ಸಿನಿಮಾ ಸುದ್ದಿ

ಜಯಣ್ಣ ಕಂಬೈನ್ಸ್ ಮೂಲಕ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ?

ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಧೀರೇನ್ ಕುಮಾರ್ ಎಂಬ ನಟನ ಆಗಮನವಾಗುತ್ತಿದೆ. ರಾಮ್ ಕುಮಾರ್ ...

ಜಯಣ್ಣ ಕಂಬೈನ್ಸ್ ಮೂಲಕ ಧೀರೆನ್ ರಾಮ್ ಕುಮಾರ್ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ?
ಧೀರೆನ್ ರಾಮ್ ಕುಮಾರ್
Published On :
ಸ್ಯಾಂಡಲ್ ವುಡ್ ನಲ್ಲಿ ಈ ವರ್ಷ ಧೀರೇನ್ ಕುಮಾರ್ ಎಂಬ ನಟನ ಆಗಮನವಾಗುತ್ತಿದೆ. ರಾಮ್ ಕುಮಾರ್ ಮತ್ತು ಪೂರ್ಣಿಮಾ ರಾಜ್ ಕುಮಾರ್ ಮಗನಾದ ಧೀರೆನ್ ಕುಮಾರ್ ರನ್ನು ಚಿತ್ರಕ್ಕೆ ಹಾಕಿಕೊಳ್ಳಲು ಕೆಲವು ನಿರ್ಮಾಪಕರು ಮುಂದೆ ಬಂದಿದ್ದಾರೆ ಎಂಬ ಮಾತುಗಳು ಗಾಂಧಿನಗರದಿಂದ ಕೇಳಿಬರುತ್ತಿದೆ. ನಿರ್ಮಾಪಕ ಜಯಣ್ಣ ತಮ್ಮ ಬ್ಯಾನರ್ ನಡಿ ಧೀರೇನ್ ಕುಮಾರ್ ನನ್ನು ಪರಿಚಯಿಸಲು ಮುಂದಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಜಯಣ್ಣ ಅವರು ಈಗಾಗಲೇ ಕೆಲವು ನಿರ್ದೇಶಕರ ಜೊತೆ ಮಾತುಕತೆ ನಡೆಸಿ ಧೀರೆನ್ ಮತ್ತು ಅವರ ಪೋಷಕರಿಗೆ ಕಥೆ ಹೇಳುವಂತೆ ಕೇಳಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೊಂದೆರಡು ವಾರಗಳಲ್ಲಿ ವಿಷಯ ಖಚಿತವಾಗಬಹುದು. ಈ ಮಧ್ಯೆ ಚಿತ್ರರಂಗದ ಪ್ರವೇಶಕ್ಕಾಗಿ ಧೀರೆನ್ ಕೂಡ ಸಜ್ಜಾಗುತ್ತಿದ್ದಾರೆ.
ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಅವರು ಹಾಕಿರುವ ಫೋಟೋ ಗಮನ ಸೆಳೆಯುತ್ತಿದೆ. ತಮ್ಮ ವೃತ್ತಿರಂಗದ ಕುರಿತು ಮಾವಂದಿರಾದ ಶಿವರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.