ಸಿನಿಮಾ ಸುದ್ದಿ

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಕ್ಕೆ ಶಿವಣ್ಣ ಬ್ರೇಕ್!

ಸ್ಯಾಂಡಲ್ವುಡ್ ನ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ 55ರ ಹರೆಯದಲ್ಲೂ ಚಿರ ಯುವಕನಂತೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ...

ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಅಭಿನಯಕ್ಕೆ ಶಿವಣ್ಣ ಬ್ರೇಕ್!
ಶಿವರಾಜ್ ಕುಮಾರ್
Published On :
ಸ್ಯಾಂಡಲ್ವುಡ್ ನ ಸೆಂಚೂರಿ ಸ್ಟಾರ್ ಶಿವರಾಜ್ ಕುಮಾರ್ 55ರ ಹರೆಯದಲ್ಲೂ ಚಿರ ಯುವಕನಂತೆ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಅಭಿನಯಿಸುತ್ತಿರುವ ಶಿವಣ್ಣ ಇನ್ನುಂದೆ ಉತ್ತಮ ಕಥೆಗಳಿರುವ ಚಿತ್ರದಲ್ಲಿ ಮಾತ್ರ ಅಭಿನಯಿಸಲು ತೀರ್ಮಾನಿಸಿದ್ದಾರಂತೆ. 
ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ಚಿತ್ರಗಳಾದ ಟಗರು ಮತ್ತು ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಅಭಿನಯಿಸುತ್ತಿದ್ದಾರೆ. ಈ ಮಧ್ಯೆ ಜೋಗಿ ಪ್ರೇಮ್ ಜತೆ ಜಂಗಮ ಚಿತ್ರಕ್ಕೂ ಶಿವಣ್ಣ ನಾಯಕನಾಗಲು ರೆಡಿಯಾಗಿದ್ದಾರೆ. ಆದರೆ ಅಧಿಕೃತವಾಗಿ, ಇವೆರಡರ ನಂತರ ಅವರ ಮುಂದಿನ ಚಿತ್ರ ಮಲಯಾಳಂ ಭಾಷೆಯ 'ಒಪ್ಪಂ'ನ ರಿಮೇಕ್ ಆಗಿರುತ್ತದೆ.
ನವ ಪ್ರತಿಭೆಗಳ ಚಿತ್ರದಲ್ಲಿ ಅಭಿನಯಿಸಲು ಶಿವಣ್ಣ ರೆಡಿಯಾಗಿದ್ದು ಕನ್ನಡದ ಒಪ್ಪಂ ಚಿತ್ರವನ್ನು ಜಿವಿಆರ್ ವಾಸು ಅವರು ನಿರ್ದೇಶಿಸುತ್ತಿದ್ದಾರೆ. ಇದಾದ ನಂತರ ನವ ನಿರ್ದೇಶಕ ಪ್ರಮೋದ್ ಚಕ್ರವರ್ತಿ ನಿರ್ದೇಶನದ ಹರಿಹರ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದಾದ ನಂತರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಬಿಗ್ ಬಜೆಟ್ ಚಿತ್ರದಲ್ಲಿ ಶಿವಣ್ಣ ಅಭಿನಯಿಸಲಿದ್ದಾರೆ. 
ಇದಾದ ಬಳಿಕ ಅಗ್ನಿ ಶ್ರೀಧರ್ ಚಿತ್ರಕಥೆ ಬರೆದು ನಿರ್ಮಿಸುತ್ತಿರುವ ಬೆಂಗಳೂರಿನ ಮೊದಲ ಡಾನ್ ಎಂಪಿ ಜಯರಾಜ್ ಜೀವನಾಧಾರಿತ ಚಿತ್ರದಲ್ಲಿ ಶಿವಣ್ಣ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸಬೇಕಿತ್ತು. ಆದರೆ ಅವರು ರಾಜಕೀಯ ಕಡೆಗೆ ಹೆಚ್ಚು ಗಮನ ನೀಡುತ್ತಿರುವುದರಿಂದ ಉಪೇಂದ್ರ ಬದಲಿಗೆ ಶಿವಣ್ಣ ಈ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. 
ಈ ಎಲ್ಲಾ ಚಿತ್ರದ ಯೋಜನೆಗಳು 2019ರೊಳಗೆ ಮುಕ್ತಾಯವಾಗಲಿದ್ದು ನಂತರದ ದಿನಗಳಲ್ಲಿ ಒಳ್ಳೆಯ ಕಥೆ ಇರುವ ಚಿತ್ರಗಳಿಗೆ ಮಾತ್ರ ಶಿವಣ್ಣ ಅಂಟಿಕೊಳ್ಳಲಿದ್ದಾರೆ. 55 ವರ್ಷವಾಗಿರುವುದರಿಂದ ನನ್ನ ಮೇಲೆ ಹೆಚ್ಚು ಒತ್ತಡ ಹಾಕಿಕೊಳ್ಳಲು ಇಷ್ಟಪಡುವುದಿಲ್ಲ. ನನ್ನ ಚೈತನ್ಯವನ್ನು ಹಾಗೇ ಉಳಿಸಿಕೊಳ್ಳುತ್ತೇನೆ. ಆಗ ಒಳ್ಳೆಯ ಕಥೆ ಇರುವ ಒಂದೋ ಎರಡೋ ಚಿತ್ರಗಳಲ್ಲಿ ಮಾತ್ರ ಅಭಿನಯಿಸುವುದಾಗಿ ಶಿವಣ್ಣ ಹೇಳಿಕೊಂಡಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.