ಸಿನಿಮಾ ಸುದ್ದಿ

'ನೋ ಸ್ಮೋಕಿಂಗ್' ಹುಡುಗಿ ಸಿಮ್ರಾನ್‌ ನಾಟೇಕರ್‌ 'ಕಾಜಲ್ ' ಮೂಲಕ ಸ್ಯಾಂಡಲ್ ವುಡ್ ಪ್ರವೇಶ

ಥಿಯೇಟರ್ ಗಳಲ್ಲಿ ಪ್ರತಿ ಚಿತ್ರದ ಆರಂಭಕ್ಕೂ ಮುನ್ನ ‘ಈ ನಗರಕ್ಕೆ ಏನಾಗಿದೆ?’ ಎನ್ನುವ ಜಾಹೀರಾತಿನಲ್ಲಿ ಮುದ್ದು ಹುಡುಗಿ ಪಾತ್ರದಲ್ಲಿ ನಟಿಸಿದ್ದ ...

'ನೋ ಸ್ಮೋಕಿಂಗ್' ಹುಡುಗಿ ಸಿಮ್ರಾನ್‌ ನಾಟೇಕರ್‌ 'ಕಾಜಲ್ ' ಮೂಲಕ ಸ್ಯಾಂಡಲ್ ವುಡ್ ಪ್ರವೇಶ
ಸಿಮ್ರಾನ್ ನಾಟೇಕರ್
Published On :
ಬೆಂಗಳೂರು: ಥಿಯೇಟರ್ ಗಳಲ್ಲಿ  ಪ್ರತಿ ಚಿತ್ರದ ಆರಂಭಕ್ಕೂ ಮುನ್ನ ‘ಈ ನಗರಕ್ಕೆ ಏನಾಗಿದೆ?’ ಎನ್ನುವ ಜಾಹೀರಾತಿನಲ್ಲಿ ಮುದ್ದು ಹುಡುಗಿ ಪಾತ್ರದಲ್ಲಿ ನಟಿಸಿದ್ದ ಸಿಮ್ರಾನ್‌ ನಾಟೇಕರ್‌ ಸದ್ಯ ‘ಕಾಜಲ್‌’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ್ದಾರೆ..
8 ವರ್ಷವಿರುವಾಗ ಧೂಮಪಾನ ನಿಷೇಧ ಕುರಿತ ಜಾಹೀರಾತಿನಲ್ಲಿ ನಟಿಸಿದ್ದ ಸಿಮ್ರಾನ್ ಕನ್ನಡದ ಕಾಜಲ್ ಸಿನಿಮಾದಲ್ಲಿ ಸಂತೋಷ್ ಬಾಲರಾಜ್ ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಆನೇಕಲ್ ಬಾಲರಾಜ್ ನಿರ್ಮಿಸುತ್ತಿರುವ ಸಿನಿಮಾಗೆ ಸುಮಂತ್ ಕ್ರಾಂತಿ ನಿರ್ದೇಶನ ಮಾಡಿದ್ದಾರೆ, ಧೂಮಪಾನ ನಿಷೇದ ಕುರಿತ ಜಾಹೀರಾತಿನಲ್ಲಿ ತಂದೆಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತ ಪಡಿಸುವ ಮುಗ್ಧ ಬಾಲಕಿ ಪಾತ್ರದಲ್ಲಿ ಸಿಮ್ರಾನ್ ನಟಿಸಿದ್ದಾರೆ, ಮೊದಲು ನಟನೆಗೆ ಬರಬೇಕು ಎಂಬ ಯಾವುದೇ ಯೋಜನೆ ಇರಲಿಲ್ಲ, ಆದರೆ ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ ನಂತರ ಸಿನಿಮಾ ಜಗತ್ತಿಗೆ ಕಾಲಿಡಬೇಕೆಂಬ ಬಯಕೆಯಾಯಿತು ಎಂದು ಹೇಳಿದ್ದಾರೆ.
