ಸ್ಯಾಂಡಲ್ ವುಡ್ ಗೆ 3000 ದೆವ್ವಗಳ ಕಾಟ!
ಹಾಲಿವುಡ್ ಮಂದಿಗೆ 3000 ಸಂಖ್ಯೆ ಎಂದರೆ ಚಿರಪರಿಚಿತ. ಹಾಲಿವುಡ್ ನಲ್ಲಿ ಮಿಸ್ಟರಿ ಸೈನ್ಸ್ ಥಿಯೇಟರ್ 3000...

ಹಾಲಿವುಡ್ ಮಂದಿಗೆ 3000 ಸಂಖ್ಯೆ ಎಂದರೆ ಚಿರಪರಿಚಿತ. ಹಾಲಿವುಡ್ ನಲ್ಲಿ ಮಿಸ್ಟರಿ ಸೈನ್ಸ್ ಥಿಯೇಟರ್ 3000, ಅಮೆರಿಕಾ 3000, ಚೇಸಿಂಗ್ 3000 ಮತ್ತು ಎಕ್ಟ್ಸರ್ಮಿನೇಟರ್ ಆಫ್ ದ ಇಯರ್ 3000 ಮೊದಲಾದ ಚಿತ್ರಗಳು ಬಂದಿವೆ. ಇದೀಗ ಕನ್ನಡದಲ್ಲಿ 3000 ಎಂಬ ಚಿತ್ರ ಬಿಡುಗಡೆಯಾಗುತ್ತಿದೆ. ಚಿತ್ರದ ನಿರ್ದೇಶಕ ರಬ್ಬುನಿ ಕೀರ್ತಿ. ಅವರ ಚೊಚ್ಚಲ ನಿರ್ದೇಶನದ ಚಿತ್ರದ ಬಗ್ಗೆ ಅವರು ಹೇಳುವುದು ಹೀಗೆ:
ಈ ಸಂಖ್ಯೆಯನ್ನು ಭಗವದ್ಗೀತೆ ಮತ್ತು ಬೈಬಲ್ ನಲ್ಲಿ ನಮೂದಿಸಲಾಗಿದೆ. ಉಗ್ರನೊಬ್ಬನನ್ನು ಸಂಭೋದಿಸಲು ಈ ಸಂಖ್ಯೆಯನ್ನು ಬಳಸಿಕೊಂಡಿದ್ದೇನೆ. ಅದು 3000 ವಿವಿಧ ದೆವ್ವಗಳಿಂದ ಆಗಿದೆ. ಒಬ್ಬ ಮನುಷ್ಯನ ದೇಹಕ್ಕೆ ಇಷ್ಟೊಂದು ದೆವ್ವಗಳು ಸೇರಿಕೊಂಡಾಗ ಏನಾಗುತ್ತದೆ, ಏನು ಮಾಡುತ್ತವೆ ಎಂಬುದು ಚಿತ್ರದ ಕಥೆಯಾಗಿದೆ ಎಂದರು.
ವಾಸ್ತವ ಘಟನೆಯಿಂದ ಪ್ರೇರೇಪಿತಗೊಂಡ ಕಥೆಯಿದಂತೆ. ಜಾನ್ನಿ ಎಲಿಯಾಸ್ ಎಂಬ ಡೊಮನಿಕನ್ ಪಾದ್ರಿಯೊಬ್ಬರು ನನ್ನ ಸಂಬಂಧಿಕರಾಗಿದ್ದು ಅವರು ಭೂತೋಚ್ಛಾಟನೆಯನ್ನು ಮಾಡುತ್ತಾರೆ. ಅವರು ಈ ಸಂಪ್ರದಾಯಗಳನ್ನು ನೆರವೇರಿಸುವಲ್ಲಿಗೆ ನಾನು ಕೂಡ ಅವರ ಜೊತೆಗೆ ಹೋಗುತ್ತಿದ್ದೆ. ಆಗ ಅಲ್ಲಿ ಒಂದು ಘಟನೆ ನನ್ನ ಗಮನ ಸೆಳೆಯಿತು. ಅದನ್ನು 3000ದಲ್ಲಿ ಕನ್ನಡ ಪ್ರೇಕ್ಷಕರ ಮುಂದೆ ತಂದಿದ್ದೇನೆ. ಎರಡು ವರ್ಷಗಳ ಹಿಂದೆಯೇ ಕಥೆ ಸಿದ್ಧವಾಗಿದ್ದರೂ ಕೂಡ 9 ತಿಂಗಳ ಹಿಂದಷ್ಟೇ ಸಿನಿಮಾ ಕೆಲಸ ಆರಂಭವಾಯಿತು ಎನ್ನುತ್ತಾರೆ ರಬ್ಬುನಿ. ಇದು ಹಾರರ್ ಸಿನಿಮಾವಾಗಿದ್ದು ಹಾಸ್ಯ ಸನ್ನಿವೇಶಗಳು ಕೂಡ ಇವೆ. ದೇವರು ಮತ್ತು ದೆವ್ವದ ಪರಿಕಲ್ಪನೆಯನ್ನು ಚಿತ್ರ ಬಿಂಬಿಸುತ್ತದೆ ಎನ್ನುತ್ತಾರೆ.
3000 ಚಿತ್ರದಲ್ಲಿ ರುಬಿನ್, ಗೌರೀಶ್ ಅಕ್ಕಿ, ಸುಹಾನ್, ಪಲ್ಲವಿ ಮತ್ತು ಸ್ವಾತಿ ಅಭಿನಯಿಸಿದ್ದಾರೆ. ಒಂದು ರಾತ್ರಿ ಮತ್ತು ಮರುದಿನ ಹಗಲು ನಡೆಯುವ ಕಥೆಯೇ ಇದಾಗಿದ್ದು ಮಂಗಳೂರಿನ ನಿರ್ಜನ ದ್ವೀಪದಲ್ಲಿ ಚಿತ್ರೀಕರಿಸಲಾಗಿದೆ ಎಂದರು.
ಶಂಕರ್ ಅಂಡ್ ಅಸೋಸಿಯೇಟ್ಸ್ ನಡಿ ಚಿತ್ರ ತಯಾರಿಸಲಾಗಿದ್ದು ಕ್ಲೆರೆನ್ಸ್ ಅಲ್ಲೆಂಕ್ರಸ್ಟ ಅವರ ಸಂಗೀತ, ಮನು ಅವರ ಛಾಯಾಗ್ರಹಣವಿದೆ. ಡಾಲ್ಬಿ ಅಟ್ಮೊಸ್ ಅವರ ಧ್ವನಿ ತಂತ್ರಜ್ಞಾನವಿದೆ. ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಲ್ಯಾಟಿನ್ ಗೀತೆಯನ್ನು ಅಳವಡಿಸಲಾಗಿದೆ. ಇದು ಹಾರರ್ ಸಿನಿಮಾ ಆದರೂ ಕೂಡ ಹೆಚ್ಚು ಗ್ರಾಫಿಕ್ಸ್ ಬಳಸಿಲ್ಲ. ಸಹಜವಾಗಿ ಅಭಿನಯಿಸಿ ಭಾಷೆ, ಭಾವನೆಗಳ ಮೂಲಕ ಪ್ರೇಕ್ಷಕರನ್ನು ಭಯಗೊಳಿಸಲು ಪ್ರಯತ್ನಿಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


