ಸಿನಿಮಾ ಸುದ್ದಿ

ಹೊಸ ಆಡಿಯೋ ಸಂಸ್ಥೆಯನ್ನು ಹುಟ್ಟು ಹಾಕಲಿರುವ ಯೋಗರಾಜ್ ಭಟ್

ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಆಡಿಯೋ ಸಂಸ್ಥೆಯೊಂದನ್ನು ಹುಟ್ಟು ಹಾಕಲಿದ್ದಾರೆ...

ಹೊಸ ಆಡಿಯೋ ಸಂಸ್ಥೆಯನ್ನು ಹುಟ್ಟು ಹಾಕಲಿರುವ ಯೋಗರಾಜ್ ಭಟ್
ಯೋಗರಾಜ್ ಭಟ್
Published On :
ಸ್ಯಾಂಡಲ್ವುಡ್ ನ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು ಹೊಸ ಆಡಿಯೋ ಸಂಸ್ಥೆಯೊಂದನ್ನು ಹುಟ್ಟು ಹಾಕಲಿದ್ದಾರೆ. 
ಯಶಸ್ವಿ ನಿರ್ದೇಶಕರಾಗಿರುವ ಯೋಗರಾಜ್ ಭಟ್ ಅವರು ಅದಾಗಲೇ ಯೋಗರಾಜ್ ಮೂವೀಸ್ ಎಂಬ ನಿರ್ಮಾಣ ಸಂಸ್ಥೆಯೊಂದನ್ನು ಹೊಂದಿದ್ದು ಇದೀಗ ಆಡಿಯೋ ಸಂಸ್ಥೆಯನ್ನು ಪ್ರಾರಂಭಿಸಲಿದ್ದಾರೆ. 
ಆಡಿಯೋ ಸಂಸ್ಥೆಗೆ ಯೋಗರಾಜ್ ಮ್ಯೂಸಿಕ್ ಅಥವಾ ವೈಬಿ ಮ್ಯೂಸಿಕ್ ಎಂದು ಹೆಸರಿಡುವ ಸಾಧ್ಯತೆ ಇದೆ. ಇನ್ನು ಆಡಿಯೋ ಸಂಸ್ಥೆಯ ಅಧಿಕೃತ ಘೋಷಣೆ ಮೂಡುವ ಮುನ್ನ ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರದ ಆಡಿಯೋ ಹಕ್ಕನ್ನು ಖರೀದಿಸಿದ್ದಾರೆ. 
ಕನ್ನಡಕ್ಕಾಗಿ ಒಂದನ್ನು ಒತ್ತಿ ಚಿತ್ರಕ್ಕಾಗಿ ಯೋಗರಾಜ್ ಭಟ್ ಎರಡು ಹಾಡುಗಳನ್ನು ಬರೆದಿದ್ದಾರೆ. ತಾವು ಅಂದುಕೊಂಡಂತೆ ಹಾಡುಗಳು ಎಲ್ಲರನ್ನು ತಲುಪುತ್ತಿಲ್ಲ ಎಂಬ ಕಾರಣಕ್ಕೆ ಯೋಗರಾಜ್ ಭಟ್ ಅವರು ತಮ್ಮದೇ ಆದ ಆಡಿಯೋ ಸಂಸ್ಥೆಯನ್ನು ಸ್ಥಾಪಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. 
ಕನ್ನಡ ಸಂಗೀತವನ್ನು ಉತ್ತಮ ರೀತಿಯಲ್ಲಿ ಪ್ರಚಾರ ಮಾಡುವ ಉದ್ದೇಶವನ್ನು ಯೋಗರಾಜ್ ಭಟ್ ಹೊಂದಿದ್ದಾರೆ. ಇದಕ್ಕೆ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮವು ಅತ್ಯುತ್ತಮ ವೇದಿಕೆ ಎಂಬುದನ್ನು ಅವರು ನಂಬುತ್ತಾರೆ. ತಮ್ಮ ಆಡಿಯೋ ಸಂಸ್ಥೆಗಾಗಿ ಸಿಬ್ಬಂದಿ ಅಗತ್ಯವಿದ್ದು ಇದಕ್ಕಾಗಿ ಭಟ್ರು ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ವಿಷಯ ಬಲ್ಲ ಮೂಲಗಳಿಂದ ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.