ರಿಷಬ್ ಶೆಟ್ಟಿ ಕಥಾ ಸಂಗಮಕ್ಕೆ ಚಂದ್ರಜಿತ್ ಬೆಳ್ಳಿಯಪ್ಪ ಸಾಥ್
ಎಂಜಿನೀಯರ್ ಕೆಲಸ ಬಿಟ್ಟು ನಿರ್ಮಾಪಕರಾಗಿರುವ ಚಂದ್ರಜಿತ್ ಬೆಳ್ಳಿಯಪ್ಪ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕ್ಯಾಂಪ್ ಸೇರಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಥಾ ...

Published On :
ಬೆಂಗಳೂರು: ಎಂಜಿನೀಯರ್ ಕೆಲಸ ಬಿಟ್ಟು ನಿರ್ಮಾಪಕರಾಗಿರುವ ಚಂದ್ರಜಿತ್ ಬೆಳ್ಳಿಯಪ್ಪ ರಕ್ಷಿತ್ ಶೆಟ್ಟಿ ಮತ್ತು ರಿಷಬ್ ಶೆಟ್ಟಿ ಕ್ಯಾಂಪ್ ಸೇರಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶನದ ಕಥಾ ಸಂಗಮಕ್ಕೆ ಚಂದ್ರಜಿತ್ ಕೈಜೋಡಿಸಿದ್ದಾರೆ.
ಕಥಾ ಸಂಗಮ ಸಿನಿಮಾವನ್ನು ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಅರ್ಪಿಸಲಾಗುತ್ತಿದೆ. 7 ಸಣ್ಣ ಕಥೆಗಳನ್ನು ಒಟ್ಟುಗೂಡಿಸಿ ಈ ಸಿನಿಮಾ ತಯಾರಾಗುತ್ತಿದೆ. ಈ ಸಿನಿಮಾಗಾಗಿ 7 ನಿರ್ದೇಶಕರು ಕೆಲಸ ಮಾಡಲಿದ್ದಾರೆ.
ಈ ಸಿನಿಮಾದಲ್ಲಿ ಕಿಶೋರ್, ಯಜ್ಞಾ ಶೆಟ್ಟಿ ಮತ್ತು ಬಾಲನಟಿ ಮೃದುನಿಕಾ ಅಭಿನಯಿಸಲಿದ್ದಾರೆ, ಗಂಡ, ಹೆಂಡತಿ ಹಾಗೂ ಮಗುವಿನ ಕಥೆಯುಳ್ಳ ಸಿನಿಮಾ ಇದಾಗಿದೆ.
ಮಗಳೊಬ್ಬಳು ತನ್ನ ತಂದೆಯನ್ನು ಯಾವಾಗಲೂ ಹೀರೋ ಎಂಬಂತೆ ನೋಡುತ್ತಾಳೆ, ಆದರೆ ತನ್ನ ಮಗಳಿಗಾಗಿ ಆತ ತಾನು ಹೀರೋ ಎಂಬದನ್ನು ತೋರಿಸುವ ಅಗತ್ಯವಿಲ್ಲ, ಪ್ರತಿಯೊಬ್ಬ ತಂದೆಯೂ ತಮ್ಮ ಮಕ್ಕಳಿಗೆ ಸಣ್ಣ ಪುಟ್ಟ ಸಂತೋಷ ನೀಡಲು ಪ್ರಯತ್ನಿಸುತ್ತಿರುತ್ತಾರೆ. ಯಜ್ಞಾ ಶೆಟ್ಟಿ ಒಬ್ಬ ರಕ್ಷಣಾತ್ಮಕ ತಾಯಿಯ ಪಾತ್ರದಲ್ಲಿ ನಟಿಸಿದ್ದಾರೆ.
ಗಗನ್ ಬಡೇರಿಯಾ ಸಂಗೀತ ನೀಡಿದ್ದು, ಅರವಿಂದ್ ಕಶ್ಯಪ್ ಸಿನಿಮಾಟೋಗ್ರಫಿ ಇದೆ, ಸದ್ಯ ಸಿನಿಮಾ ಇನ್ನೂ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಪರಂವಾ ಸ್ಟುಡಿಯೋ ಪ್ರೊದಕ್ಷನ್ ನಲ್ಲಿ ಕೆಲಸ ಮಾಡುವುದು ದೊಡ್ಡ ಜವಾಬ್ದಾರಿಯಾಗಿದೆ ಎಂದು ಚಂದ್ರಜಿತ್ ಹೇಳಿದ್ದಾರೆ.
ನಾನೊಬ್ಬ ಬರಹಗಾರ, ಯಾವತ್ತೂ ನಾನು ನಿರ್ದೇಶಕವಾಗಬೇಕು ಎಂದು ಬಯಸಿರಲಿಲ್ಲ, ಈ ಅವಕಾಶ ನನಗೆ ನೀಡಿದ್ದಕ್ಕೆ ಚಂದ್ರಜಿತ್ ಸಂತಸ ವ್ಯಕ್ತ ಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Rishab Shettyರಿಷಬ್ ಶೆಟ್ಟಿKirik partyಕಿರಿಕ್ ಪಾರ್ಟಿChandrajith BelliappaKatha Sangamaಚಂದ್ರಜಿತ್ ಬೆಳ್ಳಿಯಪ್ಪಕಥಾ ಸಂಗಮ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


