ಸಿನಿಮಾ ಸುದ್ದಿ

ಕಿರುತೆರೆ ನಟಿಯಾಗಿದ್ದರು ಸ್ಟ್ರೀಟ್ ಕ್ಯಾಂಟಿನ್ ಓಪನ್ ಮಾಡಿದ್ದು ಯಾಕೆ ಗೊತ್ತಾ?

ಕಿರುತೆರೆ ನಟಿಯೊಬ್ಬರು ಮಗನ ಶಿಕ್ಷಣಕ್ಕಾಗಿ ಕ್ಯಾಂಟೀನ್ ಓಪನ್ ಮಾಡಿ ಈಗ ದೇಶಾದ್ಯಂತ ಸುದ್ದಿಯಾಗಿದ್ದಾರೆ...

ಕಿರುತೆರೆ ನಟಿಯಾಗಿದ್ದರು ಸ್ಟ್ರೀಟ್ ಕ್ಯಾಂಟಿನ್ ಓಪನ್ ಮಾಡಿದ್ದು ಯಾಕೆ ಗೊತ್ತಾ?
ಕವಿತಾ ಲಕ್ಷ್ಮೀ
Published On :
ತಿರುವನಂತಪುರಂ: ಕಿರುತೆರೆ ನಟಿಯೊಬ್ಬರು ಮಗನ ಶಿಕ್ಷಣಕ್ಕಾಗಿ ಕ್ಯಾಂಟೀನ್ ಓಪನ್ ಮಾಡಿ ಈಗ ದೇಶಾದ್ಯಂತ ಸುದ್ದಿಯಾಗಿದ್ದಾರೆ. 
ಸಿನಿಮಾ, ಧಾರಾವಾಹಿ ನಟ-ನಟಿಯರೆಂದರೇ ವೈಭವಯುತ, ಆಡಂಬರದ ಜೀವನ ನಡೆಸುತ್ತಾರೆ ಎಂಬ ಮಾತಿಗೆ ಈ ನಟಿ ತದ್ವಿರುದ್ಧವಾಗಿದ್ದಾರೆ. ಮಲೆಯಾಳಂ ಧಾರವಾಹಿಗಳಲ್ಲಿ ಅಭಿನಯಿಸುತ್ತಿರುವ ಕವಿತಾ ಲಕ್ಷ್ಮೀ ಎಂಬುವರಿಗೆ ಜೀವನದಲ್ಲಿ ಈಗ ಆರ್ಥಿಕ ಸಂಕಷ್ಟ ಎದುರಾಗಿದ್ದು ಇದರಿಂದಾಗಿ ಮೆಟ್ಟಿನಿಲ್ಲಲು ಹೈವೇ ಪಕ್ಕದಲ್ಲಿ ಕ್ಯಾಂಟಿನ್ ಆರಂಭಿಸಿದ್ದಾರೆ. 
ಬೆಳಗಿನ ಸಮಯದಲ್ಲಿ ಧಾರವಾಹಿಗಳಲ್ಲಿ ಅಭಿನಯಿಸುತ್ತಿರುವ ಕವಿತಾ ಲಕ್ಷ್ಮಿ ಅವರು ಸಂಜೆಯಾದರೆ ಸಾಕು ಶೂಟಿಂಗ್ ಮುಗಿಸಿಕೊಂಡು ತಿರುವನಂತಪುರದ ಹೈವೇ ಪಕ್ಕದಲ್ಲಿ ದೋಸೆ ಕ್ಯಾಂಟಿನ್ ನಲ್ಲಿ ಕೆಲಸ ಆರಂಭಿಸುತ್ತಾರೆ. 
13 ವರ್ಷಗಳ ಹಿಂದೆಯೇ ಗಂಡನಿಗೆ ವಿಚ್ಛೇದನ ನೀಡಿದ್ದ ಕವಿತಾ ಲಕ್ಷ್ಮೀ ಅವರು ಇಬ್ಬರು ಮಕ್ಕಳ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ತಮ್ಮ ಮಕ್ಕಳಿಗೆ ವಿದೇಶದಲ್ಲಿ ಶಿಕ್ಷಣ ಕೊಡಿಸುವ ಸಲುವಾಗಿ ಅವರು ಸ್ಟ್ರೀಟ್ ಕ್ಯಾಂಟಿನ್ ಆರಂಭಿಸಿದ್ದು ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕವಿತಾರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.