ವಿಂಕಿಂಗ್ ಪೂರ್ವ ನಿಯೋಜಿತವಲ್ಲ: ವೈರಲ್ ವಿಡಿಯೋ ಕುರಿತು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಹೇಳಿಕೆ
ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ ಎಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಹೇಳಿದ್ದಾರೆ.

Published On :
ತಿರುವನಂತಪುರಂ: ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ ಎಂದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರು ಹೇಳಿದ್ದಾರೆ.
ಮಲಯಾಳಂನ 'ಒರು ಅಡಾರ್ ಲವ್' ಚಿತ್ರದ ಮೂಲಕ ರಾತ್ರೋರಾಚ್ರಿ ಖ್ಯಾತಿ ಉತ್ತುಂಗಕ್ಕೆ ಏರಿರುವ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ಅವರ ತಮ್ಮ ವಿಂಕಿಂಗ್ (ಕಣ್ಣು ಸನ್ನೆ) ವಿಡಿಯೋ ಕುರಿತು ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದು, ವಿಂಕಿಂಗ್ ಅಥವಾ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ. ಅದು ಚಿತ್ರದ ಚಿತ್ರೀಕರಣದ ಭಾಗವಾಗಿತ್ತು. ಆದರೆ ಈ ದೃಶ್ಯಗಳು ಈ ಪರಿ ವೈರಲ್ ಆಗುತ್ತವೆ ಎಂದು ನಾವು ಊಹೆ ಕೂಡ ಮಾಡಿರಲಿಲ್ಲ ಎಂದು ಹೇಳಿದ್ದಾರೆ.
ಸುದ್ದಿಸಂಸ್ಥೆಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಪ್ರಿಯಾ, ಎಲ್ಲವೂ ಅಚಾನಕ್ಕಾಗಿ ನಡೆದು ಹೋಯಿತು. ಈ ದೃಶ್ಯಗಳಿಂದ ತಾನು ಈ ಮಟ್ಟಿಗೆ ಖ್ಯಾತಿ ಪಡೆಯುತ್ತೇನೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಇದಕ್ಕೆ ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದೇ ನನಗೆ ತಿಳಿಯುತ್ತಿಲ್ಲ. ನಿಜ ಹೇಳಬೇಕು ಎಂದರೆ ಕಣ್ಣು ಸನ್ನೆ ವಿಡಿಯೋ ಪೂರ್ವ ಯೋಜಿತವಲ್ಲ. ಅದು ಚಿತ್ರೀಕರಣದ ಒಂದು ಭಾಗವಾಗಿತ್ತು ಎಂದು ಹೇಳಿದ್ದಾರೆ.
ಇನ್ನು ನಟಿ ಪ್ರಿಯಾ ಪ್ರಕಾಶ್ ವಾರಿಯರ್ ನಟಿಸಿರುವ ಮಲಯಾಳಂನ 'ಒರು ಅಡಾರ್ ಲವ್' ಚಿತ್ರದ ಹಾಡು ಮತ್ತು ಚಿತ್ರದ ಟ್ರೈಲರ್ ವ್ಯಾಪಕ ವೈರಲ್ ಆಗುತ್ತಿದ್ದು, ಚಿತ್ರದಲ್ಲಿ ನಟಿ ಪ್ರಿಯಾ ಮಾಡುಲ ಕಣ್ಣು ಸನ್ನೆ (ವಿಂಕಿಂಗ್) ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಪ್ರಮುಖ ರಾಜಕಾರಣಿಗಳು, ಕ್ರೀಡಾಪಟುಗಳು, ನಟ-ನಟಿಯರ ಕುರಿತ ಹಾಸ್ಯ ಸನ್ನಿವೇಶಗಳನ್ನು ನಚಿ ಪ್ರಿಯಾ ಅವರ ವಿಂಕಿಂಗ್ ವಿಡಿಯೋ ಜೊತೆ ಸೇರಿಸುವ ಮೂಲಕ ಟ್ರಾಲ್ ಮಾಡಲಾಗುತ್ತಿದೆ.
ಇನ್ನು ಇದೇ ವಿಂಕಿಂಗ್ ವಿಡಿಯೋ ಇದೀಗ ಹಲವು ಸಂಘಟನೆಗಳ ಕೆಂಗಣ್ಣಿಗೂ ಗುರಿಯಾಗಿದ್ದು, ಕೆಲ ಮುಸ್ಲಿಂ ಸಂಘಟನೆಗಳು ನಟಿ ಪ್ರಿಯಾ ಮತ್ತು ಒರು ಅಡಾರ್ ಲವ್ ಚಿತ್ರ ತಂಡದ ವಿರುದ್ಧ ದೂರು ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಚಿತ್ರ ತಂಡದ ವಿರುದ್ಧ ಹೈದರಾಬಾದ್, ಮುಂಬೈ ಸೇರಿದಂತೆ ಹಲವೆಡೆ ದೂರು ದಾಖಲಾಗಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಮಾಲಿವುಡ್Viral Videoವೈರಲ್ ವಿಡಿಯೋOru Adaar LovePriya Prakash Varrierಪ್ರಿಯಾ ಪ್ರಕಾಶ್ ವಾರಿಯರ್ಒರು ಅಡಾರ್ ಲವ್Molly woodWinking Videoವಿಂಕಿಂಗ್ ವಿಡಿಯೋ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


