ನನಗೆ ಸ್ಟಾರ್ ಡಂ ಬೇಡ, ಉತ್ತಮ ನಟನಾಗಿರಲು ಬಯಸುತ್ತೇನೆ: ಸನ್ನಿ ಡಿಯೋಲ್
ಬಾಲಿವುಡ್ ನ ನಂಬರ್ 1 ಸ್ಟಾರ್ ಆಗಿ ಮೆರೆಯಬೇಕೆಂಬ ಆಸೆ ನನಗಿಲ್ಲ, ಹೀಗಾಗಿ ಈ ರೇಸ್ ನಲ್ಲಿ ನಾನು ಇಲ್ಲ ಎಂದು ನಟ ಸನ್ನಿ ಡಿಯೋಲ್...

Published On :
ನವದೆಹಲಿ: ಬಾಲಿವುಡ್ ನ ನಂಬರ್ 1 ಸ್ಟಾರ್ ಆಗಿ ಮೆರೆಯಬೇಕೆಂಬ ಆಸೆ ನನಗಿಲ್ಲ, ಹೀಗಾಗಿ ಈ ರೇಸ್ ನಲ್ಲಿ ನಾನು ಇಲ್ಲ ಎಂದು ನಟ ಸನ್ನಿ ಡಿಯೋಲ್ ಸ್ಪಷ್ಟ ಪಡಿಸಿದ್ದಾರೆ.
ಕಲೆ ಎಂಬುದು ರಕ್ತಗತವಾಗಿ ಬಂದಿರುವ ಸನ್ನಿಡಿಯೋಲ್ 1983 ರಲ್ಲಿ ಬೇತಾಬ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ನೀಡಿದರು. ಹಿರಿಯ ನಟ ಧರ್ಮೇಂದ್ರ ಅವರ ಪುತ್ರನಾಗಿರುವ ಸನ್ನಿ, ನನಗೆ ಸ್ಟಾರ್ ಡಂ ನಲ್ಲಿ ನಂಬಿಕೆಯಿಲ್ಲ, ಉತ್ತಮ ಕಲಾವಿದನಾಗಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಬಾಲಿವುಡ್ ನಲ್ಲಿ ಕಾಂಪಿಟೇಷನ್ ಎಂಬುದಿಲ್ಲ, ಅದನ್ನು ನಾವಾಗಿಯೇ ಸೃಷ್ಟಿಸಿಕೊಂಡಿದ್ದೇವೆ, ಯಾರು ಮೊದಲು ಬಂದು ಲೈನ್ ಕ್ರಾಸ್ ಮಾಡುತ್ತಾರೆ, ನಂತರ ಯಾರು ಬರುತ್ತಾರೆ ಎಂಬುದು ಮುಖ್ಯವಲ್ಲ, ನಾನು ಸ್ಪರ್ಧೆಯಲ್ಲಿಲ್ಲ, ನಾನು ಒಬ್ಬ ಕಲಾವಿದನಾಗಿ ಸಿನಿಮಾಗೆ ಬಂದೆ, ಆದರೆ ನಿಮ್ಮ ಸಿನಿಮಾ ಯಶಸ್ವಿಯಾಗಿಬಿಟ್ಟರೇ ನೀವು ಸ್ಟಾರ್ ಆಗಿಬಿಡುತ್ತೀರಾ. ಆದರೆ ನಾನು ಕೇವಲ ನಟನಾಗಿರಲು ಮಾತ್ರ ಇಷ್ಟ ಪಡುತ್ತೇನೆ ಎಂದು ಸನ್ನಿ ಡಿಯೋಲ್ ಹೇಳಿದ್ದಾರೆ.
ನೀವು ಒಬ್ಬ ನಟನಾಗಿದ್ದಾಗ ಮಾತ್ರ ನೀವು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಳ್ಳದೇ ನಿಮ್ಮ ಕೆಲಸವನ್ನು ಎಂಜಾಯ್ ಮಾಡಲು ಸಾಧ್ಯ, ದಶಕಗಳ ಕಾಲ ಬಾಲಿವುಡ್ ನಲ್ಲಿದ್ದರೂ ತಾವು ಸಾಧಿಸುವುದು ಬಹಳಷ್ಟಿದೆ ಎಂಬುದು ಸನ್ನಿ ಡಿಯೋಲ್ ಅಭಿಪ್ರಾಯ.
ನಾನು ಪ್ರತಿಯೊಂದು ದಿನವನ್ನು ಹೊಸ ದಿನವನ್ನಾಗಿ ನೋಡುತ್ತೇನೆ, ನಾನು ಹಲವು ಸಿನಿಮಾದಲ್ಲಿ ನಟಿಸಿದ್ದೇನೆ.ನಾನು ಯಾವೆಲ್ಲಾ ಸಿನಿಮಾ ಮಾಡಿದ್ದೇನೋ ಅವುಗಳನ್ನೆಲ್ಲಾ ಎಂಜಾಯ್ ಮಾಡಿದ್ದೇನೆ. ಈ ವೃತ್ತಿ ನಿಮಗೆ ಯಾವತ್ತೂ ಬೋರ್ ಎನಿಸುವುದಿಲ್ಲ, ಇದು ಬೆಳಗ್ಗೆ 9-5 ಗಂಟೆಯ ಕೆಲಸವಲ್ಲ, ಹೀಗಾಗಿ ನೀವು ನಿಮಗಾಗಿ ಎಂಜಾಯ್ ಮಾಡಬಹುದು. ಈ ವೃತ್ತಿಯಲ್ಲಿ ನಿಮಗೆ ಯಾವುದೇ ವೀಕೆಂಡ್, ವಾರದ ರಜೆ, ಸಾರ್ವಜನಿಕ ರಜೆ ಇರುವುದಿಲ್ಲ, ಅಂಥಹ ಹುಚ್ಚುತನ ಈ ಇಂಡಸ್ಟ್ರಿಯಲ್ಲಿದೆ, ಅದನ್ನು ಪ್ರೀತಿಯಿಂದ ಎಂಜಾಯ್ ಮಾಡಬೇಕು ಎಂದು ಹೇಳಿದ್ದಾರೆ.ಸದ್ಯ ಸನ್ನಿ ಡಿಯೋಲ್ ತಮ್ಮ ಪುತ್ರನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


