ಮಂಕಿ ಕ್ಯಾಪ್ ಧರಿಸಿ 'ಕೆಜಿಎಫ್' ವೀಕ್ಷಣೆ ಮಾಡಿದ ಜಗ್ಗೇಶ್ ಗೆ ರೋಚಕ ಅನುಭವ!
ನವರಸ ನಾಯಕ ಜಗ್ಗೇಶ್ ಅವರು ಮಾರು ವೇಷದಲ್ಲಿ ಥಿಯೇಟರ್ಗೆ ಹೋಗಿ ಕೆಜಿಎಫ್ ಚಿತ್ರ ವೀಕ್ಷಣೆ ಮಾಡಿದ್ದು, ಈ ವೇಳೆ ಥಿಯೇಟರ್ ನಲ್ಲಿ ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ.

Published On :
ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಮಾರು ವೇಷದಲ್ಲಿ ಥಿಯೇಟರ್ಗೆ ಹೋಗಿ ಕೆಜಿಎಫ್ ಚಿತ್ರ ವೀಕ್ಷಣೆ ಮಾಡಿದ್ದು, ಈ ವೇಳೆ ಥಿಯೇಟರ್ ನಲ್ಲಿ ತಮಗಾದ ರೋಚಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಸಿನಿಮಾ ನೋಡಿದ ಬಳಿಕ ಟ್ವೀಟ್ ಮಾಡಿರುವ ಅವರು, ಯಶ್ ಅವರು ಕಲಾ ಸೇವೆಯಲ್ಲಿ ಸಾರ್ಥಕ ಸಾಧನೆ ಮಾಡಿಬಿಟ್ಟಿದ್ದಾರೆ ಎಂದು ಹೊಗಳಿದ್ದಾರೆ. ಅಲ್ಲದೆ ನಿರ್ದೇಶಕ ಪ್ರಶಾಂತ ನೀಲ್ ಅವರನ್ನೂ ಜಗ್ಗೇಶ್ ಶ್ಲಾಘಿಸಿದ್ದಾರೆ.
ಲುಂಗಿ ಉಟ್ಟು, ಹವಾಯಿ ಚಪ್ಪಲಿ ಹಾಕಿಕೊಂಡು, ಮಂಕಿ ಕ್ಯಾಪ್ ಧರಿಸಿ ಹೋಗಿದ್ದ ಜಗ್ಗೇಶ್, 'ಬಹಳ ದಿನಗಳ ನಂತರ ಒಬ್ಬನೇ ಸಿನಿಮಾಕ್ಕೆ ಹೋಗಿದ್ದೇನೆ. 38 ವರ್ಷಗಳ ಹಿಂದೆ ನಾನು ಹೀಗೆ ಹೋಗುತ್ತಿದ್ದೆ. ಕೆಜಿಎಫ್ ಚಿತ್ರ ವೀಕ್ಷಿಸುತ್ತಿದ್ದಾಗ ನನ್ನ ಪಕ್ಕ ಸುಮಾರು 17 ವಯಸ್ಸಿನ ಹುಡುಗ ಕುಳಿತಿದ್ದ. ಅವನ ಜತೆ ಧ್ವನಿ ಬದಲಾವಣೆ ಮಾಡಿಕೊಂಡು ಆಗಾಗ ಚರ್ಚಿಸುತ್ತಿದ್ದೆ. ಅವನು ದರ್ಶನ್ ಅವರ ಪಕ್ಕಾ ಅಭಿಮಾನಿಯಂತೆ. ಪ್ರತಿ ಪ್ರಶ್ನೆಗೂ ಸಿನಿಮಾ ಚಿಂದಿ ಎನ್ನುತ್ತಿದ್ದ. ಕನ್ನಡ ಗೆಲ್ಲಬೇಕು ಸಾರ್, ಮಗಂದು ಬೇರೆ ಭಾಷೆಗೆ ಜೈ ಅಂತಾರೆ. ಈಗ ಅವರ ಪುಂಗಿ ಬಂದ್ ಎಂದ' ಎಂದು ಟ್ವೀಟ್ ಮಾಡಿದ್ದಾರೆ.
'2ಅಕ್ಷರದ ನಟ 3ಅಕ್ಷರದ ಮನಗಳ 2ಅಕ್ಷರದಿಂದ ಕಲಾಸೇವೆಯಲ್ಲಿ ಸಾರ್ಥಕ ಸಾಧನೆ ಮಾಡಿಬಿಟ್ಟ #hatsoff dear.. "ಯಶ್ ಕನ್ನಡ ಮನಗಳ ಖುಷಿ ಪಡಿಸಿದ" ನಿರ್ದೇಶಕ #neel ನೀನು ಅಸಮಾನ್ಯ ಪ್ರತಿಭೆ..ಕನ್ನಡವೆಂದರೆ ಇದ್ದ ತಾತ್ಸಾರ ಮನಸ್ಥಿತಿ ಬದಲಾಗುವಂತೆ ಮಾಡಿಬಿಟ್ಟಿರಿ..#hombalefilms ನಿಮ್ಮ ಎದೆಗಾರಿಕೆಗೆ ನನ್ನ ಸಲಾಂ.. #Kgf ನೋಡಿ ಖುಷ್ ಆದೆ..'
'ಲುಂಗಿ ಹವಾಯ್ ಚಪ್ಪಲಿ ಮಂಕಿಕ್ಯಾಪ್ ಹಾಕಿ ಬಹಳ ದಿನದ ನಂತರ ಒಬ್ಬನೆ ಮುಂದಿನ ಕ್ಲಾಸ್ಗೆ ಹೋಗಿ #kgf ನೋಡಿದೆ..38ವರ್ಷದ ಹಿಂದೆ ನಾನು ಹೀಗೆ ಸಿನಿಮಾಗೆ ಹೋಗುತ್ತಿದ್ದದ್ದು! ಹಾಗೆ ಹೋದದ್ದು ಸಾಮಾನ್ಯ ಜೀವನ enjoy ಮಾಡಲು..ಕಾರಾಪುರಿ ಟೀ #interval ನಲ್ಲಿ ಮಜನೀಡಿತು..ಯಾರು ಗುರುತು ಹಿಡಿಯದಂತೆ ಜಾಗ್ರತೆ ವಹಿಸಿದೆ ಕಾರಣ ಏಕಾಂತ enjoyment..'
'ನನ್ನಪಕ್ಕ ಸುಮಾರು 17ಪ್ರಾಯದ ಹುಡುಗ ಹೋಟೆಲ್ ಸರ್ವರ್ ಕೂತಿದ್ದ! ಅವನಜೊತೆ ದ್ವನಿಬದಲಾಯಿಸಿ ನಡುನಡುವೆ ಚರ್ಚಿಸುತ್ತಿದೆ ಪ್ರತಿಪ್ರಶ್ನೆಗೆ ಅವನ ಉತ್ತರ ಚಿಂದಿಅನ್ನುತ್ತಿದ್ದ!ಅವನು ಪಕ್ಕ ದರ್ಶನ #fan ಅಂತೆ!ಅವನು ಹೇಳಿದ ಮಾತು ಕಣ್ಣುಒದ್ದೆಯಾಯಿತು!ಕನ್ನಡ ಗೆಲ್ಲಬೇಕು ಸಾರ್ ಮಗಂದು ಬರಿ ಬೇರೆ ಭಾಷೆಗೆ ಜೈಅಂತಾರೆ ಈಗ ಅವರ ಪುಂಗಿಬಂದ್ ಅಂದ' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


