ಸಿನಿಮಾ ಸುದ್ದಿ

ಅಮರ್ ಚಿತ್ರಕ್ಕಾಗಿ ಬೈಕ್ ನಲ್ಲಿ ಅಭಿಷೇಕ್ , ತನ್ಯಾ ರೈಡಿಂಗ್

ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, 50 ಬೈಕ್ ಗಳ ಜೊತೆ ಅಭಿಷೇಕ್ ಮತ್ತು ತನ್ಯಾ ಮಳೆ ಮತ್ತು ...

ಅಮರ್ ಚಿತ್ರಕ್ಕಾಗಿ ಬೈಕ್ ನಲ್ಲಿ ಅಭಿಷೇಕ್ , ತನ್ಯಾ ರೈಡಿಂಗ್
ಅಭಿಷೇಕ್
Published On :
ಬೆಂಗಳೂರು: ಅಂಬರೀಷ್ ಪುತ್ರ ಅಭಿಷೇಕ್ ನಟನೆಯ ಅಮರ್ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು,  50 ಬೈಕ್ ಗಳ ಜೊತೆ ಅಭಿಷೇಕ್ ಮತ್ತು ತನ್ಯಾ ಮಳೆ ಮತ್ತು ಬಿಸಿಲಿನಲ್ಲಿ ರೈಂಡಿಂಗ್ ಮಾಡುತ್ತಿದ್ದಾರೆ. 
ಅಮರ್ ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ,. ಹೊಸ ದಾಖಲೆ ಬರೆಯಲು ಚಿತ್ರತಂಡ ತಯಾರಾಗಿದೆ, ಹಲವು ಲೋಕೆಶನ್ ಗಳ್ಲಿ ಶೂಟಿಂಗ್ ಗಾಗಿ ಸಿದ್ದತೆ ನಡೆಸಲಾಗಿದೆ. ಜೂನ್ ತಿಂಗಳ ಅಂತ್ಯದಲ್ಲಿ ಶೂಟಿಂಗ್ ಆರಂಭವಾಯಿತು.  ಈಗ ರಾಜ್ಯಾದ್ಯಂತ ಶೂಟಿಂಗ್ ನಡೆಯುತ್ತಿದ್ದು ನೆರೆಹೊರೆಯ ರಾಜ್ಯಗಳಲ್ಲೂ ಶೂಟಿಂಗ್ ನಡೆಯಲಿದೆ,
ಮೊದಲು ಕೊಯಂಬತ್ತೂರಿನಿಂದ ಆರಂಭಿಸಲಾಯಿತು, ಬೆಳಗಾವಿ, ಮಣಿಪಾಲ, ಮಂಗಳೂರು ನಲ್ಲಿ ಆರು ದಿನಗಳ ಕಾಲ ತಂಗಿದ್ದರು, ಮಡಿಕೇರಿ, ಸೋಮವಾರಪೇಟೆ, ಗೋಣಿಕೊಪ್ಪ ಸೇರಿದಂತೆ ಹಲವು ಸ್ಥಳಗಳಲ್ಲಿ ಶೂಟಿಂಗ್ ನಡೆಸಲಾಗಿದೆ. 
ಸದ್ಯ ಊಟಿಯಲ್ಲಿ ಶೂಟಿಂಗ್ ಮುಗಿದಿದೆ, ಮುಂದೆ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯಲಿದೆ ಎಂದು ನಾಗಶೇಖರ್ ಹೇಳಿದ್ದಾರೆ, ಜೈಪುರ ದಲ್ಲಿ ರೇಸ್ ಶೂಟಿಂಗ್ ನಡೆಯಲಿದೆ. ನಮ್ಮ ಸಿನಿಮಾದಲ್ಲಿ ಹೊಸ ಹೊಸ ಸ್ಥಳಗಳ ಬಗ್ಗೆ ಪರಿಚಯಿಸಲು ಪ್ರಯತ್ನಿಸುತ್ತಿದ್ದೇವೆ, ಇದು ಚಿತ್ರಕತೆಗೂ ಹೊಂದಿಕೆಯಾಗುತ್ತದೆ ಎಂದು ನಾಗಶೇಖರ್ ಹೇಳಿದ್ದಾರೆ.
ದೇಶದ ಹಲವು ನಗರಗಳಲ್ಲಿ ಮಳೆಯಾಗುತ್ತಿರುವುದು, ವಾತಾವರಣದ ಮೇಲೆ ಬೈಕ್ ರೈಡಿಂಗ್ ಮಾಡುವುದು ಅವಲಂಬಿತವಾಗಿದೆ. ಮಳೆ ವೇಳೆ ಬೈಕಿಂಗ್ ಮಾಡುವುದು ಸವಾಲಿನ ಕೆಲಸ, ಆದರೆ ಮಳೆಯನ್ನು ನಾವು ಎಂಜಾಯ್ ಮಾಡುತ್ತಿದ್ದೇವೆ, ಶೇ. 50 ರಷ್ಟು ಶೂಟಿಂಗ್ ಪೂರ್ಣವಾಗಿದೆ, ವಿದೇಶದಲ್ಲೂ ಸಿನಿಮಾ ಶೂಟಿಂಗ್ ಮಾಡುವ ಪ್ಲಾನ್ ಇದೆ ಎಂದು ನಾಗಶೇಖರ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.