ನನಗೆ ಹಿಂದಿನಿಂದಲೂ ದಕ್ಷಿಣ ಭಾರತದ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಇತ್ತು. ಆದರೆ ಹೇಗೆ ಮತ್ತು ಯಾರನ್ನು ಸಂಪರ್ಕಿಸಬೇಕೆಂದು ಗೊತ್ತಿರಲಿಲ್ಲ. ಆ ಸಂದರ್ಭದಲ್ಲಿ ನನಗೆ "ಕಾಜಲ್‌' ಚಿತ್ರದ ಅವಕಾಶ ಬಂತು. ಕಥೆ ಹಾಗೂ ನನ್ನ ಪಾತ್ರ ಇಷ್ಟವಾಗಿ ಒಪ್ಪಿಕೊಂಡೆ. ನಿಜ ಹೇಳಬೇಕೆಂದರೆ ನಾನು "ಬಾಹುಬಲಿ' ಚಿತ್ರ ನೋಡಿ ಫಿದಾ ಆಗಿದ್ದೆ. ಆ ನಂತರ ನನಗೆ ಸೌತ್‌ ಇಂಡಿಯನ್‌ ಸಿನಿಮಾಗಳಲ್ಲಿ ನಟಿಸಬೇಕೆಂಬ ಆಸೆ ಬಂತು ಎಂದು ತಿಳಿಸಿದ್ದಾರೆ. 
‘ಕಾಜೋಲ್’ ಚಿತ್ರದಲ್ಲಿ ಅನಿವಾಸಿ ಭಾರತೀಯ (ಎನ್‌ಆರ್‌ಐ) ಪಾತ್ರದಲ್ಲಿ ನಟಿಸಿದ್ದೇನೆ. ಇದೊಂದು ಸುಮಧುರ ಪ್ರೇಮ ಕಥನ. ಅಮೆರಿಕಾದಿಂದ ಇಲ್ಲಿನ ಹಳ್ಳಿಯೊಂದಕ್ಕೆ ಬರುವ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇಲ್ಲಿಗೆ ಬಂದ ನಂತರ ಏನೆಲ್ಲಾ ಆಗುತ್ತದೆ, ಅಮೆರಿಕಾದಲ್ಲಿ ಹುಟ್ಟಿ ಬೆಳೆದ ನಾನು ಇಲ್ಲಿನ ವಾತಾರವರಣಕ್ಕೆ ಹೇಗೆ ಹೊಂದಿಕೊಳ್ಳುತ್ತೇನೆ ಎಂಬ ಅಂಶದೊಂದಿಗೆ ನನ್ನ ಪಾತ್ರ ಸಾಗುತ್ತದೆ ಎಂದು ವಿವರಿಸಿದ್ದಾರೆ. 
ಕಾಜಲ್ ಗಾಗಿ ಮೂರು ಹಿಂದಿ ಚಿತ್ರಗಳನ್ನು ತಿರಸ್ಕರಿಸಿ ಕನ್ನಡ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. 
ಪ್ರಿಯಾಂಕಾ ಚೋಪ್ರಾ ತನ್ನ ರೋಲ್ ಮಾಡೆಲ್ ಎಂದು ಸಿಮ್ರಾನ್ ಹೇಳಿದ್ದಾರೆ. 9ನೇ ತರಗತಿ ಪರೀಕ್ಷೆ ಬರೆದಿರುವ ಸಿಮ್ರಾನ್ ಬಾಲಿವುಡ್ ಕನಸು ಕಂಡಿದ್ದಾರೆ,
ಮುಂಬಯಿಯಲ್ಲಿ ನನಗೆ ಟಿವಿ ಶೋ ಇದೆ, ಹೀಗಿದ್ದರೂ ಕಾಜಲ್ ಸಿನಿಮಾಗಾಗಿ ಡೇಟ್ ಹೊಂದಾಣಿಕೆ ಮಾಡಿಕೊಳ್ಳುತ್ತೇನೆ, ಕೆಲಸ ಮಾಡುವುದು ನನ್ನ ಅಭಿರುಚಿ, ಟಿವಿಯಲ್ಲಿ ನನ್ನ ನೋಡಿಕೊಳ್ಳುದಕ್ಕಿಂತ 70 ಮಿಮೀಟರ್ ಪರದೆ ಮೇಲೆ ನೋಡಲು ನನಗೆ ಹೆಮ್ಮೆಯಾಗುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.