'ಕಿಸ್'ಗೆ ವ್ಯಾಲೆಂಟೈನ್ಸ್ ಡೇ ಡಬಲ್ ಸಂಭ್ರಮ: ನಟ ಯಶ್ ರಿಂದ ಪೋಸ್ಟರ್ ಬಿಡುಗಡೆ
ಕಿಸ್ ಚಿತ್ರತಂಡಕ್ಕೆ ವ್ಯಾಲೆಂಟೈನ್ಸ್ ಡೇಯ ಡಬಲ್ ಸಂಭ್ರಮ. ಎರಡು ಬಾರಿ ಚಿತ್ರದ ಮೋಷನ್ ಪೋಸ್ಟರ್ ...

Published On :
ಕಿಸ್ ಚಿತ್ರತಂಡಕ್ಕೆ ವ್ಯಾಲೆಂಟೈನ್ಸ್ ಡೇಯ ಡಬಲ್ ಸಂಭ್ರಮ. ಎರಡು ಬಾರಿ ಚಿತ್ರದ ಮೋಷನ್ ಪೋಸ್ಟರ್ ಅನಾವರಣಗೊಳ್ಳುತ್ತಿದೆ. ಅದಕ್ಕೆ ಕಾರಣ ಬೆಂಗಳೂರಿನಲ್ಲಿ ಚಿತ್ರದ ಪೋಸ್ಟರ್ ನ್ನು ಬಿಡುಗಡೆ ಮಾಡಿ ನಟ ಯಶ್ ಈಗಾಗಲೇ ಚಿಕಾಗೊಗೆ ತೆರಳಿದ್ದು ಅಲ್ಲಿ ತಮ್ಮ ಪತ್ನಿ ರಾಧಿಕಾ ಜೊತೆ ಇಂದು ಮತ್ತೆ ಚಿತ್ರದ ಮೊದಲ ನೋಟವನ್ನು ಅನಾವರಣ ಮಾಡಲಿದ್ದಾರೆ.
ಭಾರತೀಯ ಕಾಲಮಾನ ಪ್ರಕಾರ ಯಶ್ ಚಿತ್ರದ ಮೋಶನ್ ಪೋಸ್ಟರ್ ನ್ನು ಬಿಡುಗಡೆ ಮಾಡಿದ್ದಾರೆ. ನಂತರ ಇಂದು ಅಮೆರಿಕಾ ಕಾಲಮಾನ ಪ್ರಕಾರ ಅವರ ಪತ್ನಿ ರಾಧಿಕಾ ಜೊತೆ ಮತ್ತೊಮ್ಮೆ ಬಿಡುಗಡೆ ಮಾಡಲಿದ್ದಾರೆ ಎಂದು ನಿರ್ದೇಶಕ ಅರ್ಜುನ್ ಹೇಳುತ್ತಾರೆ.
ನಿರ್ದೇಶಕ ಅರ್ಜುನ್ ಮತ್ತು ಯಶ್ 15 ವರ್ಷಗಳ ಹಿಂದೆ ಚಿತ್ರೋದ್ಯಮಕ್ಕೆ ಒಟ್ಟಿಗೆ ಕಾಲಿಟ್ಟವರು. ಸಹಾಯಕ ನಿರ್ದೇಶಕರಾಗಿ ಅರ್ಜುನ್ ಚಿತ್ರೋದ್ಯಮಕ್ಕೆ ಬಂದರೆ ಯಶ್ ಧಾರವಾಹಿಯಲ್ಲಿ ತಮ್ಮ ನಟನೆ ಆರಂಭಿಸಿದರು. ಸಣ್ಣದಾಗಿ ಚೊಕ್ಕದಾಗಿ ಕಿಸ್ ಎಂದು ಚಿತ್ರಕ್ಕೆ ಹೆಸರಿಡಲಾಗಿದ್ದು ಅದನ್ನು ಯಶ್ ಅವರೇ ಇಟ್ಟಿದ್ದಾರೆ ಎಂದು ವಿವರ ನೀಡಿದರು ನಿರ್ದೇಶಕರು.
ಹೊಸಬರಾದ ವಿರಾಟ್ ಮತ್ತು ಶ್ರೀಲೀಲಾ ಕಿಸ್ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿದ್ದು ಅವರ ಜೊತೆಗೆ ಅನಂತ್ ನಾಗ್, ಸಾಧುಕೋಕಿಲಾ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತ ಚಿತ್ರಕ್ಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


