ಸಿನಿಮಾ ಸುದ್ದಿ

100 ದಿನಗಳ ಪ್ರದರ್ಶನ ಪೂರೈಸಿದ ಸ.ಹಿ.ಪ್ರಾ.ಶಾಲೆ; ರಿಷಬ್ ಶೆಟ್ಟಿ ಏನಂದ್ರು?

ನವೆಂಬರ್ 30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಕೊಡುಗೆ ರಾಮಣ್ಣ ರೈ ಸಿನಿಮಾ 100 ದಿನಗಳ ...

100 ದಿನಗಳ ಪ್ರದರ್ಶನ ಪೂರೈಸಿದ ಸ.ಹಿ.ಪ್ರಾ.ಶಾಲೆ; ರಿಷಬ್ ಶೆಟ್ಟಿ ಏನಂದ್ರು?
ಚಿತ್ರದ ಪೋಸ್ಟರ್
Published On :

ನವೆಂಬರ್ 30ಕ್ಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ಕೊಡುಗೆ ರಾಮಣ್ಣ ರೈ ಸಿನಿಮಾ 100 ದಿನಗಳ ಪ್ರದರ್ಶನ ಪೂರೈಸಿದೆ. ಈ ಬಗ್ಗೆ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಖುಷಿ ಹಂಚಿಕೊಂಡಿದ್ದಾರೆ.

ನನ್ನ ಹಿಂದಿನ ಚಿತ್ರ ಕಿರಿಕ್ ಪಾರ್ಟಿ 200 ದಿನಗಳ ಪ್ರದರ್ಶನ ಕಂಡಿತ್ತು. ಆದರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 100 ದಿನ ಪ್ರದರ್ಶನ ಪೂರೈಸಿದ್ದು ಇನ್ನಷ್ಟು ಖುಷಿ ಮತ್ತು ಸಮಾಧಾನ ನೀಡಿದೆ. ಕಿರಿಕ್ ಪಾರ್ಟಿಯಲ್ಲಿ ರಕ್ಷಿತ್ ಶೆಟ್ಟಿ ಅಭಿಮಾನಿಗಳು ಸಿನಿಮಾ ಗೆಲುವಿಗೆ ಮುಖ್ಯ ಕಾರಣವಾಗಿತ್ತು. ಎರಡನೆಯದಾಗಿ ಸೋಷಿಯಲ್ ಮೀಡಿಯಾಗಳಿಂದ ಬಹಳ ಉಪಯೋಗವಾಯಿತು ಎಂದು ಲೆಕ್ಕಚಾರ ಹಾಕಿದರು ರಿಷಬ್ ಶೆಟ್ಟಿ.

ಕನ್ನಡ ಮಾಧ್ಯಮ ಶಾಲೆ ಮುಚ್ಚಿ ಹೋಗುವ, ಸರ್ಕಾರಿ ಶಾಲೆಗಳ ಶೋಚನೀಯ ಸ್ಥಿತಿಗತಿ ಬಗ್ಗೆ ಚಿತ್ರದ ಕಥೆಯಿದ್ದು ಇಲ್ಲಿ ಅನಂತ್ ನಾಗ್ ಅವರದ್ದು ಮುಖ್ಯ ಪಾತ್ರ. ಒಂದಷ್ಟು ಬಾಲ ಕಲಾವಿದರಿದ್ದರು. ಈ ಚಿತ್ರಕ್ಕೆ ನಾವು ಹಾಕಿದ್ದು ಕಡಿಮೆ ಬಂಡವಾಳ. ಆದರೆ ಚಿತ್ರ ಬಿಡುಗಡೆ ಸಮಯದಲ್ಲಿ ನಾನು ಮತ್ತು ಪ್ರಮೋದ್ ಶೆಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ, ಸಾಲಕ್ಕಾಗಿ ಅಲೆದಾಡಿದ್ದೆವು. ಹೀಗಿರುವಾಗ ಚಿತ್ರ ಯಶಸ್ಸು ಖಂಡಿದ್ದು ಖಂಡಿತಾ ನಮಗೆ ಗೆಲುವೇ. ಕೇವಲ ದಡ್ಡ ದಡ್ಡ ಹಾಡಿನಿಂದ ಆರಂಭವಾದ ಚಿತ್ರವಿದು, ಅದು ಬಿಟ್ಟರೆ ನಾವು ಯಾವುದೇ ಪಬ್ಲಿಸಿಟಿ ಗಿಮಿಕ್, ಹೈಪ್ ಕ್ರಿಯೇಟ್ ಮಾಡಿರಲಿಲ್ಲ. ಪ್ರೇಕ್ಷಕರು ಗೆಲ್ಲಿಸಿದ ಚಿತ್ರವಿದು. ಒಳ್ಳೆಯ ಚಿತ್ರ ಮಾಡುವುದು ನಮ್ಮ ಕೆಲಸ, ಪ್ರೇಕ್ಷಕರು ಅದನ್ನು ನಿರ್ಧರಿಸುವವರು ಎಂಬುದಕ್ಕೆ ನಮ್ಮ ಈ ಸಿನಿಮಾ ಒಳ್ಳೆಯ ಉದಾಹರಣೆ. ಡಾ ರಾಜ್ ಕುಮಾರ್ ಅವರು ಹೇಳುತ್ತಿದ್ದಂತೆ ಅಭಿಮಾನಿಗಳೇ ದೇವರು ಅದು ಖಂಡಿತವಾಗಿಯೂ ಸತ್ಯ ಎಂದರು ರಿಷಬ್ ಶೆಟ್ಟಿ.

ಸರ್ಕಾರಿ ಶಾಲೆ ಸಿನಿಮಾ ಒಂದು ಕಮರ್ಷಿಯಲ್ ಚಿತ್ರ ಎನ್ನುತ್ತಾರೆ ನಿರ್ದೇಶಕರು. ಇದೊಂದು ಪ್ರಯೋಗಾತ್ಮಕ ಚಿತ್ರ ಪ್ರಶಸ್ತಿ ಗಳಿಸಬಹುದು ಎಂದು ನಮ್ಮನ್ನು ಕೇಳಿದವರು ಹಲವರಿದ್ದಾರೆ. ಚಿತ್ರದ ಗೆಲುವು ನಟ ಮತ್ತು ನಿರ್ದೇಶಕನಿಗೆ ಒಳ್ಳೆಯದು ಮಾಡುತ್ತದೆ ಎನ್ನುವುದಾದರೆ ನನ್ನ ವಿಚಾರದಲ್ಲಿ ಅದು ಸುಳ್ಳು. ಮುಂದಿನ ಚಿತ್ರದಲ್ಲಿ ಇನ್ನಷ್ಟು ಜಾಗ್ರತೆಯಿಂದ ಹತ್ತು ಪಟ್ಟು ಹೆಚ್ಚು ಶ್ರಮ ಹಾಕಿ ಕೆಲಸ ಮಾಡಬೇಕಾಗುತ್ತದೆ. ಕಿರಿಕ್ ಪಾರ್ಟಿಯಿಂದಲೂ ಹೆಚ್ಚು ಶ್ರಮ ಈ ಚಿತ್ರಕ್ಕೆ ಹಾಕಬೇಕಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.