ಸಿನಿಮಾ ಸುದ್ದಿ

’ಅಯೋಗ್ಯ’ ನನಗೆ ಹಳ್ಳಿ ಜೀವನಶೈಲಿಯನ್ನು ಕಲಿಸಿದೆ: ರಚಿತಾ ರಾಮ್

ಮಹೇಶ್ ಕುಮಾರ್ ನಿರ್ದೇಶನದ ’ಅಯೋಗ್ಯ’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ತಲುಪಿದೆ. ನಟಿ ರಚಿತಾ ರಾಮ್ ತಮ್ಮ ಪಾಲಿನ ಚಿತ್ರೀಕರಣ ಪೂರೈಸಿದ್ದಾರೆ.

’ಅಯೋಗ್ಯ’ ನನಗೆ ಹಳ್ಳಿ ಜೀವನಶೈಲಿಯನ್ನು ಕಲಿಸಿದೆ: ರಚಿತಾ ರಾಮ್
ರಚಿತಾ ರಾಮ್
Published On :
ಬೆಂಗಳೂರು: ಮಹೇಶ್ ಕುಮಾರ್ ನಿರ್ದೇಶನದ ’ಅಯೋಗ್ಯ’ ಚಿತ್ರದ ಚಿತ್ರೀಕರಣ ಕೊನೆ ಹಂತಕ್ಕೆ ತಲುಪಿದೆ. ನಟಿ ರಚಿತಾ ರಾಮ್ ತಮ್ಮ ಪಾಲಿನ ಚಿತ್ರೀಕರಣ ಪೂರೈಸಿದ್ದಾರೆ.
ಸತೀಶ್ ನೀನಾಸಮ್ ಅವರೊಂದಿಗಿನ ಮಂಡ್ಯದಲ್ಲಿ ಕೊನೆ ದಿನದ ಹಾಡಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ರಚಿತಾ "ಜಾನಿ ಜಾನಿ ಯಸ್ ಪಪ್ಪಾ ಚಿತ್ರದಲ್ಲಿ ನನ್ನದು ವೆಸ್ಟರ್ನ್ ಶೈಲಿಯ ಪಾತ್ರ, ಇದೇ ಅಯೋಗ್ಯ ದಲ್ಲಿ ಶುದ್ದ ಹಳ್ಳಿ ಹುಡುಗಿಯ ಪಾತ್ರ. ಅಯೋಗ್ಯ ಚಿತ್ರದಲ್ಲಿ ಅಭಿನಯಿಸಿದ ನನಗೆ ಹಳ್ಳಿ ಜೀವನಶೈಲಿಯ ಅನುಭವ ದೊರಕಿದೆ ಅಲ್ಲದೆ ಮಂಡ್ಯ ಕಡೆಯ ಕನ್ನಡ ಕಲಿಯುವುದು ಸಾಧ್ಯವಾಗಿತ್ತು. ’ಏನ್ಲಾ ನೋಡ್ತಿವ್ನಿ, ತುಂಬಾ ಅತಿಯಾಗ್ ಆಡ್ತೀಯಾ ಹೋಗ್ಲಾ ಹಿಂದೆ’ ಇಂತಹಾ ಸಂಬಾಷಣೆಗಳನ್ನು ಅಭ್ಯಾಸ ಮಾಡಬೇಕಾಗಿತ್ತು 
"ಮಂಡ್ಯ, ಬೆಂಗಳೂರು ಎರಡೂ ಕರ್ನಾಟಕದ ಭಾಗಗಳಾದರೂ ಮಾತಿನ ಶೈಲಿಯಲ್ಲಿ ವ್ಯತ್ಯಾಸವಿದೆ." ಹೇಳಿದ್ದಾರೆ.ಚಿತ್ರದಲ್ಲಿ ದ್ವನಿ ಕಲಾವಿದೆ (ಡಬ್ಬಿಂಗ್ ಆರ್ಟಿಸ್ಟ್) ಸಹ ಆಗಿರುವ ರಚಿತಾ ತಾವು ಸ್ಟುಡಿಯೋ ಪ್ರವೇಶಿಸುವ ಮುನ್ನ ತಮ್ಮ ಮಂಡ್ಯ ಭಾಷೆಯನ್ನು ಇನ್ನಷ್ಟು ಉತ್ತಮಗೊಳಿಸಿಕೊಳ್ಳ ಬಯಸುತ್ತಾರೆ.
"ಅಯೋಗ್ಯ ಸೆಟ್ ನಲ್ಲಿ ಕಳೆದ ಪ್ರತಿಯೊಂದು ದಿನವೂ ನಾನು ಹಳ್ಳಿ ವಾತಾವರಣದ ವಿಭಿನ್ನ ಅಂಶಗಳನ್ನು ಕಂಡುಕೊಂಡೆ." ನಟಿ ಹೇಳಿದ್ದಾರೆ.
Story image
ಸಧ್ಯ ಚಿತ್ರತಂಡ ಚಿತ್ರದ ಪರಿಚಯ ದೃಶ್ಯದ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದು ಮುಂದಿನ ವಾರ ಈ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ನಿರ್ಮಾಣದ ಈ ಚಿತ್ರದ ಆಡಿಯೋ ಮೇ ಮಧ್ಯ ಭಾಗದಲ್ಲಿ ಬಿಡುಗಡೆಯಾಗಲಿದೆ. ಜೂನ್ 1ಕ್ಕೆ ಚಿತ್ರ ತೆರೆ ಮೇಲೆ ಬರಲಿದೆ.
ರಚಿತಾ ರಾಮ್ ಸಧ್ಯ ಅಯೋಗ್ಯ ಚಿತ್ರದ ಬಳಿಕ ಸೀತಾರಾಮ ಕಲ್ಯಾಣ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದು ಈ ಚಿತ್ರದ ಶೂಟಿಂಗ್ ಮೇ 2 ರಿಂದ ಆರಂಭವಾಗಲಿದೆ.
ಪುನೀತ್ ರಾಜ್ ಕುಮಾರ್ ಅಭಿನಯದ, ಪವನ್ ಒಡೆಯರ್ ನಿರ್ದೇಶನದ ನಟಸಾರ್ವಭೌಮ ಚಿತ್ರದಲ್ಲಿ ಸಹ ರಚಿತಾ ಅಭಿನಯಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.