ಸಿನಿಮಾ ಸುದ್ದಿ

ಕನ್ನಡಪ್ರಭ.ಕಾಮ್ ಇಂಪ್ಯಾಕ್ಟ್: ಕೆಜಿಎಫ್ ಸೋರಿಕೆಯಾಗಿದ್ದ ಮೂವಿ ರೂಲ್ಸ್ ವೆಬ್‌ಸೈಟ್‌ ಬ್ಲಾಕ್!

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದ ಹಿಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಆನ್ ಲೈನ್...

ಕನ್ನಡಪ್ರಭ.ಕಾಮ್ ಇಂಪ್ಯಾಕ್ಟ್: ಕೆಜಿಎಫ್ ಸೋರಿಕೆಯಾಗಿದ್ದ ಮೂವಿ ರೂಲ್ಸ್ ವೆಬ್‌ಸೈಟ್‌ ಬ್ಲಾಕ್!
ಯಶ್
Published On :
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತೀ ದೊಡ್ಡ ಪ್ರಮಾಣದ ಹಿಟ್ ಎಂಬ ಖ್ಯಾತಿಗೆ ಪಾತ್ರವಾಗಿರುವ ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಿತ್ರ ಆನ್ ಲೈನ್ ನಲ್ಲಿ ಸಂಪೂರ್ಣ ಪ್ರಮಾಣದಲ್ಲಿ ಲೀಕ್ ಆಗಿದೆ ಎಂಬ ಸುದ್ದಿ ಕನ್ನಡಪ್ರಭ.ಕಾಮ್ ನಲ್ಲಿ ವರದಿಯಾದ ನಂತರ ವೆಬ್ ಸೈಟನ್ನು ಬ್ಲಾಕ್ ಮಾಡಲಾಗಿದೆ. 
ಇದು ಕನ್ನಡಪ್ರಭ.ಕಾಮ್ ಇಂಪ್ಯಾಕ್ಟ್ ಎಂದೇ ಹೇಳಬಹುದು. ಹೌದು ಕೆಜಿಎಫ್ ಹಿಂದಿ ಹಾಗೂ ತೆಲುಗು ಅವತರಣಿಕೆಯ ಚಿತ್ರ ಮೂವಿ ರೂಲ್ಸ್ ನಲ್ಲಿ ಸೋರಿಕೆಯಾಗಿದೆ ಎಂದು ವರದಿ ಮಾಡಿದ 3 ಗಂಟೆಯೊಳಗೆ ವೆಬ್ ಸೈಟ್ ಬ್ಲಾಕ್ ಮಾಡಲಾಗಿದೆ. 
ಮೂವೀಜ್ ರೂಲ್ಸ್ ಎಂಬ ಮೂವಿ ವೆಬ್ ಸೈಟ್ ನಲ್ಲಿ ಕೆಜಿಎಫ್ ಚಿತ್ರದ ಪೂರ್ತಿ ವಿಡಿಯೋ ಲಿಂಕ್ ಅಪ್ಲೋಡ್ ಆಗಿದೆ. ಕೆಜಿಎಫ್ ಬಿಡುಗಡೆಯಾದ ದಿನವೇ ಬಿಡುಗಡೆಯಾಗಿದ್ದ ತೆಲುಗಿನ ಅಂತರಿಕ್ಷಂ ಮತ್ತು ಪಡೀ ಪಡೀ ಲೇಚೆ ಮನಸು ಚಿತ್ರಗಳೂ ಕೂಡ ಲೀಕ್ ಆಗಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.