ಜಯಲಲಿತಾರನ್ನು 'ಸರ್ವಾಧಿಕಾರಿ'ಯಂತೆ ಬಿಂಬಿಸಿದ ತಮಿಳು ಬಿಗ್ ಬಾಸ್: ಕಮಲ್ ಹಾಸನ್ ವಿರುದ್ಧ ದೂರು
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ’ಸರ್ವಾಧಿಕಾರಿ’ ಎನ್ನುವಂತೆ ಚಿತ್ರಿಸಿದ್ದ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ

Published On :
ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರನ್ನು ’ಸರ್ವಾಧಿಕಾರಿ’ ಎನ್ನುವಂತೆ ಚಿತ್ರಿಸಿದ್ದ ತಮಿಳು ನಟ ಹಾಗೂ ರಾಜಕಾರಣಿ ಕಮಲ್ ಹಾಸನ್ ವಿರುದ್ಧ ದೂರು ದಾಖಲಾಗಿದೆ.
ಬಿಗ್ ಬಾಸ್ ಸೀಜನ್ 2 (ತಮಿಳು) ರಿಯಾಲಿಟಿ ಶೋ ಎಪಿಸೋಡ್ ಒಂದರಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನು "ಸರ್ವಾಧಿಕಾರಿಯಾಗಿ" ಚಿತ್ರಿಸಲಾಗಿದೆ ಎಂಬ ಆರೋಪದ ಮೇಲೆ ಪೊಲೀಸರಿಗೆ ದೂರು ನೀಡಲಾಗಿದೆ. ಈ ಮೂಲಕ ಹಿರಿಯ ನಟ ಕಮಲ್ ಹಾಸನ್ ಇನ್ನೊಮ್ಮೆ ವಿವಾದದ ಕೇಂದ್ರವಾಗಿದ್ದಾರೆ.
ವಕೀಲೆ ಲೌಸಲ್. ರಮೇಶ್ ಈ ದೂರು ನಿಡಿದ್ದು "ಮಕ್ಕಳ್ ನೀಧಿ ಮೈಯಂ ಪಕ್ಷದ ಸಂಸ್ಥಾಪಕ, ನಟ ಕಮಲ್ ಹಾಸನ್ ಈ ರಿಯಾಲಿಟಿ ಶೋ ಅನ್ನು ತಮ್ಮ ರಾಜಕೀಯ ಬೆಳವಣಿಗೆಗೆ ಬಳಸಿಕೊಳ್ಳುತ್ತಿದ್ದಾರೆ.ಅವರು ರಿಯಾಲಿಟಿ ಶೋ ನಲ್ಲಿ ಜಯಲಲಿತಾ ವರನ್ನು"ಕೀಳಾಗಿ" ಚಿತ್ರಿಸಿದ್ದಾರೆ. ಕಮಲ್ ಹಾಗೂ ಈ ಕಾರ್ಯಕ್ರಮದ ನಿರ್ಮಾಪಕರು ಮಾಜಿ ಮುಖ್ಯಮಂತ್ರಿ "ಅಮ್ಮ" ನನ್ನು ಸರ್ವಾಧಿಕಾರಿ ಎನ್ನುವಂತೆ ತೋರಿಸಲು ಯತ್ನಿಸಿದ್ದಾರೆ.ಹೀಗಾಗಿ ಈ ಕಾರ್ಯಕ್ರಮವನ್ನು ನಿಷೇಧಿಸಬೇಕು" ಎಂದಿದ್ದಾರೆ.
ತಮಿಳು ಬಿಗ್ ಬಾಸ್ ರಿಯಾಲಿಟಿ ಶೋ ಸಂಚಿಕೆಯೊಂದರಲ್ಲಿ ಒಂದು ನಿರ್ದಿಷ್ಟ ಟಾಸ್ಕ್ ಮಾಡುತ್ತಿರುವಾಗ ಕಮಲ್ "ರಾಜ್ಯವನ್ನಾಳಿದ್ದ ಸರ್ವಾಧಿಕಾರಿಗಳ ಗತಿ ಏನಾಯಿತೆನ್ನುವುದು ನೀನು ಬಲ್ಲೆಯಾ?" ಎಂದು ಕೇಳಿದ್ದರು. ಆ ಹೇಳಿಕೆಯು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರನ್ನೇ ಕುರಿತಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಆ ನಿರ್ದಿಷ್ಟ ಸಂಚಿಕೆಯಲ್ಲಿ ಮನೆಯ ನಿವಾಸಿಯೊಬ್ಬರು ಸರ್ವಾಧಿಕಾರಿಯಂತೆ ವರ್ತಿಸುವ ಟಾಸ್ಕ್ ಇದ್ದಿತ್ತು. ಇದರಲ್ಲಿ ಐಶ್ವರ್ಯಾ ದತ್ತಾ ಸರ್ವಾಧಿಕಾರಿಯ ಪಾತ್ರ ನಿರ್ವಹಿಸುವ ಅಧಿಕಾರ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


