ಹೀರೋ ಧನಂಜಯ್ ಟಗರಿನಲ್ಲಿ ವಿಲನ್ ಆಗಿ ಪ್ರೇಕ್ಷಕರೆದುರು ಹಾಜರ್
ಇಲ್ಲಿಯವರೆಗೆ ಹೀರೋ ಪಾತ್ರ ಮಾಡುತ್ತಿದ್ದ ನಟ ಧನಂಜಯ್ ಸೂರಿ ನಿರ್ದೇಶನದ ಬಹು ನಿರೀಕ್ಷಿತ ....

Published On :
ಇಲ್ಲಿಯವರೆಗೆ ಹೀರೋ ಪಾತ್ರ ಮಾಡುತ್ತಿದ್ದ ನಟ ಧನಂಜಯ್ ಸೂರಿ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಟಗರಿನಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದಾರೆ. ನನ್ನ ವೃತ್ತಿ ಜೀವನದಲ್ಲಿ ಇದು ಹೊಸ ಆರಂಭ ಎಂದು ಸಿಟಿ ಎಕ್ಸ್ ಪ್ರೆಸ್ ಗೆ ಪ್ರತಿಕ್ರಿಯೆ ನೀಡಿದ್ದಾರೆ ಧನಂಜಯ್.
ಈ ಪ್ರಾಜೆಕ್ಟ್ ನ್ನು ಒಪ್ಪಿಕೊಳ್ಳುವುದರ ಹಿಂದಿನ ಆಸಕ್ತ ಸಂಗತಿಯೊಂದನ್ನು ಅವರು ಹೇಳುತ್ತಾರೆ.
ಜಿಮ್ ನಲ್ಲಿ ನಾನು ಮತ್ತು ನಿರ್ದೇಶಕ ಸೂರಿಯವರು ಸಿನಿಮಾದಲ್ಲಿ ನೆಗೆಟಿವ್ ಪಾತ್ರಗಳನ್ನು ಮಾಡುವುದರ ಬಗ್ಗೆ ಮಾತನಾಡುತ್ತಿದ್ದೆವು.ಎಂದಿನಂತೆ ಹಲವು ವಿಷಯಗಳ ಕುರಿತು ಮಾತುಕತೆ ನಡೆಸುತ್ತಿದ್ದೆವು. ಆಗ ಸೂರಿಯವರು ತಮ್ಮ ಮುಂದಿನ ಚಿತ್ರದಲ್ಲಿ ನೀವು ನೆಗೆಟಿವ್ ಪಾತ್ರ ಮಾಡುತ್ತೀರಾ, ಅದು ಶಿವರಾಜ್ ಕುಮಾರ್ ಎದುರಿಗೆ ಎಂದು ಕೇಳಿದರು. ನಾನು ಎರಡು ಯೋಚಿಸದೆ ಯಸ್ ಎಂದುಬಿಟ್ಟೆ. ಅಲ್ಲಿಂದ ಸೂರಿಯವರು ನನಗೆ ಟಗರಿನಲ್ಲಿ ದಾಲಿ ಎಂಬ ನೆಗೆಟಿವ್ ಪಾತ್ರಕ್ಕೆ ತಯಾರಿ ನಡೆಸಲು ಆರಂಭಿಸಿದರು ಎನ್ನುತ್ತಾರೆ.
ಸೂರಿ ಮತ್ತು ಶಿವಣ್ಣನವರು ಧನಂಜಯ್ ಅವರು ನೆಗೆಟಿವ್ ಪಾತ್ರವನ್ನು ಒಪ್ಪಿಕೊಳ್ಳಲು ಪ್ರಮುಖ ಕಾರಣ ಎನ್ನಬಹುದು. ಸೂರಿಯವರ ಜೊತೆ ಕೆಲಸ ಮಾಡಲು ಹಲವು ಸಮಯಗಳಿಂದ ಕಾಯುತ್ತಿದ್ದೆ, ಟಗರು ಚಿತ್ರದ ಮೂಲಕ ಆ ಅವಕಾಶ ಸಿಕ್ಕಿತು. ನಾನು ಸಣ್ಣ ಪಟ್ಟಣದಿಂದ ಬಂದವನು. ಶಿವಣ್ಣ ಅಂತವರ ಜೊತೆ ಕೆಲಸ ಮಾಡುವುದು ನನ್ನ ಆಸೆಯಾಗಿತ್ತು. ಅದು ನೆರವೇರಿತು ಎಂದು ಖುಷಿಯಿಂದ ಹೇಳುತ್ತಾರೆ ಧನಂಜಯ್.
ಕೆಲವು ನಟರು ವಿಲನ್ ಪಾತ್ರವನ್ನು ಮಾಡಲು ಇಚ್ಛಿಸುತ್ತಾರೆ, ಆ ಅವಕಾಶ ಕೆಲವರಿಗೆ ಮಾತ್ರ ಸಿಗುತ್ತದೆ ಎನ್ನುತ್ತಾರೆ ಧನಂಜಯ್.
ಟಗರಿನ ದಾಲಿ ನಂತರ ದರ್ಶನ್ ಅವರ ಮುಂದಿನ ಚಿತ್ರ ಯಜಮಾನದಲ್ಲಿ ಕೂಡ ಧನಂಜಯ್ ನೆಗೆಟಿವ್ ಪಾತ್ರ ಮಾಡುತ್ತಿದ್ದಾರೆ. ಇದು ಮತ್ತೊಂದು ಕುತೂಹಲಕಾರಿ ಪಾತ್ರವಾಗಿದ್ದು ದರ್ಶನ್ ಅವರ ಜೊತೆ ಮತ್ತೊಮ್ಮೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಇದೇ ಫೆಬ್ರವರಿ 27ರಿಂದ ಚಿತ್ರದ ಸೆಟ್ ಗೆ ಪ್ರವೇಶ ಪಡೆದ ಮೇಲೆ ಇದರ ಬಗ್ಗೆ ಹೆಚ್ಚು ಮಾತನಾಡಬಲ್ಲೆ. ಇನ್ನು ಮುಂದೆ ಕೂಡ ಸೂರಿಯವರ ಜೊತೆ ಕೆಲಸ ಮಾಡಲು ಇಚ್ಛಿಸುತ್ತೇನೆ ಎನ್ನುತ್ತಾರೆ.
ಟಗರಿನಲ್ಲಿ ಧನಂಜಯ್ ಅವರ ಡಾಲಿ ಪಾತ್ರವಲ್ಲದೆ ಇನ್ನಷ್ಟು ವಿಲನ್ ಗಳಿದ್ದಾರೆ, ಚಿಟ್ಟೆ ಪಾತ್ರವನ್ನು ವಶಿಷ್ಟ ಸಿಂಹ ಮತ್ತು ಜಿರಲೆ ಪಾತ್ರವನ್ನು ಸುದಿ ನಿರ್ವಹಿಸಿದ್ದಾರೆ. ಬೇಬಿ ಕೃಷ್ಣ ಪಾತ್ರವನ್ನು ದೇವನಾಥ್ ಮತ್ತು ಅಂಕಲ್ ಪಾತ್ರವನ್ನು ಸಚು ನಿರ್ವಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


