ಅರ್ಜುನ್ ಗೌಡನಾಗಿ ಪ್ರಜ್ವಲ್ ದೇವರಾಜ್
ಇಪ್ಪತ್ತೈದು ಸಿನಿಮಾಗಳ ನಂತರ ಪ್ರಜ್ವಲ್ ದೇವರಾಜ್ ತಮ್ಮ ವೃತ್ತಿಜೀವನವನ್ನು ಮತ್ತೊಂದು ಮೈಲಿಗಲ್ಲಿನತ್ತ ...

ಇಪ್ಪತ್ತೈದು ಸಿನಿಮಾಗಳ ನಂತರ ಪ್ರಜ್ವಲ್ ದೇವರಾಜ್ ತಮ್ಮ ವೃತ್ತಿಜೀವನವನ್ನು ಮತ್ತೊಂದು ಮೈಲಿಗಲ್ಲಿನತ್ತ ಕೊಂಡೊಯ್ಯಲು ಬಯಸಿದ್ದಾರೆ. ಇನ್ನು ಮುಂದೆ ಹೊಸ ಪಾತ್ರಗಳು ಮತ್ತು ವಿಶಿಷ್ಟ ಸಿನಿಮಾಗಳಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಮುಂದಾಗಿದ್ದಾರೆ.
ದಿನಕರ್ ತೂಗುದೀಪ ಅವರ ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾದ ಶೂಟಿಂಗ್ ಮುಗಿಸಿರುವ ಪ್ರಜ್ವಲ್, ಇದೀಗ ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಖ್ಯಾತ್ ಪ್ರೊಡಕ್ಷನ್ ನಡಿ ನರಸಿಂಹ ಇದನ್ನು ನಿರ್ದೇಶಿಸುತ್ತಿದ್ದಾರೆ.
ನಂತರ ಪ್ರಜ್ವಲ್ ಅವರು ಅರ್ಜುನ್ ಗೌಡ ಎಂಬ ಸಿನಿಮಾದಲ್ಲಿ ನಟಿಸಲಿದ್ದು, ರಾಮು ಪ್ರೊಡಕ್ಷನ್ ನಡಿ ಲಕ್ಕಿ ಶಂಕರ್ ನಿರ್ದೇಶಿಸಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಗೌಡ ಎಂದು ಹೆಸರಿಡಲಾಗಿದ್ದು ಇದು ತೆಲುಗಿನ ಬ್ಲಾಕ್ ಬಸ್ಟರ್ ಚಿತ್ರ ಅರ್ಜುನ್ ರೆಡ್ಡಿಯನ್ನು ನೆನಪಿಸುತ್ತದೆ. ಆದರೆ ತೆಲುಗು ಸಿನಿಮಾಕ್ಕೆ ಇದು ಯಾವುದೇ ಸಂಬಂಧ ಹೊಂದಿಲ್ಲ.
ಅರ್ಜುನ್ ಗೌಡದಲ್ಲಿ ಪ್ರಜ್ವಲ್ ಕೋಪಿಷ್ಟ ಯುವಕನ ಪಾತ್ರ ನಿರ್ವಹಿಸಲಿದ್ದಾರೆ. ಇದಕ್ಕಾಗಿ ತಮ್ಮ ನೋಟವನ್ನು ಬದಲಾಯಿಸಿಕೊಳ್ಳಲಿದ್ದಾರೆ ಪ್ರಜ್ವಲ್. ಇನ್ಸ್ ಪೆಕ್ಟರ್ ವಿಕ್ರಮ್ ಚಿತ್ರದ ಮೊದಲ ಶೆಡ್ಯೂಲ್ ಮುಗಿಸಿರುವ ಪ್ರಜ್ವಲ್ ಅವರ ಅರ್ಜುನ್ ಗೌಡ ಸಿನಿಮಾ ಏಪ್ರಿಲ್ ನಲ್ಲಿ ಶೂಟಿಂಗ್ ಆರಂಭವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


