ಸಿನಿಮಾ ಸುದ್ದಿ

ಕನ್ನಡದ ನಂತರ ತಮಿಳು, ಹಿಂದಿ ಚಿತ್ರರಂಗಕ್ಕೆ ಹಾರಿದ ಸತೀಶ್ ನೀನಾಸಂ

ಕಳೆದ 8 ವರ್ಷಗಳಲ್ಲಿ 22 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಲೂಸಿಯಾ ಚಿತ್ರ ಖ್ಯಾತಿಯ ಸತೀಶ್ ನೀನಾಸಂ ಅವರು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದಾಗಿ...

ಕನ್ನಡದ ನಂತರ ತಮಿಳು, ಹಿಂದಿ ಚಿತ್ರರಂಗಕ್ಕೆ ಹಾರಿದ ಸತೀಶ್ ನೀನಾಸಂ
ಸತೀಶ್ ನೀನಾಸಂ
Published On :
ಕಳೆದ 8 ವರ್ಷಗಳಲ್ಲಿ 22 ಕನ್ನಡ ಚಿತ್ರಗಳಲ್ಲಿ ಅಭಿನಯಿಸಿರುವ ಲೂಸಿಯಾ ಚಿತ್ರ ಖ್ಯಾತಿಯ ಸತೀಶ್ ನೀನಾಸಂ ಅವರು ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. 
ನಿರ್ದೇಶಕ ಅನೀಸ್ ನಿರ್ದೇಶನದ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಕಾಲಿಡುತ್ತಿದ್ದೇನೆ. ನೀವು ಕೊಟ್ಟ ನಿರಂತರ ಬೆಂಬಲ ಹೀಗೆ ಇರಲಿ. ಮುಂದಿನ ತಿಂಗಳು ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗುತ್ತಿದ್ದಂತೆ ಅಂದು ಹೆಚ್ಚಿನ ಮಾಹಿತಿ ನೀಡುವುದಾಗಿ ಹೇಳಿದ್ದರು. ಇನ್ನು ಈ ಚಿತ್ರಕ್ಕಾಗಿ ತಮಿಳು ಕಲಿಯುತ್ತಿರುವ ಸತೀಶ್ ತಮ್ಮ ಪಾತ್ರಕ್ಕೆ ಜೀವ ತುಂಬಲು ತಾವೇ ವಾಯ್ಸ್ ಡಬ್ ಮಾಡಲು ಸಿದ್ಧತೆ ನಡೆಸಿದ್ದಾರೆ. ಚಿತ್ರ ನವೆಂಬರ್ ನಲ್ಲಿ ಸೆಟ್ಟೇರಲಿದ್ದು ಉಳಿದಂತೆ ಕಲಾವಿದರ ಆಯ್ಕೆ ಸದ್ಯದಲ್ಲೇ ನಡೆಯಲಿದೆ. 
ತಮಿಳು ಅಲ್ಲದೆ ಮುಂದಿನ ವರ್ಷ ಬಾಲಿವುಡ್ ಚಿತ್ರವೊಂದರಲ್ಲಿ ಸತೀಶ್ ನಟಿಸುತ್ತಿದ್ದಾರೆ. ಅಷ್ಟೇ ಅಲ್ಲ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ನಿರ್ಮಾಣವಾಗುವ ಚಿತ್ರವೊಂದರಲ್ಲೂ ಅವರು ನಟಿಸುತ್ತಿದ್ದಾರೆ. ಹೀಗೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಸತೀಶ್ ಬ್ಯುಸಿಯಾಗಿದ್ದಾರೆ. 
ಸತೀಶ್ ಅಭಿನಯದ ಗೋಧ್ರಾ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಇನ್ನು ಸದ್ಯದಲ್ಲೇ ಅವರ ಇನ್ನೊಂದು ಚಿತ್ರ ಅಯೋಗ್ಯದ ಚಿತ್ರೀಕರಣ ಪ್ರಾರಂಭವಾಗಲಿದೆ. ಈ ಮಧ್ಯೆ ಅವರು ತಮ್ಮ ಬ್ಯಾನರ್ ನಿಂದ ಹೊಸ ಚಿತ್ರವನ್ನು ಪ್ರಾರಂಭಿಸುವ ಮುಂದಾಗಿದ್ದಾರೆ. ಆ ಚಿತ್ರಕ್ಕೆ ರಾಮ ಕಾಡಿಗೆ ಹೋದ ಎಂದು ಹೆಸರಿಟ್ಟಿದ್ದು ಚಿತ್ರವನ್ನು ವಿಕ್ಕಿ ಮತ್ತು ವಿನಯ್ ಎನ್ನುವವರು ನಿರ್ದೇಶಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.