ಸಿನಿಮಾ ಸುದ್ದಿ

'ಅಮೆರಿಕಾ ಅಧ್ಯಕ್ಷ' ಜೊತೆ ರಾಗಿಣಿ ಡೇಟ್!

ಯೋಗಾನಂದ ಮುದ್ದಣ್ಣ ನಿರ್ದೇಶನದ ಶರಣ್ ಅಭಿನಯದ ಸಿನಿಮಾ ಶೂಟಿಂಗ್ ವಿದೇಶದಲ್ಲಿ ನಡೆಯಲಿದ್ದು ನಟಿ ರಾಗಿಣಿ ದ್ವಿವೇದಿ ವೀಸಾ ಪಡೆದುಕೊಂಡಿದ್ದಾರೆ....

'ಅಮೆರಿಕಾ ಅಧ್ಯಕ್ಷ'  ಜೊತೆ ರಾಗಿಣಿ ಡೇಟ್!
ರಾಗಿಣಿ
Published On :
ಬೆಂಗಳೂರು: ಯೋಗಾನಂದ ಮುದ್ದಣ್ಣ ನಿರ್ದೇಶನದ ಶರಣ್ ಅಭಿನಯದ ಸಿನಿಮಾ ಶೂಟಿಂಗ್ ವಿದೇಶದಲ್ಲಿ ನಡೆಯಲಿದ್ದು ನಟಿ ರಾಗಿಣಿ ದ್ವಿವೇದಿ ವೀಸಾ ಪಡೆದುಕೊಂಡಿದ್ದಾರೆ.
ಜೂನ್ ತಿಂಗಳಲ್ಲಿ ನಿರ್ದೇಶಕ ಹಾಗೂ ನಟ ಶರಣ್ ಮತ್ತು ಉಳಿದ ಸಿಬ್ಬಂದಿ ಯುಎಸ್ ನಲ್ಲಿರುತ್ತೇವೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಚ್ ಹಾಕಿದ್ದಾರೆ.
ವೀಸಾ ಪ್ರಕ್ರಿಯೆಗಾಗಿ ನಾವು ಬುಧವಾರ ಹೈದರಾಬಾದ್ ಗೆ ಬಂದಿದ್ದೆವು, ಎರಡನೇ ಸುತ್ತಿನ ಶೂಟಿಂಗ್ ಗಾಗಿ ಸಿಯಾಟೆಲ್ ಗೆ ತೆರಳಲಿದ್ದೇವೆ, ಅಲ್ಲಿಗೆ ತೆರಳಲು ಇನ್ನೂ ಒಂದು ತಿಂಗಳು ಬಾಕಿಯಿದ್ದು, ಜೂನ್ ವರಗೆ ನನಗೆ ಕಾಯಲಾಗದು ಎಂದು ಹೇಳಿದ್ದಾರೆ.
ಪಿ.ಸಿ ಶೇಖರ್ ಅವರ ಟೆರರಿಸ್ಟ್ ಸಿನಿಮಾ ಶೂಟಿಂಗ್ ಪೂರ್ಣಗೊಂಡಿದ್ದು, ಕಿಚ್ಚು  ಸಿನಿಮಾ ಬಿಡುಗಡೆಗಾಗಿ ರಾಗಿಣಿ ಕಾಯುತ್ತಿದ್ದಾರೆ. ಡೇಟ್ ಹೊಂದಿಸಿಕೊಳ್ಳುವ ಸಲುವಾಗಿ ಯೋಗಾನಂದ ಅವರ ಸಿನಿಮಾಈ ಮೊದಲಿನ ಎಲ್ಲಾ ಪ್ರಾಜೆಕ್ಟ್ ಗಳನ್ನು ಪೂರ್ಣಗೊಳಿಸಿದ್ದೇನೆ, ಕಮರ್ಷಿಯಲ್ ಹಾಗೂ ಸೋಲೋ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ರಾಗಿಣಿ ಹೇಳಿದ್ದಾರೆ. ಇದುವರೆಗೂ ಸಿನಿಮಾ ಟೈಟಲ್ ಫೈನಲೈಸ್ ಆಗಿಲ್ಲ, ಅಮೆರಿಕಾ ಅಧ್ಯಕ್ಷ ಟೈಟಲ್ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಇನ್ನೂ ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪಾಲ್ಗೋಳ್ಳುವಂತೆ ಹಲವು ಪಕ್ಷಗಳು ರಾಗಿಣಿ ಅವರಿಗೆ ಆಹ್ವಾನ ನೀಡಿವೆ, ಆದರೆ ಯಾವ ಪಕ್ಷದ ಪರ ಪ್ರಚಾರ ಮಾಡಬೇಕೆಂಬ ಬಗ್ಗೆ ರಾಗಿಣಿ ಇನ್ನೂ ನಿರ್ಧರಿಸಿಲ್ಲ, ಮತದಾನ ಮಾಡುನಂತೆ ಜನರಿಗೆ ತಿಳಿಸೇಕು. ಚುನಾವಣಾ ಪ್ರಚಾರದಲ್ಲಿ  ಭಾಗವಹಿಸುವುದು ನನಗೆ ಇಷ್ಟ, ಆದರಿಂದ ಏನಾದರೂ ಬದಲಾವಣೆಯಾಗುತ್ತದೆ ಎಂದರೇ ಯಾಕಾಗಬಾರಗು ಎಂದು ಪ್ರಶ್ನಿಸಿದ್ದಾರೆ, ಮತದಾನದ ಬಗ್ಗೆ ಅರಿವು ಹಾಗೂ ಮತದ ಮಹತ್ವದ ಬಗ್ಗೆ ತಿಳಿಸುವುದು ಅಗತ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.