ಸಿನಿಮಾ ಸುದ್ದಿ

ಐಪಿಎಲ್ ಕ್ರಿಕೆಟ್ ನಿರೂಪಕನಾಗಿ ನಟ ದಿಗಂತ್

ಕಥೆಯೊಂದು ಶುರುವಾಗಿದೆ ಮತ್ತು ಫಾರ್ಚುನರ್ ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿರುವ ನಟ ದಿಗಂತ್ ತಮ್ಮ ...

ಐಪಿಎಲ್ ಕ್ರಿಕೆಟ್ ನಿರೂಪಕನಾಗಿ ನಟ ದಿಗಂತ್
ನಟ ದಿಗಂತ್
Published On :

ಕಥೆಯೊಂದು ಶುರುವಾಗಿದೆ ಮತ್ತು ಫಾರ್ಚುನರ್ ಚಿತ್ರಗಳ ಬಿಡುಗಡೆಗಾಗಿ ಕಾಯುತ್ತಿರುವ ನಟ ದಿಗಂತ್ ತಮ್ಮ ಒಲವಿನ ಕ್ರಿಕೆಟ್ ನತ್ತ ಚಿತ್ತ ಹರಿಸಿದ್ದಾರೆ. ಸ್ಟಾರ್ ಸುವರ್ಣ ಪ್ಲಸ್ ನಲ್ಲಿ ಐಪಿಎಲ್ ಸೀಸನ್ ನ ನಿರೂಪಕರಾಗಿ ದಿಗಂತ್ ಹೊಣೆ ನಿರ್ವಹಿಸುತ್ತಿದ್ದಾರೆ. ಅದು ಕನ್ನಡ ಪ್ರೇಕ್ಷಕರಿಗಾಗಿ ಇರುವ ನಿರೂಪಣೆ.

ಬೈಕ್ ನಲ್ಲಿ ಸವಾರಿ ಮಾಡುವುದು, ಬ್ಯಾಡ್ಮಿಂಟನ್ ಆಟದಲ್ಲಿ ಆಸಕ್ತಿ ಹೊಂದಿರುವ ದಿಗಂತ್ ಕ್ರಿಕೆಟ್ ಆಟವನ್ನು ತಾವು ಯಾವತ್ತೂ ಆಡಲು ಮತ್ತು ನೋಡಲು ಇಚ್ಛಿಸುತ್ತೇನೆ. ಈ ನಿರೂಪಣೆ ಮಾಡುತ್ತಿರುವುದರಿಂದ ಅನಿಲ್ ಕುಂಬ್ಳೆಯಂತಹ ಸ್ಟಾರ್ ಕ್ರಿಕೆಟ್ ಗಳನ್ನು ಭೇಟಿ ಮಾಡುವ ಅವಕಾಶ ಸಿಕ್ಕಿದೆ ಎನ್ನುತ್ತಾರೆ.

ಕಥೆಯೊಂದು ಶುರುವಾಗಿದೆ ದಿಗಂತ್ ಅವರ ಬಹು ನಿರೀಕ್ಷಿತ ಚಿತ್ರ. ಇದನ್ನು ಪುದುಚೆರಿ ಮತ್ತು ಕಾರವಾರದಂತಹ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ದಿಗಂತ್ ಗೆ ಜೋಡಿಯಾಗಿ ಪೂಜಾ ದೇವರಿಯಾ ನಟಿಸಿದ್ದಾರೆ. ರಕ್ಷಿತ್ ಶೆಟ್ಟಿ ಮತ್ತು ಪುಷ್ಕರ ಮಲ್ಲಿಕಾರ್ಜುನಯ್ಯ ಚಿತ್ರ ನಿರ್ಮಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.