ಸಿಂಪಲ್ ಸುನಿ ಜೊತೆ ಶರಣ್ ಮುಂದಿನ ಚಿತ್ರ: ಮಹಾಭಾರತದ ತ್ರಿಶಂಕು ಸ್ವರ್ಗ ಕಥೆ!
ಸಿಂಪಲ್ ಸುನಿ ಈಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಶರಣ್ ನಾಯಕ.

Published On :
ಬೆಂಗಳೂರು: ಸಿಂಪಲ್ ಸುನಿ ಈಗ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನ್ ನಿರ್ಮಾಣದಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಶರಣ್ ನಾಯಕ.
ಮೊದಲ ಬಾರಿಗೆ ಸುನಿ ಮತ್ತು ಶರಣ್ ಕಾಂಬಿನೇಷನ್‌ನಲ್ಲಿ ಈ ಸಿನಿಮಾ ಮೂಡಿ ಬರಲಿದ್ದು, 'ಸುನಿ ಜತೆ ಕೆಲಸ ಮಾಡುತ್ತಿರುವುದು ಖುಷಿ ಆಗುತ್ತಿದೆ. ಸಿನಿಮಾ ರಂಗದಲ್ಲಿ ಅವರು ಹೊಸ ಅಲೆಯನ್ನು ಸೃಷ್ಟಿ ಮಾಡಿದವರು. ಅವರ ಸಿನಿಮಾಗಳ ಬಗ್ಗೆ ನನಗೂ ಕುತೂಹಲವಿದೆ.ಇದುವರೆಗೂ ನೋಡಿರುವ ಶರಣ್ ಈ ಸಿನಿಮಾದಲ್ಲಿ ಇರುವುದಿಲ್ಲ' ಎಂದಿದ್ದಾರೆ.
'ಮಹಾಭಾರತದಲ್ಲಿ ತ್ರಿಶಂಕು ಸ್ವರ್ಗ ಬರುತ್ತಲ್ಲ, ಅದನ್ನು ಸಿನಿಮಾಗೆ ಬಳಸಿಕೊಂಡಿದ್ದೇವೆ. ಈ ಸಿನಿಮಾ ನನ್ನ ಸೋಲೋ ನಿರ್ಮಾಣದ ಚಿತ್ರ. ಒಂದೇ ಹಂತದಲ್ಲಿ ಶೂಟಿಂಗ್ ಮಾಡುವ ಪ್ಲ್ಯಾನ್ ಇದೆ ಎಂದು ಸುನಿ ಹೇಳಿದ್ದಾರೆ, ಆದರೆ ಚಿತ್ರಕ್ಕೆ ಇನ್ನು ಟೈಟಲ್ ಇಡಲಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


