ಪವರ್ ಸ್ಟಾರ್ ಡ್ಯಾನ್ಸ್ ಚಿಂದಿ, ನಟ ಸಾರ್ವಭೌಮ ಟೀಸರ್ ಗೆ ಯಶ್ ಮೆಚ್ಚುಗೆ
ಪುನೀತ್ ರಾಜ್ ಕುಮಾರ್ ಅವರ ಮುಂಬರುವ ನಟ ಸಾರ್ವಭೌಮ ಟೀಸರ್ ವೀಕ್ಷಿಸಿದ್ದು, ಡ್ಯಾನ್ಸ್ ಚಿಂದಿಯಾಗಿದೆ ಎಂದು ರಾಕಿಂಗ್ ಸ್ಟಾರ್ ಯಶ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ಕೆಜಿಎಫ್ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ದಶ ದಿಕ್ಕುಗಳಿಗೂ ಪಸರಿಸುವಂತೆ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಹಾಗೂ ಆ ಚಿತ್ರತಂಡಕ್ಕೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆಯಾಗುತ್ತಿದೆ. ಸ್ಯಾಂಡಲ್ ವುಡ್ ನ ಬಹುತೇಕ ನಟ, ನಟಿಯರು ಕೂಡಾ ಬೆಂಬಲಿಸುವ ನಾವೆಲ್ಲಾ ಒಂದೇ ಎಂಬ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ವಿಸ್ತರಿಸಿರುವ ಕೆಜಿಎಫ್ ಚಿತ್ರವನ್ನು ಶಿವಣ್ಣ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಕಿಚ್ಚ ಸುದೀಪ್, ದರ್ಶನ್ , ಸೇರಿದಂತೆ ಅನೇಕ ಹಿರಿ, ಕಿರಿಯ ನಟ, ನಟಿಯರು ಬೆಂಬಲಿಸಿದ್ದು, ಇನ್ನಷ್ಟು ಇಂತಹ ಚಿತ್ರಗಳು ನಿರ್ಮಾಣವಾಗಲಿ ಎಂದು ಆಶಿಸಿದ್ದಾರೆ.
ಕೆಜಿಎಫ್ ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಫೇಸ್ ಬುಕ್ , ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣಗಳ ಮೂಲಕ ಚಿತ್ರಕ್ಕೆ ಶುಭ ಕೋರಿದ್ದರು.
ಕೆ ಕೆಜಿಎಫ್ ತಂಡಕ್ಕೆ ಶುಭಾಶಯ ಕೋರಿ ಪುನೀತ್ ಮಾಡಿದ ಟ್ವೀಟ್ ಗೆ ರಾಕಿಂಗ್ ಸ್ಟಾರ್ ಯಶ್ ರೀ ಟ್ವೀಟ್ ಮಾಡಿದ್ದು, ಪುನೀತ್ ರಾಜ್ ಕುಮಾರ್ ಅವರ ಮುಂಬರುವ ನಟ ಸಾರ್ವಭೌಮ ಟೀಸರ್ ವೀಕ್ಷಿಸಿದ್ದು, ಡ್ಯಾನ್ಸ್ ಚಿಂದಿಯಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ಆ ಚಿತ್ರ ಬಿಡುಗಡೆಗೆ ಕುತೂಹಲದಿಂದ ಕಾಯುತ್ತಿರುವುದಾಗಿ ಯಶ್ ತಿಳಿಸಿದ್ದಾರೆ.
Thank you sir.. it means a lot to me... Saw Natasarvabhowma teaser... step chindi... looking forward to it
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


