ಸಿನಿಮಾ ಸುದ್ದಿ

ಹೌರಾ ಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಕಿಶೋರ್

: ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗುತ್ತಿರುವ ಲೋಹಿತ್ ಎಂ ನಿರ್ದೇಶನದ ಹೌರಾ ಬ್ರಿಡ್ಜ್ ನಲ್ಲಿ ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ...

ಹೌರಾ ಬ್ರಿಡ್ಜ್ ನಲ್ಲಿ ಪೊಲೀಸ್ ಅಧಿಕಾರಿಯಾಗಿ ನಟ ಕಿಶೋರ್
ಕಿಶೋರ್
Published On :
ಬೆಂಗಳೂರು: ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗುತ್ತಿರುವ ಲೋಹಿತ್ ಎಂ ನಿರ್ದೇಶನದ ಹೌರಾ ಬ್ರಿಡ್ಜ್  ನಲ್ಲಿ  ನಟ ಕಿಶೋರ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ತಮಿಳಿನ ವೆಟ್ರಿಮಾರ್ ನಿರ್ದೇಶನದ ವಾದಾ ಚೆನ್ನೈ ಸಿನಿಮಾ ಪೂರ್ಣಗೊಳಿಸಿರುವ ಕಿಶೋರ್ ಹೌರಾ ಬ್ರಿಡ್ಜ್ ಗಾಗಿ ಖಾಕಿ ಧರಿಸಿದ್ದಾರೆ. ಈ ಸಿನಿಮಾದಲ್ಲಿ ಕೊಲ್ಕೋತಾ ಮೂಲದ ಪೊಲೀಸ್ ಅಧಿಕಾರಿಯಾಗಿ ಬಂಗಾಳಿ ಭಾಷೆಯಲ್ಲಿ ಕೆಲವೊಂದು ಡೈಲಾಗ್ ಹೇಳಲಿದ್ದಾರೆ.
ಮೊದಲ ಬಾರಿಗೆ ಪ್ರಿಯಾಂಕಾ ಉಪೇಂದ್ರ ಅವರ ಜೊತೆ ಕಿಶೋರ್ ನಟಿಸುತ್ತಿದ್ದಾರೆ. ಸಿನಿಮಾ ಕಥೆ ಕೇಳಿ ಪಾತ್ರವನ್ನು ಮೆಚ್ಚಿದ್ದಾಗಿ  ಕಿಶೋರ್ ಹೇಳಿದ್ದಾರೆ. ವೆಟ್ರಿಮಾರನ್ ಗಾಗಿಗಡ್ಡ ಬಿಟ್ಟಿದ್ದ ಕಿಶೋರ್ ಗೆ ಅದನ್ನು ತೆಗೆಯಲು ಮನಸ್ಸಿಲ್ಲ.
ವಿಲ್ಲನ್ ಮತ್ತು ಪೊಲೀಸ್ ಎರಡು ಪಾತ್ರಗಳನ್ನು ಸಮತೋಲನವಾಗಿ ಕಿಶೋರ್ ನಿರ್ವಹಿಸುತ್ತಾರೆ, ಹೌರಾ ಬ್ರಿಡ್ಜ್ ನಲ್ಲಿ ವಿಭಿನ್ನ ಅವಕಾಶ ನೀಡಿದೆ ಎಂದು ಹೇಳಿದ್ದಾರೆ. ಸ್ಟಾರ್ ನಟರುಗಳನು ಅಭಿನಯಿಸಿರುವ ಸಿನಿಮಾಗಳಲ್ಲಿ ಮಾತ್ರ ನಾಯಕನ ಎದುರು ವಿಲ್ಲನ್ ಗೆ ಮಹತ್ವ ಎಂಬಂತಿದೆ, ವೆಟ್ರಿಮಾರನ್ ನಲ್ಲಿ ವಿವಿಧ ಪಾತ್ರಗಳಲ್ಲಿ ನಟಿಸಿದ್ದೇನೆ. ಅದೊಂದು ವಿಭಿನ್ನ ಪಾತ್ರ ಎಂದು ಹೇಳಿದ್ದಾರೆ.
ನವೆಂಬರ್1 ಕ್ಕೆ ಕಿಶೋರ್ ನಟನೆಯ ಸಿನಿಮಾ ಪೂರ್ಣಗೊಳ್ಳಲಿದ್ದು,ನಂತರ ತಮಿಳು ಸಿನಿಮಾದಲ್ಲಿ ನಟಿಸಲಿದ್ದಾರೆ, ಇದಾದ ನಂತರ ಅವರು ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ಅದರಲ್ಲೂ ಕೂಡ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ನನ್ನ ಪ್ರಕಾರ ಎಂಬುದು ಸಿನಿಮಾ ಟೈಟಲ್ ಆಗಿದ್ದು ವಿನಯ್ ನಿರ್ದೇಶನವಿದೆ, ಇನ್ನೂ ಸತ್ತಾಯ್- ಭಾಗ2 ಸಿನಿಮಾ ಶೂಟಿಂಗ್ ಶೀಘ್ರವೇ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.