ಸಿನಿಮಾ ಸುದ್ದಿ

ಕೆಜಿಎಫ್ ಹವಾ ನೋಡಲು ಅಣ್ಣನೇ ಇಲ್ಲ, 'ಮಿಸ್ ಯು ಅಣ್ಣಾ' ಎಂದ ರಾಕಿಂಗ್ ಸ್ಟಾರ್!

ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಿತ್ರದ ಸಂಭ್ರಮವನ್ನು ನೋಡಲು ಅಣ್ಣನೇ ಇಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ರೆಬೆಲ್ ಸ್ಟಾರ್ ಅಂಬರೀಶ್...

ಕೆಜಿಎಫ್ ಹವಾ ನೋಡಲು ಅಣ್ಣನೇ ಇಲ್ಲ, 'ಮಿಸ್ ಯು ಅಣ್ಣಾ' ಎಂದ ರಾಕಿಂಗ್ ಸ್ಟಾರ್!
ಅಂಬರೀಶ್-ಯಶ್
Published On :
ದೇಶಾದ್ಯಂತ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಕೆಜಿಎಫ್ ಚಿತ್ರದ ಸಂಭ್ರಮವನ್ನು ನೋಡಲು ಅಣ್ಣನೇ ಇಲ್ಲ ಎಂದು ರಾಕಿಂಗ್ ಸ್ಟಾರ್ ಯಶ್ ಅವರು ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ನೆನೆದು ಭಾವುಕರಾಗಿದ್ದಾರೆ. 
ಸ್ಯಾಂಡಲ್ವುಡ್ ದಿಗ್ಗಜ, ಅಜಾತಶತ್ರು ಅಂಬರೀಶ್ ಅವರನ್ನು ಯಶ್ ನೆನಪಿಸಿಕೊಂಡಿದ್ದಾರೆ. ಕೆಜಿಎಫ್ ಚಿತ್ರ ಬಿಡುಗಡೆಗೊಂಡು ಎಲ್ಲೆಡೆ ಇತಿಹಾಸ ಸೃಷ್ಟಿಸಲಿ ಎಂದು ಟ್ರೈಲರ್ ರಿಲೀಸ್ ದಿನದಂದು ಸ್ವತಃ ಅಂಬರೀಶ್ ಶುಭ ಕೋರಿದ್ದರು. 
ಆದರೆ ಸಿನಿಮಾ ಬಿಡುಗಡೆಗೂ ಮುನ್ನ ಅಣ್ಣಾ ಎಲ್ಲರನ್ನು ಅಗಲಿದ್ದರು. ಒಂದು ವೇಳೆ ಇಂದು ಅಂಬಿ ನಮ್ಮ ನಡುವೆ ಇದ್ದಿದ್ದರೆ ಕೆಜಿಎಫ್ ಚಿತ್ರದ ಯಶಸ್ಸು ನೋಡಿ ಎಷ್ಟು ಹರಸುತ್ತಿದ್ದರೋ ಹೇಳಲು ಪದಗಳು ಸಿಗುತ್ತಿರಲಿಲ್ಲ. ಇದೇ ಕಾರಣಕ್ಕೆ ರಾಕಿಂಗ್ ಸ್ಟಾರ್ ಯಶ್ ಹಿರಿಯಣ್ಣನನ್ನು ನೆನಪಿಸಿಕೊಂಡಿದ್ದಾರೆ. ತಮ್ಮ ಟ್ವೀಟರ್ ನಲ್ಲಿ ಮಿಸ್ ಯೂ ಅಣ್ಣಾ ಅಂತಾ ಬರೆದುಕೊಳ್ಳುವ ಮೂಲಕ ಅಂಬರೀಶ್ ಅವರ ಮೇಲಿನ ಅಭಿಮಾನ ಮೆರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.