು ಬಹುಕೋಟಿ ವೆಚ್ಚದ ಚಿತ್ರವನ್ನು ಸಿಆರ್ ಮನೋಹರ್ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ, ಶ್ರೀಕಾಂತ್, ತಿಲಕ್ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


