ಸಿನಿಮಾ ಸುದ್ದಿ

ಪೂರ್ಣಗೊಳ್ಳದ ಶೂಟಿಂಗ್: ಕೆಜಿಎಫ್ ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ

ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಯಶ್ ಅಭಿನಯಿಸಿರುವ ಕೆಜಿಎಫ್ ಸಿನಿಮಾದ ಶೂಟಿಂಗ್ ಇನ್ನೂ 20 ದಿನ ಬಾಕಿ ಉಳಿದಿದ್ದು, ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ....

ಪೂರ್ಣಗೊಳ್ಳದ ಶೂಟಿಂಗ್: ಕೆಜಿಎಫ್ ಸಿನಿಮಾ ರಿಲೀಸ್ ಮತ್ತಷ್ಟು ವಿಳಂಬ
ಕೆಜಿಎಫ್ ಸಿನಿಮಾ ಸ್ಟಿಲ್
Published On :
ಬೆಂಗಳೂರು: ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಯಶ್ ಅಭಿನಯಿಸಿರುವ ಕೆಜಿಎಫ್ ಸಿನಿಮಾದ ಶೂಟಿಂಗ್ ಇನ್ನೂ 20 ದಿನ ಬಾಕಿ ಉಳಿದಿದ್ದು, ಮಾರ್ಚ್ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.
ಕೆಜಿಎಫ್ ಸಿನಿಮಾಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ, ಮತ್ತಷ್ಟು ತಿಂಗಳ ನಂತರ ಚಿತ್ರ ರಿಲೀಸ್ ಆಗಲಿದೆ, ಆದರೆ  ರಿಲೀಸ್ ಯಾವ ಡೇಟ್ ನಲ್ಲಿ ಆಗಲಿದೆ ಎಂಬುದನ್ನು ನಿರ್ದೇಶಕ ಪ್ರಶಾಂತ್ ನೀಲ್ ತಿಳಿಸಿಲ್ಲ, 
ಕೆಜಿಎಫ್ ಸಿನಿಮಾ ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ  ರಿಲೀಸ್ ಆಗತ್ತಿದ್ದು, ಚಿತ್ರದ ಪ್ರಮೋಷನ್ ಗೆ ಮತ್ತಷ್ಟು ಸಮಯದ ಅವಶ್ಯಕತೆಯಿದೆ ಎಂದು ಪ್ರಶಾಂತ್ ತಿಳಿಸಿದ್ದಾರೆ, ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಬೇಕೆಂಬ ಅವರಸದಲ್ಲಿದ್ದೆವು, ಆದರೆ ನಾವು ಹಾಕಿಕೊಂಡಿದ್ದ ಡೆಡ್ ಲೈನ್ ತಲುಪಲು ಸಾಧ್ಯವಾಗಿಲ್ಲ, ಭಾರತ ಮತ್ತು ಕರ್ನಾಟಕದ ಎಲ್ಲಾ ಪ್ರೇಕ್ಷಕರನ್ನು ತಲುಪುವಂತೆ ಪ್ರಮೋಷನ್ ಮಾಡಲು ಬಯಸಿರುವುದಾಗಿ ಹೇಳಿದ್ದಾರೆ.
ಕೆಲವರು ಕೆಜಿಎಫ್ ಸಿನಿಮಾ ಮುಂದಿನ ವರ್ಷ ರಿಲೀಸ್ ಆಗಲಿದೆ ಎಂದು ಹೇಳುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಶಾಂತ್ ಸಿನಿಮಾ ಬಿಡುಗಡೆ ದಿನಾಂಕವನ್ನು ಯಶ್ ಗೆ ಬಿಡಲಾಗಿದೆ. ನಿರ್ಮಾಪಕರ ಜೊತೆ ಯಶ್ ಗೆ ಹಲವು ವರ್ಷಗಳ ನಂಟಿದೆ ಎಂದು ತಿಳಿಸಿದ್ದಾರೆ.
ಇನ್ನೂ ಕೆಜಿಎಫ್ ಸಿನಿಮಾದ 2ನೇ ಭಾಗ ಕೂಡ ರಿಲೀಸ್ ಆಗಲಿದ್ದು,  ಮೊದಲನೇ ಭಾಗ ನನಗೆ ಸಮಾಧಾನ ತಂದರೆ 2ನೇ ಭಾಗದ ಚಿತ್ರೀಕರಣ ನಡೆಸಲಾಗುವುದು ಎಂದು ವಿವರಿಸಿದ್ದಾರೆ. ಕೆಜಿಎಫ್ ಸಿನಿಮಾಗಾಗಿ ಕಾಯುವುದರಲ್ಲಿ ಅರ್ಥವಿದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.