ಬೆಂಗಳೂರಿನ ಈ ಎರಡು ಪ್ರಸಿದ್ಧ ಥಿಯೇಟರ್ ಗಳಲ್ಲೂ ರಿಲೀಸ್ ಆಗಲಿದೆ 'ಭರ್ಜರಿ'
ಸ್ಯಾಂಡಲ್ ವುಡ್ ಈ ವಾರಾಂತ್ಯದಲ್ಲಿ ಮತ್ತೊಂದು ಸಾಧನೆ ಮಾಡುವತ್ತ ಹೆಜ್ಜೆ ಇಟ್ಟಿದೆ, ಕಳೆದ 20 ವರ್ಷಗಳಿಂದ ಕನ್ನಡ ಸಿನಿಮಾಗಳ ಪ್ರದರ್ಶನವನ್ನೆ ...

Published On :
ಬೆಂಗಳೂರು: ಸ್ಯಾಂಡಲ್ ವುಡ್ ಈ ವಾರಾಂತ್ಯದಲ್ಲಿ ಮತ್ತೊಂದು ಸಾಧನೆ ಮಾಡುವತ್ತ ಹೆಜ್ಜೆ ಇಟ್ಟಿದೆ, ಕಳೆದ 20 ವರ್ಷಗಳಿಂದ ಕನ್ನಡ ಸಿನಿಮಾಗಳ ಪ್ರದರ್ಶನವನ್ನೆ ಕಾಣದ ರೆಕ್ಸ್ ಮತ್ತು ಊರ್ವಶಿ ಚಿತ್ರಮಂದಿರಗಳಲ್ಲಿ ಭರ್ಜರಿ ಸಿನಿಮಾ ರಿಲೀಸ್ ಆಗಲಿದೆ.
ರೆಕ್ಸ್ ಮತ್ತು ಊರ್ವಶಿ ಸೇರಿದಂತೆ ಒಟ್ಟು 300 ಥಿಯೇಟರ್ ಗಳಲ್ಲಿ ಧ್ರುವ ಸರ್ಜಾ ಅಭಿನಯದ ಭರ್ಜರಿ ಸಿನಿಮಾ ರಿಲೀಸ್ ಆಗಲಿದೆ. ಈ ಎರಡು ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿರುವುದಕ್ಕೆ ಚಿತ್ರತಂಡ ಸಂತಸಗೊಂಡಿದೆ.
ಈ ಎರಡು ಥಿಯೇಟರ್ ಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲೀಷ್ ಸಿನಿಮಾಗಳು ಮಾತ್ರ ಬಿಡುಗಡೆಗೊಳ್ಳುತ್ತಿದ್ದವು. ಆದರೆ ಸಿನಿಮಾದ ಟ್ರೈಲರ್ ಮತ್ತು ಹಾಡುಗಳನ್ನು ಕೇಳಿ ಪ್ರೇರಿತರಾಗಿರುವ ಥಿಯೇಟರ್ ಮಾಲೀಕರು ಭರ್ಜರಿ ಸಿನಿಮಾ ರಿಲೀಸ್ ಗೆ ಸಮ್ಮತಿಸಿದ್ದಾರೆ ಎಂದು ನಿರ್ದೇಶಕ ಚೇತನ್ ಕುಮಾರ್ ಹೇಳಿದ್ದಾರೆ.
ಆರ್.ಎಸ್ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗಿರುವ ಭರ್ಜರಿ ಸಿನಿಮಾವನ್ನು ಪ್ರಸಾದ್ ಹಂಚಿಕೆ ಮಾಡುತ್ತಿದ್ದಾರೆ, ರಚಿತಾ ರಾಮ್, ಹರಿಪ್ರಿಯಾ ಧ್ರುವ ಸರ್ಜಾಗೆ ನಾಯಕಿಯರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


