ಭುವನ್ ನಾಯಕ್ ಮುಂದಿನ ಸಿನಿಮಾದಲ್ಲಿ ಪ್ರಿಯಾಂಕಾ ಉಪೇಂದ್ರ ದ್ವಿಪಾತ್ರ!
ಪ್ರಿಯಾಂಕಾ ಅಭಿಮಾನಿಗಳಿಗೆ ಡಬಲ್ ಧಮಾಕಾ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಶರ್ವಿುಳಾ ...

Published On :
ಬೆಂಗಳೂರು: ಪ್ರಿಯಾಂಕಾ ಅಭಿಮಾನಿಗಳಿಗೆ ಡಬಲ್ ಧಮಾಕಾ. ಸೈಕಲಾಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ಶರ್ವಿುಳಾ ಮಾಂಡ್ರೆ, ಭಾವನಾ ರಾವ್ ಮುಖ್ಯಭೂಮಿಕೆ ನಿರ್ವಹಿಸುತ್ತಿರುವುದು ವಿಶೇಷ.
ಚಿತ್ರದಲ್ಲಿ ಇಬ್ಬರು ನಾಯಕರು ಇರಲಿದ್ದು, ಪಾತ್ರಕ್ಕೆ ಸೂಕ್ತ ಎನಿಸುವವರ ಆಯ್ಕೆಯಲ್ಲಿ ಭುವನ್ ತೊಡಗಿದ್ದಾರೆ. ಈ ಚಿತ್ರ ತುಂಬ ಭಿನ್ನ ಶೈಲಿಯಲ್ಲಿ ಮೂಡಿ ಬರಲಿದೆ ಎನ್ನುವ ಭುವನ್, ‘ಪ್ರಿಯಾಂಕಾ ಅವರು ಈ ಚಿತ್ರದಲ್ಲಿ ದ್ವಿಪಾತ್ರ ಮಾಡುತ್ತಿದ್ದಾರೆ.
ಇನ್ನೂ ಶೀರ್ಷಿಕೆ ಅಂತಿಮಗೊಳ್ಳದ ಈ ಚಿತ್ರದಲ್ಲಿ ಪ್ರಿಯಾಂಕಾ ಗೆಳತಿಯರಾಗಿ ಶರ್ಮಿಳಾ ಹಾಗೂ ಭಾವನಾ ನಟಿಸಲಿದ್ದಾರಂತೆ. ‘ಸಾವಿನ ಕುರಿತ ತನಿಖೆಗೆ ಶರ್ಮಿಳಾ ಹಾಗೂ ಭಾವನಾ ಮುಂದಾಗುತ್ತಾರೆ.
ಈಗಾಗಲೇ ಮೂವರು ಕಥೆ ಕೇಳಿದ್ದು, ಚಿತ್ರದಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರಂತೆ. ಆದರೆ ಡೇಟ್ಸ್ ಹೊಂದಾಣಿಕೆ ಮಾಡುವುದು ದೊಡ್ಡ ಸವಾಲು ಎಂಬುದು ಭುವನ್ ಮಾತು. ಸದ್ಯ ಅವರು ‘ಗಮ್ಯ’ ಚಿತ್ರದ ಶೂಟಿಂಗ್ಗೆ ಸಿದ್ಧಗೊಳ್ಳುವುದರ ಜತೆಗೆ ಹೊಸ ಚಿತ್ರದ ಸ್ಕ್ರಿಪ್ಟ್ ಕೆಲಸಗಳತ್ತಲೂ ಗಮನ ಹರಿಸಿದ್ದಾರೆ .ಬಿಂದು ಮತ್ತು ಕೀರ್ತಿರಾಜ್ ಎಂಬುವವರು ಈ ಚಿತ್ರಕ್ಕೆ ಬಂಡವಾಳ ಸಿನಿಮಾ ನಿರ್ಮಾಪಕರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದ್ವಿಪಾತ್ರTwinsPriyanka Upendraಪ್ರಿಯಾಂಕಾ ಉಪೇಂದ್ರಶರ್ಮಿಳಾ ಮಾಂಡ್ರೆSharmile MandreBhuvan Nayakಭುವನ್ ನಾಯಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


