ಅನಂತು, ವಕೀಲ, ಸಾಂಪ್ರದಾಯಿಕ ಬ್ರಾಹ್ಮಣ ಹುಡುಗ!
ಹೊಸ ವರ್ಷಕ್ಕೆ ಅನಂತು ವರ್ಸಸ್ ನಸ್ರತ್ ಚಿತ್ರದ ನಿರ್ದೇಶಕ ಸುಧೀರ್ ಶಾನಭಾಗ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ...

Published On :
ಹೊಸ ವರ್ಷಕ್ಕೆ ಅನಂತು ವರ್ಸಸ್ ನಸ್ರತ್ ಚಿತ್ರದ ನಿರ್ದೇಶಕ ಸುಧೀರ್ ಶಾನಭಾಗ್ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಸಿದ್ಧಾರ್ಥ್, ರನ್ ಆ್ಯಂಟನಿ ಚಿತ್ರಗಳ ನಂತರ ನಟ ವಿನಯ್ ರಾಜ್ ಕುಮಾರ್ ಅಭಿನಯದ ಮೂರನೇ ಚಿತ್ರ ಅನಂತು ವರ್ಸಸ್ ನಸ್ರತ್. ಇದರಲ್ಲಿ ವಿನಯ್ ರಾಜ್ ಕುಮಾರ್ ಅಪ್ಪಟ ಸಾಂಪ್ರದಾಯಿಕ ಬ್ರಾಹ್ಮಣ ಹುಡುಗನಾಗಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಚಿತ್ರದ ಮೊದಲ ಪೋಸ್ಟರ್ ನಲ್ಲಿ ವಿನಯ್ ಕುಮಾರ್ ಬ್ರಾಹ್ಮಣ ಹುಡುಗನ ವೇಷದಲ್ಲಿ ಕಾಣಿಸಿಕೊಂಡಿದ್ದು ಚಿತ್ರದ ಕುರಿತಂತೆ ನಿರೀಕ್ಷೆಗಳು ಹೆಚ್ಚಾಗಿವೆ. ಇನ್ನು ನಸ್ರತ್ ಪಾತ್ರದಲ್ಲಿ ಲತಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಸುಧೀರ್ ಶಾನಭಾಗ್ ತಿಳಿಸಿದ್ದಾರೆ.
ಸದ್ಯ ಚಿತ್ರದ 40ರಷ್ಟು ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು ಮುಂದಿನ ಶೆಡ್ಯೂಲ್ ಜನವರಿ 10ರಿಂದ ಪ್ರಾರಂಭವಾಗಲಿದೆ ಎಂದರು. ಚಿತ್ರದಲ್ಲಿ ಮತ್ತೊಂದು ಆಕರ್ಷಣೆ ಎಂದರೆ ಹಾಡುಗಾರ ಕೈಲಾಶ್ ಖೇರ್. ಚಿತ್ರದ ಕವ್ವಾಲಿ ಹಾಡನ್ನು ಆಡಿದ್ದಾರೆ. ಸುನಂದ ಗೌತಮ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ರವಿಶಂಕರ್, ದತ್ತಣ್ಣ, ಬಿ.ಸುರೇಶ್ ಮತ್ತು ನೈನಾ ಸೇರಿದಂತೆ ಹಲವು ಅಭಿನಯಿಸಿದ್ದಾರೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Sandalwoodವಿನಯ್ ಕುಮಾರ್Vinay Rajkumarಸ್ಯಾಂಡಲ್ವುಡ್Anantu v/s NusratBrahmin boySudheer Shanbhogueಅನಂತು ವರ್ಸಸ್ ನಸ್ರತ್ಬ್ರಾಹ್ಮಣ ಹುಡುಗಸುಧೀರ್ ಶಾನಭಾಗ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


