'ಕಿರಿಕ್ ಪಾರ್ಟಿ'ಯ ಚಂದನ್ ಆಚಾರ್ಯ ಇನ್ನು ಹೀರೋ
ಶರಣ್ ನಾಯಕನಾಗಿ ನಟಿಸಿದ ರಾಂಬೊ ಚಿತ್ರದ ಮೂಲಕ ತಮ್ಮ ಸಿನಿವೃತ್ತಿಯನ್ನು ಆರಂಭಿಸಿದ ....

ಶರಣ್ ನಾಯಕನಾಗಿ ನಟಿಸಿದ ರಾಂಬೊ ಚಿತ್ರದ ಮೂಲಕ ತಮ್ಮ ಸಿನಿವೃತ್ತಿಯನ್ನು ಆರಂಭಿಸಿದ ಚಂದನ್ ಆಚಾರ್ಯ ಖ್ಯಾತಿ ಗಳಿಸಿದ್ದು ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅಲೆಕ್ಸಾಂಡರ್ ಗೇಬ್ರಿಯಲ್ ಪಾತ್ರ ಮಾಡುವ ಮೂಲಕ. ನಂತರ ಅದೇ ತರಹದ ಪಾತ್ರವನ್ನು ಮುಗುಳು ನಗೆಯಲ್ಲಿ ಕೂಡ ಮಾಡಿದರು.
ಇದೀಗ ಅವರು ನಾಯಕನಾಗಿ ಚಿತ್ರರಂಗದಲ್ಲಿ ಬಡ್ತಿ ಪಡೆದಿದ್ದು, ಆರ್.ವೆಂಕಟೇಶ್ ಬಾಬು ಅವರ ಸಿನಿಮಾದಲ್ಲಿ ನಾಯಕನಾಗಿ ನಟಿಸಲಿದ್ದಾರೆ. ವೆಂಕಟೇಶ್ ಬಾಬು ಅವರು ಕಳೆದ ಏಳು ವರ್ಷಗಳಿಂದ ಸ್ಯಾಂಡಲ್ ವುಡ್ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು 10ರಿಂದ 15 ಸಿನಿಮಾಗಳಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದಾರೆ. ಕೆಲವು ಸಿನಿಮಾಗಳನ್ನು ಹೆಸರಿಸುವುದಾದರೆ ನಿರ್ದೇಶಕ ಕೃಷ್ಣ ಅವರ ಜೊತೆ ಹೆಬ್ಬುಲಿಯಲ್ಲಿ ಮತ್ತು ಆರ್ .ಚಂದ್ರು ಅವರ ಬಳಿ ನಾಲ್ಕು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಅವರ ಡಿಜೆ ಸಿನಿಮಾಕ್ಕೆ ಸ್ವತಃ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನೂ ಹೆಸರಿಡದ ಈ ಸಿನಿಮಾವನ್ನು ಡಾ.ಆರ್.ವಿಜಯ್ ಕುಮಾರ್ ನಿರ್ಮಾಣ ಮಾಡುತ್ತಿದ್ದು ರಾಘವೇಂದ್ರ ಬಿ.ಕೋಲಾರ ಅವರ ಛಾಯಾಗ್ರಹಣವಿದೆ. ಯಶ್ ಅವರ ಜೊತೆಗೆ ಕೆಲಸ ಮಾಡಿರುವ ರಾಘವೇಂದ್ರ ಅವರಿಂದ ಸಿಕ್ಕಿರುವ ಬೆಂಬಲಕ್ಕೆ ಖುಷಿಯಾಗಿದ್ದಾರೆ. ಮಾರ್ಚ್ ನಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ. ಅಂದೇ ಚಿತ್ರದ ಶೀರ್ಷಿಕೆ ಕೂಡ ಘೋಷಣೆಯಾಗಲಿದೆ.
ಈ ಮಧ್ಯೆ ವೆಂಕಟೇಶ್ ಬೆಂಗಳೂರು ಡೇಸ್ ಮತ್ತು ರಾಜ ರಾಣಿ ಖ್ಯಾತಿಯ ಮಲಯಾಳಂ ನಟಿ ನಜ್ರಿಯಾ ನಾಜಿಮ್ ಅವರನ್ನು ಹಿರೋಯಿನ್ ಆಗಿ ತರುವ ಯೋಜನೆಯಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ಚಿತ್ರ ನಿರ್ಮಾಪಕರು ಮತ್ತು ನಟಿ ಮಧ್ಯೆ ಮಾತುಕತೆ ನಡೆಯುತ್ತಿದೆ. ಇನ್ನು ನಜ್ರಿಯಾ ಅವರಿಂದ ಅಂತಿಮ ಒಪ್ಪಿಗೆ ಸಿಕ್ಕಿದರೆ, ಇದೇ ಅವರ ಮೊದಲ ಸ್ಯಾಂಡಲ್ ವುಡ್ ಚಿತ್ರವಾಗಲಿದೆ.
ಚಿತ್ರದಲ್ಲಿ ಅಚ್ಯುತ್ ಕುಮಾರ್, ಸಿತಾರಾ, ಸಾಧು ಕೋಕಿಲಾ, ಶಿವರಾಜ್ ಕೆ.ಆರ್.ಪೇಟೆ ಮತ್ತು ಧರ್ಮಣ್ಣ ಕೂಡ ಇದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


