ರಾಂಬೊ2 ಚಿತ್ರಕ್ಕೆ ಪುನೀತ್ ರಾಜ್ ಕುಮಾರ್ ಧ್ವನಿ
ಪುನೀತ್ ರಾಜ್ ಕುಮಾರ್ ಅವರ ಧ್ವನಿ ನಟ ಶರಣ್ ಗೆ ಮ್ಯಾಜಿಕ್ ಸೃಷ್ಟಿಸುತ್ತದೆ ಎಂದರೆ ತಪ್ಪಾಗಲಾರದು...

ಪುನೀತ್ ರಾಜ್ ಕುಮಾರ್ ಅವರ ಧ್ವನಿ ನಟ ಶರಣ್ ಗೆ ಮ್ಯಾಜಿಕ್ ಸೃಷ್ಟಿಸುತ್ತದೆ ಎಂದರೆ ತಪ್ಪಾಗಲಾರದು. ಅದರ ಜೊತೆಗೆ ಇನ್ನು ಅರ್ಜುನ್ ಜನ್ಯ ಸಂಗೀತ ನಿರ್ದೇಶನದ ಚಿತ್ರವಂತೂ ಸೂಪರ್ ಹಿಟ್ ಗಳಾಗಿವೆ.
ಶರಣ್ ಅವರ ಅಧ್ಯಕ್ಷ ಅಧ್ಯಕ್ಷ ಮತ್ತು ಜೈ ಮಾರುತಿ ಹಾಡುಗಳಿಗೆ ಪ್ರೇಕ್ಷಕರು ಇಂದಿಗೂ ಸ್ಟೆಪ್ಸ್ ಹಾಕಿ ಕುಣಿಯುತ್ತಾರೆ. ಈ ಹಿಟ್ ಜೋಡಿಗಳು ಮೂರನೇ ಸಲ ರಾಂಬೊ2 ಚಿತ್ರಕ್ಕೆ ಮತ್ತೆ ಒಂದಾಗಿದ್ದಾರೆ. ಕಳೆದ ವಾರಾಂತ್ಯ ರೆಕಾರ್ಡಿಂಗ್ ಸ್ಟುಡಿಯೊದಲ್ಲಿದ್ದ ಪುನೀತ್ ರಾಜ್ ಕುಮಾರ್ ಅವರು ಹಾಡಿರುವ ಹಾಡುಗಳು ಸದ್ಯದಲ್ಲಿಯೇ ಬಿಡುಗಡೆಯಾಗಲಿವೆ. ಪುನೀತ್ ಹಾಡುಗಳನ್ನು ಕೇಳಿದವರು ಮತ್ತೊಂದು ಹಿಟ್ ಹಾಡಿಗೆ ಕಾಯುತ್ತಿದ್ದಾರೆ.
ಲಡ್ಡೂ ಸಿನಿಮಾಸ್ ನಡಿ ರಾಂಬೊ2 ಚಿತ್ರ ನಿರ್ಮಾಣವಾಗುತ್ತಿದ್ದು ಇಲ್ಲಿ ನಟರು ಮತ್ತು ತಂತ್ರಜ್ಞರು ಕೂಡ ನಿರ್ಮಾಪಕರಾಗಿ ಕಾಲಿಟ್ಟಿದ್ದಾರೆ.
ಅನಿಲ್ ಕುಮಾರ್ ನಿರ್ದೇಶನದ ರಾಂಬೊ2ನಲ್ಲಿ ಆಶಿಕಾ ರಂಗನಾಥ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಸುಧಾಕರ್ ಎಸ್ ರಾಜ್ ಅವರ ಛಾಯಾಗ್ರಹಣವಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


