ಸಿನಿಮಾ ಸುದ್ದಿ

'ಆರೆಂಜ್'ನಲ್ಲಿ ಗಣೇಶ್ ಗೆ ಪ್ರಿಯಾ ಆನಂದ್ ಜೋಡಿ

ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ ಆರೆಂಜ್ ಚಿತ್ರೀಕರಣ ಮೊನ್ನೆ 11ಕ್ಕೆ ಆರಂಭಗೊಂಡಿತು...

'ಆರೆಂಜ್'ನಲ್ಲಿ ಗಣೇಶ್ ಗೆ ಪ್ರಿಯಾ ಆನಂದ್ ಜೋಡಿ
ಪ್ರಿಯಾ ಆನಂದ್, ಒಳಚಿತ್ರದಲ್ಲಿ ನಿರ್ದೇಶಕ ಪ್ರಶಾಂತ್ ರಾಜ್
Published On :
ಪ್ರಶಾಂತ್ ರಾಜ್ ನಿರ್ದೇಶನದ ಸಿನಿಮಾ ಆರೆಂಜ್ ಚಿತ್ರೀಕರಣ ಮೊನ್ನೆ 11ಕ್ಕೆ ಆರಂಭವಾಗಿದೆ. ಗೋಲ್ಡನ್ ಸ್ಟಾರ್ ಗಣೇಶ್ ಗೆ ನಾಯಕಿಯನ್ನು ನಿರ್ದೇಶಕರು ಹುಡುಕುತ್ತಿದ್ದರು. ಅಂತಿಮವಾಗಿ ರಾಜಕುಮಾರ ಚಿತ್ರದ ಖ್ಯಾತಿಯ ಪ್ರಿಯಾ ಆನಂದ್ ನಟಿಸುವುದು ಪಕ್ಕಾ ಆಗಿದೆ. 
ತಮ್ಮ ಮೊದಲ ಚಿತ್ರ ರಾಜಕುಮಾರ ಹಿಟ್ ಆದ ನಂತರ ಉತ್ತಮ ಚಿತ್ರಕ್ಕಾಗಿ ಕಾಯುತ್ತಿದ್ದ ಪ್ರಿಯಾ ಆನಂದ್ ಆರೆಂಜ್ ನ್ನು ಆಯ್ಕೆ ಮಾಡಿಕೊಂಡಿದ್ದಾರೆ. 
ಗಣೇಶ್ ಗೆ ಜೋಡಿಯಾಗಿ ವಿಶಿಷ್ಟ ನಾಯಕಿಗಾಗಿ ಹುಡುಕಾಡುತ್ತಿದ್ದೆ. ಪ್ರಿಯಾ ಸರಿಯಾದ ಜೋಡಿ ಎಂದು ಅನಿಸಿತು. ಅವರ ಸಿನಿಮಾ ವೃತ್ತಿ ಬಾಲಿವುಡ್ ನಿಂದ ಮಾಲಿವುಡ್ ವರೆಗೆ ವಿಸ್ತರಣೆಯಾಗಿದೆ. ತಮ್ಮ ವಿಶಿಷ್ಟ ನಟನೆ ಮೂಲಕ ಚಿತ್ರದಲ್ಲಿ ಪ್ರೇಕ್ಷಕರ ಮನಗೆಲ್ಲಬಹುದು ಎಂಬ ವಿಶ್ವಾಸ ನನಗಿದೆ. ಗಣೇಶ್ ಗೆ ಹೊಸ ಜೋಡಿಯನ್ನು ಹುಡುಕುತ್ತಿದ್ದಾಗ ಪ್ರಿಯಾ ಅವರೇ ಸೂಕ್ತ ಎನಿಸಿ ಅವರನ್ನು ಆಯ್ಕೆ ಮಾಡಿಕೊಂಡೆ ಎನ್ನುತ್ತಾರೆ ನಿರ್ದೇಶಕ ಪ್ರಶಾಂತ್ ರಾಜ್.
ಜೋಶುವಾ ಶ್ರೀಧರ್  ಅವರ ಸಂಗೀತ ಮತ್ತು ಸಂತೋಷ್ ರೈ ಪಾತಾಜೆ ಆರೆಂಜ್ ಚಿತ್ರಕ್ಕೆ ಛಾಯಾಗ್ರಹಣ ಒದಗಿಸಲಿದ್ದಾರೆ. ಸ್ಟಂಟ್ ಗಳ ನಿರ್ದೇಶನವನ್ನು ರವಿ ವರ್ಮ ನಿರ್ವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.