ಸಿನಿಮಾ ಸುದ್ದಿ

ಕ್ರಿಸ್ ಮಸ್ ಗೆ ತೆರೆ ಕಾಣಲಿದೆ ಗಣೇಶ್-ರಶ್ಮಿಕಾ ಮಂದಣ್ಣ ನಟನೆಯ ಚಮಕ್

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ತಮಕ್ ಸಿನಿಮಾ ಶೂಟಿಂಗ್ ಮುಗಿದಿದ್ದು, ಕೇವಲ ಒಂದು ಫೈಟಿಂಗ್ ಸೀನ್ ಮಾತ್ರ ಬಾಕಿ ಉಳಿದಿದೆ. ...

ಕ್ರಿಸ್ ಮಸ್ ಗೆ ತೆರೆ ಕಾಣಲಿದೆ ಗಣೇಶ್-ರಶ್ಮಿಕಾ ಮಂದಣ್ಣ ನಟನೆಯ ಚಮಕ್
ಗಣೇಶ್ ಮತ್ತು ರಶ್ಮಿಕಾ ಮಂದಣ್ಣ
Published On :
ಬೆಂಗಳೂರು: ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ತಮಕ್ ಸಿನಿಮಾ ಶೂಟಿಂಗ್ ಮುಗಿದಿದ್ದು, ಕೇವಲ ಒಂದು ಫೈಟಿಂಗ್ ಸೀನ್ ಮಾತ್ರ ಬಾಕಿ ಉಳಿದಿದೆ. ಇದೇ ವೇಳೆ ಹಾಡೊಂದರ ಚಿತ್ರೀಕರಣ ಮುಗಿಸಿ ಉತ್ತರ ಕರ್ನಾಟಕದಿಂದ ಚಿತ್ರತಂಡ ವಾಪಾಸಾಗಿದೆ.
ರೊಮ್ಯಾಂಟಿಕ್ ಸಾಂಗ್ ಆಗಿದ್ದು, ಅದ್ಭುತ ಸ್ಥಳಗಳಲ್ಲಿ ಶೂಟಿಂಗ್ ನಡೆದಿದೆ, ಕಾರವಾರ ಸಮೀಪದ ಕರಾವಳಿ ತೀರದಲ್ಲಿ ಚಿತ್ರೀಕರಣ ಮಾಡಿದ್ದಾಗಿ ಸುನೀಲ್ ಹೇಳಿದ್ದಾರೆ. ಶೂಟಿಂಗ್ ಫೋಟೋಗಳನ್ನು ನಿರ್ದೇಶಕ ಸುನೀಲ್ ಶೇರ್ ಮಾಡಿದ್ದಾರೆ.
ತಿಲಮತಿ ಎಂಬ ಸ್ಥಳದಲ್ಲಿ  ಗಣೇಶ್ ಸ್ಕೂಬಾ ಡೈವಿಂಗ್ ಮಾಡಿದ್ದಾರೆ, ಕಪ್ಪು ಸಮುದ್ರ ಮತ್ತು ಮಾವಿನ ತೋಪುಗಳಲ್ಲಿ ಶೂಟಿಂಗ್ ಮಾಡಿದ್ದಾರೆ., ಅರ್ಜುನ್ ಲೂಯಿಸ್  ಸಾಹಿತ್ಯ ಬರೆದಿದ್ದು, ಸುಪ್ರಿಯಾ ಲೋಹಿತ್ ಮತ್ತು ಅಭಿನಂದನ್ ಹಿನ್ನೆಲೆ ಗಾಯನ ನೀಡಿದ್ದಾರೆ.
ಗಣೇಶ್ ಮೊದಲ ಬಾರಿಗೆ ಸ್ತ್ರೀ ರೋಗ ತಜ್ಞನ ಪಾತ್ರದಲ್ಲಿ ನಟಿಸಿದ್ದು, ಕ್ರಿಸ್ ಮಸ್ ಗೆ ರಿಲೀಸ್ ಮಾಡಲು ಸುನೀಲ್ ನಿರ್ದರಿಸಿದ್ದಾರೆ. ಟಿ.ಆರ್ ಚಂದ್ರಶೇಖರ್ ನಿರ್ಮಾಪಕರಾಗಿದ್ದು, ಸಂತೋಷ್ ರೈ ಪಾತಾಜೆ ಸಿನಿಮಾಟೋಗ್ರಫಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.