ಸಿನಿಮಾ ಸುದ್ದಿ

ಬಾಲಿವುಡ್ ಗೆ ಹಾರಲಿದ್ದಾಳೆ ಯೂ-ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ !

ಯೂಟರ್ನ್ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿ ಅದ್ಭತ ಯಶಸ್ಸು ಕಾಣುತ್ತಿರುವ ನಟಿ ಶ್ರದ್ಧಾ ಶ್ರೀನಾಥ್ ಹಿಂತಿರುಗಿ ನೋಡಿಯೇ ಇಲ್ಲ...

ಬಾಲಿವುಡ್ ಗೆ ಹಾರಲಿದ್ದಾಳೆ ಯೂ-ಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್ !
ಶ್ರದ್ಧಾ ಶ್ರೀನಾಥ್
Published On :
ಬೆಂಗಳೂರು: ಯೂಟರ್ನ್ ಮೂಲಕ ಕನ್ನಡ ಸಿನಿಮಾ ರಂಗ ಪ್ರವೇಶಿಸಿ ಅದ್ಭತ ಯಶಸ್ಸು ಕಾಣುತ್ತಿರುವ ನಟಿ ಶ್ರದ್ಧಾ ಶ್ರೀನಾಥ್ ಹಿಂತಿರುಗಿ ನೋಡಿಯೇ ಇಲ್ಲ. ವೃತ್ತಿಯಿಂದ ವಕೀಲೆಯಾಗಿರುವ ಶ್ರದ್ಧಾ ಸಿನಿಮಾ ರಂಗ ಪ್ರವೇಶಿಸಿದ್ದು ಆಕಸ್ಮಿಕ.
ತಮ್ಮ ಅದ್ಭುತ ಪ್ರತಿಭೆಯಿಂದ ಕನ್ನಡ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಯಶಸ್ಸು ಕಾಣುತ್ತಿರುವ ಶ್ರದ್ಧಾ ಸದ್ಯದಲ್ಲೇ ಬಾಲಿವುಡ್ ತಮ್ಮ ಅದೃಷ್ಟ ಪರೀಕ್ಷೆಗೆ ಹೊರಟಿದ್ದಾರೆ.
ಟಿಗ್ಮಾಂಶು ದುಲಿಯಾ ನಿರ್ದೇಶನದ ಮಿಲನ್ ಟಾಕೀಸ್ ಎಂಬ ಸಿನಿಮಾದಲ್ಲಿ ಹಾಲಿವುಡ್ ನಟ ಅಲಿ ಪೈಜಲ್ ಗೆ ನಾಯಕಿಯಾಗಲಿದ್ದಾರೆ. ಶಿವರಾತ್ರಿಯಂದು ಶ್ರದ್ಧಾ ಈ ಪ್ರಾಜೆಕ್ಟ್ ಸಹಿ ಮಾಡಿದ್ದಾರೆ.
ಈ ಬಗ್ಗೆ ಸಿನಿಮಾ ಎಕ್ಸ್ ಪ್ರೆಸ್ ಜೊತೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಅವಕಾಶ ದೊರೆತಿರುವುದು ನಿಜವಾಗಿಯೂ ಅನಿರೀಕ್ಷಿತ, ದಕ್ಷಿಣದ ಎಲ್ಲಾ ಚಿತ್ರರಂಗಗಳೂ ಒಂದೇ ರೀತಿ. ಆದರೆ ಬಾಲಿವುಡ್ ಮಾತ್ರ ವಿಭಿನ್ನ, ನಿರ್ದೇಶಕರೊಬ್ಬರು ನನ್ನ ಹೆಸರು ಶಿಫಾರಸು ಮಾಡಿದ್ದರು, ನಾನು ಆಡಿಶನ್ ಗೆ ಹೋಗಿ ಬಂದೆ, ಕೂಡಲೇ ನನಗೆ ಆವಕಾಶ ಕೊಟ್ಟರು ಎಂದು ಶ್ರದ್ಧಾ ತಿಳಿಸಿದ್ದಾರೆ.
ಮಾರ್ಚ್ ತಿಂಗಳಿನಲ್ಲಿ ಮಿಲನ್ ಟಾಕೀಸ್ ಶೂಟಿಂಗ್ ನಲ್ಲಿ ಶ್ರದ್ದಾ ಭಾಗವಹಿಸಲಿದ್ದಾರೆ, ಉತ್ತರ ಪ್ರದೇಶದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದೆ. ಜೊತೆಗೆ ಲಕ್ನೋ ಮತ್ತು ಮಥುರಾಗಳಲ್ಲಿಯೂ ಶೂಟಿಂಗ್ ನಡೆಯಲಿದೆ. ಸರಾಗವಾಗಿ ನಾನು ಹಿಂದಿ ಮಾತನಾಡಬಲ್ಲೆ ಎಂದು ಹೇಳಿದ್ದಾರೆ.
ನಿರ್ದೇಶಕ ತಿಗ್ಮಾಂಶು  ಅವರ ಜೊತೆ ಕೆಲಸ ಮಾಡುತ್ತಿರುವು ತುಂಬಾ ಸಂತಸವಾಗುತ್ತಿದೆ. ಹಿಂದಿ ಸಿನಿಮಾ ಇಂಡಸ್ಟ್ರಿ ಸಂಪೂರ್ಣ ವಿಭಿನ್ನ,  ಕಾರ್ಯ ಶೈಲಿಯಲ್ಲಿಯೂ ಭಿನ್ನವಾಗಿದೆ. ದಕ್ಷಿಣ ಸಿನಿಮಾ ರಂಗದಲ್ಲಿ 2 ವರ್ಷ ಕೆಲಸ ಮಾಡಿದ್ದೇನೆ, ಬಾಲಿವುಡ್ ಆಸಕ್ತಿದಾಯಕವಾಗಿದೆ ಎಂದು ಹೇಳಿದ್ದಾರೆ,
ಬಾಲಿವುಡ್ ಗೆ ಹೋದ ಹಲವು ನಾಯಕಿಯರು ಮುಂಬಯಿಯಲ್ಲಿಯೇ ಸೆಟಲ್ ಆಗಿದ್ದಾರೆ, ಕೆಲಸದ ವೈಖರಿ ಮೇಲೆ ನಿರ್ಧರಿಸುತ್ತೇನೆ, ವಿವಿಧ ಇಂಡಸ್ಟ್ರಿಗಳಲ್ಲಿ ಕೆಲಸ ಮಾಡಲು ನನಗೆ ಖುಷಿಯಾಗುತ್ತಿದೆ. ದಕ್ಷಿಣ ಚಿತ್ರರಂಗದಿಂದ ನನ್ನ ಜೀವನ ಬದಲಾಗಿದೆ. ಅದೊಂದು ಅತ್ಯುತ್ತಮ ಅನುಭವ ನೀಡಿದೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.