ಸಿನಿಮಾ ಸುದ್ದಿ

ಕಂಗನಾರ 'ಕ್ವೀನ್' ಕಲ್ಪನೆಯಲ್ಲಿ ಮುಳುಗಿದ ಪಾರುಲ್ ಯಾದವ್

ಬಾಲಿವುಡ್ ಬ್ಲಾಕ್ ಬಸ್ಟರ್ ಕ್ವೀನ್ ಚಿತ್ರವನ್ನು ರಮೇಶ್ ಅರವಿಂದ್ ಕನ್ನಡ ಹಾಗೂ ತಮಿಳಿನಲ್ಲಿ ನಿರ್ದೇಶಿಸಲಿದ್ದಾರೆ. ಕನ್ನಡದ ಅವತರಣಿಕೆಯಲ್ಲಿ ಕಂಗನಾ ರಣಾವತ್ ಮಾಡಿದ್ದ...

ಕಂಗನಾರ 'ಕ್ವೀನ್' ಕಲ್ಪನೆಯಲ್ಲಿ ಮುಳುಗಿದ ಪಾರುಲ್ ಯಾದವ್
ಪಾರುಲ್ ಯಾದವ್
Published On :
ಬಾಲಿವುಡ್ ಬ್ಲಾಕ್ ಬಸ್ಟರ್ ಕ್ವೀನ್ ಚಿತ್ರವನ್ನು ರಮೇಶ್ ಅರವಿಂದ್ ಕನ್ನಡ ಹಾಗೂ ತಮಿಳಿನಲ್ಲಿ ನಿರ್ದೇಶಿಸಲಿದ್ದಾರೆ. ಕನ್ನಡದ ಅವತರಣಿಕೆಯಲ್ಲಿ ಕಂಗನಾ ರಣಾವತ್ ಮಾಡಿದ್ದ ಪಾತ್ರವನ್ನು ನಟಿ ಪಾರುಲ್ ಯಾದವ್ ಮಾಡುತ್ತಿದ್ದಾರೆ. ಇನ್ನು ತಮಿಳಿನಲ್ಲಿ ಕಾಜಲ್ ಅಗರವಾಲ್ ಅಭಿನಯಿಸಲಿದ್ದಾರೆ. 
ತಮಿಳಿನಲ್ಲಿ ಪರೀಸ್ ಪರೀಸ್ ಹಾಗೂ ಸ್ಯಾಂಡಲ್ವುಡ್ ನಲ್ಲಿ ಬಟರ್ ಫ್ಲೈ ಎಂದು ಚಿತ್ರ ಶೀರ್ಷಿಕೆ ಫೈನಲ್ ಆಗಿದೆ. ಇನ್ನು ಚಿತ್ರಕ್ಕಾಗಿ ಪಾರುಲ್ ಯಾದವ್ ಕಸರತ್ತು ನಡೆಸಿದ್ದಾರೆ. ಚಿತ್ರಕ್ಕಾಗಿ ಪಾರುಲ್ ಯಾದವ್ ಅವರ ಲುಕ್ ಟೆಸ್ಟ್ ಮಾಡಲಾಯಿತು. 
ಗೋಕರ್ಣದಿಂದ ಬೆಂಗಳೂರಿಗೆ ಬಂದು ಇಲ್ಲಿ ಚಿತ್ರರಂಗದಲ್ಲಿ ಬೆಳೆಯಲು ಏನೆಲ್ಲಾ ಕಷ್ಟ ಪಡುತ್ತಾಳೆ ಎಂಬುದು ಚಿತ್ರದ ಕಥೆಯಾಗಿರುವುದರಿಂದ. ಪಾರುಲ್ ಯಾದವ್ ಗೋಕರ್ಣ ಕಡೆ ಮಾತನಾಡುವುದನ್ನು ಅಭ್ಯಾಸ ಮಾಡುತ್ತಿದ್ದಾರೆ. ಚಿತ್ರದ ಎರಡನೇ ಭಾಗದ ಚಿತ್ರೀಕರಣ ಅಕ್ಟೋಬರ್ 4ರಿಂದ ಪ್ರಾರಂಭವಾಗಲಿದೆ. 
ಬಟರ್ ಫೈ ಚಿತ್ರ ಮೆಡಿಯಿಂಟ್ ಇಂಟರ್ ನ್ಯಾಷನಲ್ ಫಿಲ್ಮಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿದ್ದು ಚಿತ್ರಕ್ಕೆ ಮನು ಕುಮಾರನ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಮಮತಾ ಸಾಗರ್ ಸಂಭಾಷಣೆ ಬರೆದಿದ್ದು ಸುಧಾ ಬೆಳವಾಡಿ ಮತ್ತು ಭಾರ್ಗವಿ ನಾರಾಯಣ್ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
ಇನ್ನು ಕ್ವೀನ್ ಚಿತ್ರದಲ್ಲಿನ ರಾಜ್ ಕುಮಾರ್ ರಾವ್ ಪಾತ್ರವನ್ನು ಕನ್ನಡದಲ್ಲಿ ವರುಣ್ ಶಶಿ ರಾವ್ ಮಾಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.