ಸಿನಿಮಾ ಸುದ್ದಿ

ಕೊಲ್ಕೊತಾದ ಅಪರೂಪದ ಸ್ಥಳಗಳಲ್ಲಿ ಹೌರಾ ಬ್ರಿಡ್ಜ್ ಶೂಟಿಂಗ್!

ಮಮ್ಮಿ ಸೇವ್ ಮಿ ಎಂಬ ಹಾರರ್ -ಥ್ರಿಲ್ಲರ್ ಸಿನಿಮಾ ನೀಡಿದ ಲೋಹಿತ್ ಎಚ್ ತಮ್ಮ ಎರಡನೇ ಸಿನಿಮಾ ಹೌರಾ ಬ್ರಿಡ್ಜ್ ಮೂಲಕ ...

ಕೊಲ್ಕೊತಾದ ಅಪರೂಪದ ಸ್ಥಳಗಳಲ್ಲಿ ಹೌರಾ ಬ್ರಿಡ್ಜ್ ಶೂಟಿಂಗ್!
ಹೌರಾ ಬ್ರಿಡ್ಜ್ ಸಿನಿಮಾ ಸ್ಟಿಲ್
Published On :
ಬೆಂಗಳೂರು: ಮಮ್ಮಿ ಸೇವ್ ಮಿ ಎಂಬ ಹಾರರ್ -ಥ್ರಿಲ್ಲರ್ ಸಿನಿಮಾ ನೀಡಿದ ಲೋಹಿತ್ ಎಚ್ ತಮ್ಮ ಎರಡನೇ ಸಿನಿಮಾ ಹೌರಾ ಬ್ರಿಡ್ಜ್ ಮೂಲಕ ಮತ್ತೊಂದು ಥ್ರಿಲ್ಲರ್ ಸಿನಿಮಾ ನಿರ್ದೇಶಿಸುತ್ತಿದ್ದಾರೆ.
ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ನಟಿಸುತ್ತಿದ್ದಾರೆ. ಈ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾದ ಶೂಟಿಂಗ್  ಸದ್ಯ ಕೊಲ್ಕೊತಾದಲ್ಲಿ ನಡೆಯುತ್ತಿದೆ. 
ಸೆಪ್ಟಂಬರ್ ಕೊನೆಯ ವಾರದಲ್ಲಿ ಶೂಟಿಂಗ್ ಆರಂಭಿಸಿರುವ ನಿರ್ದೇಶಕರು, ಈಗಾಗಲೇ ಶೇ. 40 ರಷ್ಟು ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ, ಬಾಲಿವುಡ್ ನ ಕೆಲ ಕಲಾವಿದರು ಕೂಡೂ ಹಗಲು ಮತ್ತರ ರಾತ್ರಿ ಎನ್ನದೇ ಶೂಟಿಂಗ್ ನಲ್ಲಿ ಭಾಗಿಯಾಗಿದ್ದಾರೆ.
ಮಳೆಯ ಜೊತೆ ಶೂಟಿಂಗ್ ಆರಂಭಿಸಿದೆವು, ಹೌರೌ ಬ್ರಿಡ್ಜ್ ಮೇಲೆ ಸುಮಾರು 150 ಕಿರಿಯ ಕಲಾವಿದರೊಂದಿಗೆ ಪ್ರಿಯಾಂಕಾ ಉಪೇಂದ್ರ ಇರುವ ಸನ್ನಿವೇಶವನ್ನು ಚಿತ್ರೀಕರಿಸಿದ್ದೇವೆ, ಸೌತ್ ಪಾರ್ಕ್ ನ ಸ್ಮಶಾನದ ಅಪರೂಪದ ಸ್ಥಳದಲ್ಲಿ ಶೂಟಿಂಗ್ ಮಾಡಿರುವುದು ತುಂಬಾ ಕುತೂಹಲ ಮೂಡಿಸಿದೆ ಎಂದು ನಿರ್ದೇಶಕ ಲೋಹಿತ್ ಹೇಳಿದ್ದಾರೆ.
ಹೌರಾ ಬ್ರಿಡ್ಜ್ ಮೇಲೆ ಶೂಟಿಂಗ್ ಆಗುತ್ತಿರುವ ಮೊದಲ ಭಾರತೀಯ ಸಿನಿಮಾ ಇದಾಗಿದೆ, ಸತ್ಯಜಿತ್ ರೇ ಅವರ ಪುತ್ರ ಸಂದೀಪ್ ರೈ ಮತ್ತು ಅಮಿತಾಬ್ ಬಚ್ಚನ್ ಅವರ T3n ಸಿನಿಮಾ ಶೂಟಿಂಗ್ ಗಳು ನಡೆದಿದ್ದವು. ಇದು ನಿಯಮಿತ ಸ್ಮಶಾನವಲ್ಲ, ಇದರ ಹಿಂದೆ ಸುಮಾರು 215 ವರ್ಷಗಳ ಇತಿಹಾಸವಿದೆ, ಮೊದಲು ಇದನ್ನು ಬ್ರಿಟಿಷರು ನಿರ್ವಹಿಸುತ್ತಿದ್ದರು ಎಂದು ಕೇಳಲ್ಪಟ್ಟಿದ್ದೇನೆ ಎಂದು ತಿಳಿಸಿದ್ದಾರೆ.
ಈ ಜಾಗದಲ್ಲಿ ನಾವು ಏರಿಯಲ್ ಶಾಟ್ ತೆಗೆದಿದ್ದೇವೆ, ಇದು ಕೂಡ ಮೊದಲ ಪ್ರಯತ್ನ. ಇದಕ್ಕಾಗಿ ನಾವು ಅನುಮತಿ ಪಡೆದಿದ್ದು ಉತ್ತಮವಾಗಿ ಮೂಡಿ ಬಂದಿದೆ. ಈ ಸಿನಿಮಾದಲ್ಲಿ ಪ್ರಿಯಾಂಕಾ ಪುತ್ರಿ ಐಶ್ವರ್ಯಾ ಬಾಲಿವುಡ್ ನಟ ಸಂಜೀವ್ ಜೈಸ್ವಾಲ್ ಸೇರಿದಂತೆ ಹಲವರು ನಟಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.