ಸಿನಿಮಾ ಸುದ್ದಿ

ರಜನಿಕಾಂತ್ ರ 2.0 ಚಿತ್ರಕ್ಕೆ ಮೊದಲೇ 'ಕಾಳ': ಏಪ್ರಿಲ್ 14ಕ್ಕೆ ಬಿಡುಗಡೆ ಸಾಧ್ಯತೆ

ರಜನಿಕಾಂತ್ ಅಭಿನಯದ 'ಕಾಳ' ಚಿತ್ರ ಏಪ್ರಿಲ್ 14ಕ್ಕೆ ಬಿಡುಗಡೆಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ...

ರಜನಿಕಾಂತ್ ರ 2.0 ಚಿತ್ರಕ್ಕೆ ಮೊದಲೇ 'ಕಾಳ': ಏಪ್ರಿಲ್ 14ಕ್ಕೆ ಬಿಡುಗಡೆ ಸಾಧ್ಯತೆ
ಕಾಳ ಚಿತ್ರದಲ್ಲಿ ರಜನಿಕಾಂತ್
Published On :
ರಜನಿಕಾಂತ್ ಅಭಿನಯದ 'ಕಾಳ' ಚಿತ್ರ ಏಪ್ರಿಲ್ 14ಕ್ಕೆ ಬಿಡುಗಡೆಯಾಗಬಹುದು ಎಂಬ ಸುದ್ದಿ ಹರಿದಾಡುತ್ತಿದೆ. ಆರಂಭದಲ್ಲಿ ಏಪ್ರಿಲ್ 14ಕ್ಕೆ ಅವರ 2.0 ಚಿತ್ರ ಬಿಡುಗಡೆಯಾಗುತ್ತದೆ ಎಂದು ಹೇಳಲಾಗುತ್ತಿತ್ತು. 
ನಂಬಲರ್ಹ ಮೂಲಗಳ ಪ್ರಕಾರ, ಶಂಕರ್ ನಿರ್ದೇಶನದ 2.0 ಚಿತ್ರದ ಸಿಜಿ ಕೆಲಸಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ ಬಿಡುಗಡೆ ದಿನಾಂಕ ಮುಂದೆ ಹೋಗಬಹುದೆಂದು ಹೇಳಲಾಗುತ್ತಿದೆ. ಕಾಲ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ತ್ವರಿತವಾಗಿ ಸಾಗುತ್ತಿದ್ದು, ಚಿತ್ರದ ಸಂಯೋಜಕ ಸಂತೋಷ್ ನಾರಾಯಣ್ ಚಿತ್ರದ ಹಿನ್ನೆಲೆ ಕೆಲಸ ಆರಂಭಿಸಿದ್ದಾರೆ.
ಈ ಚಿತ್ರಕ್ಕೆ ಧನುಷ್ ಬಂಡವಾಳ ಹಾಕಿದ್ದು, ನಿರ್ದೇಶಕ ರಂಜಿತ್ ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿದ ನಂತರ ಚಿತ್ರವನ್ನು ಅವರಿಗೆ ತೋರಿಸುವ ಯೋಜನೆಯಲ್ಲಿದ್ದಾರೆ. ಎಲ್ಲ ಕೆಲಸಗಳು ಅಂದುಕೊಂಡಂತೆ ನಡೆದರೆ ರಜನಿಕಾಂತ್ ಅವರ ಬಹುನಿರೀಕ್ಷಿತ ಚಿತ್ರ ಏಪ್ರಿಲ್ ನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. 
2016ರಲ್ಲಿ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ತೆರೆಗೆ ಬಂದ ಸುದೀರ್ಘ ಸಮಯದ ನಂತರ ತೆರೆಗೆ ಬರುತ್ತಿರುವ ರಜನಿಕಾಂತ್ ಸಿನಿಮಾ ಕಾಳ ಆಗಿದೆ. ಚಿತ್ರದಲ್ಲಿ ಬಾಲಿವುಡ್ ನಟ ನಟಿಯರಾದ ನಾನಾ ಪಾಟೇಕರ್, ಹುಮಾ ಖುರೇಷಿ, ಅಂಜಲಿ ಪಾಟೀಲ್ ಮತ್ತು ಸಮುತಿರಕನಿ ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.