ಕನ್ನಡ ರಾಜ್ಯೋತ್ಸವಕ್ಕೆ ಕನಕ ಮೊದಲ ಟ್ರೇಲರ್ ಬಿಡುಗಡೆ
ಆರ್ .ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಸಿನಿಮಾ ಶೂಟಿಂಗ್ ಪೂರ್ಣದೊಂಡಿದ್ದು, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದಂದು...

Published On :
ಬೆಂಗಳೂರು: ಆರ್ ಚಂದ್ರು ನಿರ್ದೇಶನದ ದುನಿಯಾ ವಿಜಯ್ ನಟನೆಯ ಕನಕ ಸಿನಿಮಾ ಶೂಟಿಂಗ್ ಪೂರ್ಣದೊಂಡಿದ್ದು, ನವೆಂಬರ್ 1ರ ಕರ್ನಾಟಕ ರಾಜ್ಯೋತ್ಸವದಂದು, ಸಿನಿಮಾದ ಮೊದಲ ಟ್ರೇಲರ್ ರಿಲೀಸ್ ಆಗಲಿದೆ.
ವಿಜಯ್, ಸಿನಿಮಾದಲ್ಲಿ ರಾಜ್ ಕುಮಾರ್ ಅವರ ಅಭಿಮಾನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಹೀಗಾಗಿ ಕನ್ನಡ ರಾಜ್ಯೋತ್ಸವದಂದು ಟ್ರೇಲರ್ ಬಿಡುಗಡೆಯಾಗಲಿದೆ.
ದುನಿಯಾ ವಿಜಿ ಹಾಗೂ ಹರಿಪ್ರಿಯಾ ನಟಿಸಿರುವ ಸಿನಿಮಾ. ದುನಿಯಾ ವಿಜಿ ಆಟೋ ಡ್ರೈವರ್ ಆಗಿ, ರಾಜ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ಸಿನಿಮಾ ಸೆಟ್ಟೇರಿದ ದಿನದಿಂದ ಕುತೂಹಲ ಹುಟ್ಟಿಸಿದೆ.
ತಾಜ್‍ಮಹಲ್, ಚಾರ್‍ಮಿನಾರ್, ಮೈಲಾರಿ, ಬ್ರಹ್ಮ, ಮಳೆ.. ಹೀಗೆ ವಿಭಿನ್ನ ಚಿತ್ರಗಳನ್ನು ಕಮರ್ಷಿಯಲ್ ಚೌಕಟ್ಟಿನಲ್ಲಿ ಕಟ್ಟಿಕೊಟ್ಟ ನಿರ್ದೇಶಕ ಆರ್. ಚಂದ್ರು. ಹೀಗಾಗಿಯೇ ಚಂದ್ರು ಮತ್ತು ದುನಿಯಾ ವಿಜಿ ಜುಗಲ್‍ಬಂದಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


